Subscribe to Gizbot

ಟೆಕ್ ಬೆರಿ ವಾಚ್ ಫೋನ್: ಮೊಬೈಲನ್ನು ಕೈಗೆ ಕಟ್ಟಿಕೊಳ್ಳಿ

Posted By: Super

ಟೆಕ್ ಬೆರಿ ವಾಚ್ ಫೋನ್: ಮೊಬೈಲನ್ನು ಕೈಗೆ ಕಟ್ಟಿಕೊಳ್ಳಿ
ಜೇಬಿನಲ್ಲಿ ಮೊಬೈಲ್ ಇಟ್ಟುಕೊಳ್ಳೋದು ನಿಮಗಿಷ್ಟವಾಗದಿರಬಹುದು. ಹೇಗೋ ಕೈಗೆ ವಾಚ್ ಕಟ್ಟುತ್ತಿಲ್ಲ. ವಾಚಿನಂತೆ ಕಟ್ಟಿಕೊಳ್ಳುವ ಮೊಬೈಲ್ ಫೋನ್ ಬಂದಿದ್ದರೆ ಚೆನ್ನಾಗಿರುತ್ತಿತ್ತು ಅಲ್ವೆ? ಇಂತಹ ವ್ರಿಸ್ಟ್ ಮೊಬೈಲ್ ಭಾರತಕ್ಕೆ ಬಂದಿದೆ. ಇದು ಭಾರತದ ಮಾರುಕಟ್ಟೆಗೆ ಹೊಸ ಅನುಭವ.

ಕೈಗಡಿಯಾರದಂತೆ ಕೈಗೆ ಕಟ್ಟಿಕೊಳ್ಳಬಹುದಾದ ಈ ಮೊಬೈಲ್ ಫೋನ್ ಹೆಸರು "ಟೆಕ್ ಬೆರಿ ಟಿಬಿ 007". ನೋಡಲು ನಿಮ್ಮ ಹಳೆಯ ಟೈಟಾನ್, ರೊಲೆಕ್ಷ್ ವಾಚಿನಂತೆ ಕಾಣುತ್ತದೆ. ಆದರೆ ವ್ಯತ್ಯಾಸವೆಂದರೆ ಇದರಲ್ಲಿ ಸಮಯ ಮಾತ್ರವಲ್ಲದೇ ಕರೆ ಮಾಡಬಹುದು. ಎಸ್ಎಂಎಸ್ ಮಾಡಬಹುದು. ಹಾಡು ಕೇಳಬಹುದು. ಹೀಗಾಗಿ ಇದು ಕೈಗಡಿಯಾರವಲ್ಲ. ಕೈಮೊಬೈಲ್.

ನೂತನ ಟೆಕ್ ಬೆರಿ ಟಿಬಿ 007 ಫುಲ್ ಸ್ಕ್ರೀನ್ 1.5 ಇಂಚಿನ ಡಿಸ್ ಪ್ಲೇ ಹೊಂದಿದೆ. ಇದಕ್ಕೆ ಸ್ಟಾಂಡರ್ಡ್ ಲಿಯಾನ್ ಬ್ಯಾಟರಿ ಅಳವಡಿಸಲಾಗಿದೆ. ಇದರ ಸ್ಟಾಂಡ್ ಬೈ ಬ್ಯಾಟರಿ ಬಾಳಿಕೆ ಎರಡು ದಿನ ಮತ್ತು ಟಾಕ್ ಟೈಂ ಬ್ಯಾಟರಿ ಬಾಳಿಕೆ ಒಂದುವರೆ ಗಂಟೆಯಾಗಿದೆ. ಈ ವಾಚ್ ಮೊಬೈಲಿನಲ್ಲಿ ಮ್ಯೂಸಿಕ್ ಪ್ಲೇಯರ್, ಎಫ್ಎಫ್ ರೆಡಿಯೋ ಮುಂತಾದ ಸಣ್ಣಪುಟ್ಟ ಮಲ್ಟಿಮೀಡಿಯಾ ಫೀಚರ್ ಗಳಿವೆ. ಇದಕ್ಕೆ ಹೆಡ್ ಫೋನ್ ಕೂಡ ಕನೆಕ್ಟ್ ಮಾಡಬಹುದಾಗಿದೆ!

ವಿಶೇಷತೆಗಳು
* ಫುಲ್ ಸ್ಕ್ರೀನ್ ಡಿಸ್ ಪ್ಲೇ
* 1.3 ಮೆಗಾ ಪಿಕ್ಸೆಲ್ ಕ್ಯಾಮರಾ
* ವಿಡಿಯೋ ರೆಕಾರ್ಡಿಂಗ್ ಮತ್ತು ಪ್ಲೇ ಬ್ಯಾಕ್
* ಮ್ಯೂಸಿಕ್ ಪ್ಲೇಉರ್
* ಎಫ್ಎಂ ರೆಡಿಯೋ

ಈ ವ್ರಿಸ್ಟ್ ಮೊಬೈಲ್ ಸ್ಕ್ರೀನ್ ಗುಣಮಟ್ಟ ಅತ್ಯಧಿಕ ಗುಣಮಟ್ಟದಾಗಿದೆ. ಇದರಿಂದ ಸ್ಕ್ರೀನ್ ಸಣ್ಣದಾಗಿದ್ದರೂ ಮಾಹಿತಿಗಳನ್ನು ನಿಖರವಾಗಿ ನೋಡಬಹುದಂತೆ! ಸದ್ಯ ಈ ವ್ರಿಸ್ಟ್ ಮೊಬೈಲನ್ನು ದೇಶದ ಕೆಲವು ಶಾಪ್ ಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಇದರ ದರ ಸುಮಾರು 9 ಸಾವಿರ ರು.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot