ಈ ಕಪ್ಪುಸುಂದರಿಯನ್ನು ನೀವು ಅಪ್ಪಿಕೊಳ್ಳುವಿರಾ?

By Super
|
ಈ ಕಪ್ಪುಸುಂದರಿಯನ್ನು ನೀವು ಅಪ್ಪಿಕೊಳ್ಳುವಿರಾ?
ಬೆಂಗಳೂರು, ಜು. 24: ಈ ಕಪ್ಪು ಸುಂದರಿ ಬೇರಾರೂ ಅಲ್ಲ, ಎಲ್ ಜಿ ಕಂಪೆನಿಯ ಹೊಸ ಮೊಬೈಲ್. ಎಲ್ ಜಿ ಹೊಸ ಅತ್ಯಾಧುನಿಕ ಸ್ಮಾರ್ಟ್ ಫೋನನ್ನು ಬಿಡುಗಡೆ ಮಾಡಿತ್ತಿದೆ, ಅದೇ 'ಆಪ್ಟಿಮಸ್ ಬ್ಲಾಕ್' ಎಂಬ ಕಪ್ಪುಸುಂದರಿಯಂತಿರುವ ಕಪ್ಪುಬಣ್ಣದ ಮೊಬೈಲ್. ದೊಡ್ಡ 4 ಇಂಚ್ ಗಳ ಟಚ್ ಸ್ಕ್ರೀನ್ ಹೊಂದಿರುವ ಈ ಮೊಬೈಲ್ ಶೇ 50% ಇಂಧನ ಉಳಿಸುವ NOVA ಡಿಸ್ ಪ್ಲೇ ಹೊಂದಿದೆ. ಇನ್ ಬಿಲ್ಟ್ ಮೈಕ್ರೋ ಫೋನ್ & ಸ್ಪೀಕರ್ಸ್ ಇದರ ಸೌಂಧರ್ಯವನ್ನು ಇಮ್ಮಡಿಗೊಳಿಸಿವೆ.

ಇದರಲ್ಲಿ ಸಾಕಷ್ಟು ಮಹತ್ವದ ಸೌಲಭ್ಯಗಳಿವೆ. ಅವು:
* ಆಂಡ್ರಾಯ್ಡ್ 2.2 ಫ್ರೋಯೋ, ಸದ್ಯದಲ್ಲೇ (ಜಿಂಜರ್ ಬ್ರೆಡ್) 2.3ಗೆ ಅಪ್ ಗ್ರೇಡ್ ಆಗಲಿರುವ OS
* 2 MP ಎದುರುಗಡೆ ಕ್ಯಾಮೆರಾ
* ಅತಿ ಹಗುರವಾದ 3.84 ಔನ್ಸ್ ಭಾರ
* ಆಪ್ಟಿಮಸ್ UI 2.0, ನೇರ ಈಮೇಲ್ ಎಕ್ಸೆಸ್
* ಗೆಸ್ಚರ್ ರೆಕಗ್ನೈಜೇಶನ್
* ಡ್ಯುಯಲ್ ಕೋರ್ ಪ್ರೊಸೆಸರ್
* 1500 mAh ಪವರ್ ಫುಲ್ ಬ್ಯಾಟರಿ

ಅಬ್ಬಬ್ಬಾ ಇಷ್ಟೊಂದು ವಿಶೇಷತೆಗಳೇ ಎಂಬ ನಿಮ್ಮ ಉದ್ಗಾರ ಸಹಜ. ಆದರೆ 'ಹೌದು, ಇದೆ' ಎಂಬುದಷ್ಟೇ ಉತ್ತರ. ಸದ್ಯದಲ್ಲೇ ಈ ಕಪ್ಪುಸುಂದರಿ ಭಾರತಕ್ಕೆ ಆಗಮಿಸಲಿದ್ದಾಳೆ. ಅಪ್ಪಿಕೊಳ್ಳಲು ನೀವು ರೆಡಿ ತಾನೇ!

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X