Subscribe to Gizbot

ಸ್ಮಾರ್ಟ್ ಫೋನುಗಳಿಗೆ ನಾನೇ ರಾಜ ಮಹಾರಾಜ:ನೋಕಿಯಾ

Posted By: Super

ಸ್ಮಾರ್ಟ್ ಫೋನುಗಳಿಗೆ ನಾನೇ ರಾಜ ಮಹಾರಾಜ:ನೋಕಿಯಾ
ಬೆಂಗಳೂರು, ಜು. 24: ಮೊಬೈಲ್ ಸಾಮ್ರಾಜ್ಯದಲ್ಲಿ ನೋಕಿಯಾ ರಾಜನಂತಿರುವ ಕಂಪೆನಿ. ಅದರಲ್ಲೂ ನೋಕಿಯಾ ಸ್ಮಾರ್ಟ್ ಫೋನ್, ಈ ರಾಜರಿಗೆಲ್ಲ ಮಹಾರಾಜನಂತೆ ಮೆರೆಯುತ್ತಿದೆ.

ಸ್ಮಾರ್ಟ್ ಫೋನ್ ಮಹಾಕ್ರಾಂತಿಯನ್ನು ಜಗತ್ತಿಗೆ ತಂದಿರುವ ನೋಕಿಯಾ ಇವುಗಳಲ್ಲಿ ಗೇಮಿಂಗ್ ಆಧಾರಿತ ನೋಕಿಯಾ X7 ಹಾಗೂ ನೋಕಿಯಾ E6 ಎಂಬ ಎರಡು ಹೊಸ ಮೊಬೈಲ್ ತಯಾರಿಸಿದ್ದು ಈಗಾಗಲೇ E6 ಬಿಡುಗಡೆ ಮಾಡಿ ಹೊಸ ದಾಖಲೆ ಬರೆದು ಅಚ್ಚರಿ ಮೂಡಿಸಿದೆ.

E6 ಮೊಬೈಲ್ ಟಚ್ & ಟೈಪ್, ಟಚ್ ಸ್ಕ್ರೀನ್ ಮೊಬೈಲ್ ಆಗಿರುವುದಲ್ಲದೇ ಸಿಂಬಿಯನ್ ಅಣ್ಣಾ OS ಮೂಲಕ ಮೈಲೀಗಲ್ಲು ಸ್ಥಾಪಿಸಿ ಸಾಕಷ್ಟು ಅತ್ಯಾಧುನಿಕವಾಗಿದೆ. ನೋಕಿಯಾ ನಿರ್ದೇಶಕ (ದಕ್ಷಿಣ ಭಾರತ) ಶ್ರೀ ಶ್ರೀಧರ್ ಪ್ರಕಾರ, ಬಿಡುಗಡೆಯಾಗಿರುವ ಹೊಸ ನೋಕಿಯಾ ಮೊಬೈಲ್ ಗಳ ಮೂಲಕ ಬೃಹತ್ ಪ್ರಮಾಣದಲ್ಲಿ ವ್ಯಾಪಾರ ಅಭಿವೃದ್ಧಿ ಹೊಂದಿದೆ. ಅದರಲ್ಲೂ ಇತ್ತೀಚಿನ ಜನರೇಶನ್ ನಲ್ಲಿ ಗೇಮಿಂಗ್ ಕ್ರೇಜ್ ಹೆಚ್ಚುತ್ತಿದ್ದು ಇದು ನೋಕಿಯಾದ ಹೊಸ ಸ್ಮಾರ್ಟ್ ಫೋನ್ ಗಳಿಗೆ ವರದಾನವಾಗಿದೆ.

ಮೊಬೈಲ್ ಗಳಲ್ಲಿ ಗೇಮ್ ಇರುವುದು ಜನರಿಗೆ ಎಷ್ಟು ಇಷ್ಟವಾಗಿದೆ ಎಂದರೆ ಅವರು ತಮ್ಮ ಜೀಬಿನಲ್ಲೇ " ಪ್ಲೇ ಗ್ರೌಂಡ್ " ಇದ್ದಂತೆ ಖುಷಿಪಡುತ್ತಿದ್ದಾರೆ. ದೊಡ್ಡ 4 ಇಂಚ್ ಗಳ AMOLED ಟಚ್ ಸ್ಕ್ರೀನ್ ಇರುವುದು ಈ ಗೇಮಿಂಗ್ ಗಳನ್ನು ಎಂಜಾಯ್ ಮಾಡಲು ಮತ್ತಷ್ಟು ಅನುಕೂಲ ಮಾಡಿಕೊಟ್ಟಿದೆ.
ನೋಕಿಯಾ E6 ಹಾಗೂ ನೋಕಿಯಾ X7 ಈ 2 ಹೊಸ ಮೊಬೈಲ್ ಗಳ ಮೂಲಕ ಈಗ ಸಾಕಷ್ಟು ಎತ್ತರದಲ್ಲಿ ಹಾರಾಡುತ್ತಿರುವ ನೋಕಿಯಾ ಮಾರಾಟದ ಗಾಳೀಪಟ ಮುಂದೆ ಬರಲಿರುವ ಆಂಡ್ರಾಯ್ಡ್ & ವಿಂಡೋಸ್ ಫೋನ್ ಮೂಲಕ ಮುಗಿಲನ್ನು ಮುಟ್ಟಲಿದೆ.

ಅಲ್ಲಿಗೆ, " ಸರ್ವರೋಗಕ್ಕೂ ಸಾರಾಯಿನೇ ಮದ್ದು! " ಎಂಬ ನಾಣ್ಣುಡಿಯಂತೆ ಸರ್ವಕಾಲಕ್ಕೂ " ನೋಕಿಯಾಗೆ ನೋಕಿಯಾನೇ ಸಾಟಿ " ಎಂಬ ಗಾದೆ ಹುಟ್ಟಿಕೊಳ್ಳುವುದರಲ್ಲಿ ಸಂಶಯವಿಲ್ಲ ಎಂಬಂತಾಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot