Subscribe to Gizbot

ಚೆಂದಕ್ಕಿಂತ ಚೆಂದ ಹೊಸ ಚಾಚಾ: ಎಚ್ ಟಿ ಸಿ ಉವಾಚ!

Posted By: Staff

ಚೆಂದಕ್ಕಿಂತ ಚೆಂದ ಹೊಸ ಚಾಚಾ: ಎಚ್ ಟಿ ಸಿ ಉವಾಚ!
ಬೆಂಗಳೂರು, ಜು. 24: ಸ್ಮಾರ್ಟ್ ಫೋನ್ ಗಳಲ್ಲಿ ಅತ್ಯಂತ ಕಡಿಮೆ ದರದ ಫೋನ್ ಗಳನ್ನು ಬಳಕೆಗೆ ತಂದ ಕೀರ್ತಿ ಎಚ್ ಟಿ ಸಿ ಗೆ ಸಲ್ಲುತ್ತದೆ. ಸಾಲ್ಸಾ ಬಿಡುಗಡೆಯ ನಂತರ 'ಡೆಡಿಕೇಟೆಡ್ ಫೇಸ್ ಬುಕ್ ಬಟನ್' ಮೂಲಕ ಈ ಹೊಸ 'ಚಾಚಾ' 2 ನೆಯ ಎಂಟ್ರಿ ಕೊಡುತ್ತಿದೆ.


ಟಚ್ & ಟೈಪ್ ಮಾದರಿ, 2.6 ಇಂಚ್ ಕೆಪಾಕ್ಟಿವ್ ಟಚ್ ಸ್ಕ್ರೀನ್ ಹೊಂದಿರುವ ಇದು QWERTY ಕೀ ಪ್ಯಾಡ್ ಕೂಡ ಹೊಂದಿದೆ. ಡೆಡಿಕೇಟೆಟ್ ಫೇಸ್ ಬುಕ್ ಅಲ್ಲದೇ ಸ್ಮಾರ್ಟ್ ಫೋನ್ ಗಳಲ್ಲಿರುವ ವಿಶೇಷ ಮಲ್ಟಿಮೀಡಿಯಾ ಕೂಡ ಇದರಲ್ಲಿರುವುದು ಹೆಚ್ಚು ವಿಶೇಷ. ಮ್ಯೂಸಿಕ್ ಪ್ಲೇ ಬ್ಯಾಕ್ ಗೆ MP3, WMV, WAV ಸಹಕಾರ ಇದು ಹೊಂದಿದೆ.


ಹೈ ಡೆಪನಿಷನ್ ಪವರ್ ಫುಲ್ ಕ್ಯಾಮೆರಾ ಹಾಗೂ ವಿಡಿಯೋ ರೆಕಾರ್ಡಿಂಗ್ ಹೊಂದಿರುವ ಇದು ಬ್ಲೂ ಟೂಥ್, Wi-Fi, EDGE, GPRS ಮತ್ತು 3G ಕನೆಕ್ಟಿವಿಟಿ ಸೌಲಭ್ಯ ಅಳವಡಿಸಲ್ಪಟ್ಟಿದೆ. ಚೆಂದದ ಆಕಾರ ಹೊಂದಿರುವ ಈ ಹೊಸ ಚಾಚಾ ನೋಡಿದವರನ್ನು ತಕ್ಷಣ ಮೈಮರೆಸುವಷ್ಟು ಚೆನ್ನಾಗಿದೆ.

ಇದರ ವಿಶೇಷತೆಗಳು:
* ಡೆಡಿಕೇಟೆಡ್ ಫೇಸ್ ಬುಕ್ ಬಟನ್
* ಆಂಡ್ರಾಯ್ಡ್ 2.3 OS
* Wi-Fi,
* EDGE, GPRS & 3G data\3G-10 Mbps
* ವಿಸ್ತರಿಸಬಹುದಾದ 32GB ಮೆಮೊರಿ
* 800 MHz ಪ್ರೊಸೆಸರ್
* ಜಾವಾ

ವಿಶೇಷತೆಗಳು ಸಾಕಷ್ಟು ಇವೆ ಅಲ್ಲವೇ? ಇನ್ನು ಇದರ ದರ ರು. 15,500. ಬರಲಿರುವ ಈ ಸ್ಮಾರ್ಟ್ ಫೋನ್ ಮಧ್ಯಮ ತರಗತಿಗೆ ಹೊಂದುವ ಮಿಡ್ ರೇಂಜ್ಡ್ ಮೊಬೈಲ್ ಆಗಿದೆ. ಇದು ಸಾಕಷ್ಟು ಮಾರಾಟ ಆಗುವುದರಲ್ಲಿ ಯಾರಿಗೂ ಸಂದೇಹವಿಲ್ಲ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot