ಆಲ್ಕಾಟೆಲ್ ಹೊಸ ಮಾಡೆಲ್: ಮಾಡುವುದೇ ಕಮಾಲ್!

Posted By: Staff

ಆಲ್ಕಾಟೆಲ್ ಹೊಸ ಮಾಡೆಲ್: ಮಾಡುವುದೇ ಕಮಾಲ್!
ಬೆಂಗಳೂರು, ಜು. 25: ಆಲ್ಕಾಟೆಲ್ ಮೊಬೈಲ್ ಈಗಾಗಲೇ ಮೊಬೈಲ್ ಮಾರ್ಕೆಟ್ ನಲ್ಲಿ ಸ್ಪರ್ಧೆಯಲ್ಲಿರುವ ಹೆಸರು. ಇದೀಗ ಅದು ನವೆಂಬರ್ 2011ರಲ್ಲಿ ಹೊಸ OT 906 ಮಾದರಿಯ ಟಚ್ ಸಿರೀಸ್ ಮೊಬೈಲ್ ಬಿಡುಗಡೆ ಮಾಡುತ್ತಿದೆ. ಭಾರತೀಯ ಮಾರುಕಟ್ಟೆಯಲ್ಲಿ ಟಚ್ ಸ್ಕ್ರೀನ್ ಮೊಬೈಲ್ ಗಳು ಸಾಕಷ್ಟು ಯಶಸ್ವಿಯಾಗಿರುವುದರಿಂದ ಆಲ್ಕಾಟೆಲ್ ಕೂಡ ಭಾರೀ ನಿರೀಕ್ಷೆ ಹೊಂದಿದೆ.

ಮಧ್ಯಮ ರೇಂಜ್ ಫೋನ್ ಆಗಿರುವ ಇದು ಗೂಗಲ್ ಆಂಡ್ರಾಯ್ಡ್ Os ಆಧಾರಿತವಾಗಿದ್ದು 2.8 ಇಂಚ್ ಫುಲ್ ಟಚ್ ಸ್ಕ್ರೀನ್ ಹೊಂದಿದೆ. 2 ಮೆಗಾ ಪಿಕ್ಸೆಲ್ ಕ್ಯಾಮೆರಾ, VGA ಪಾರ್ಮೆಟ್ ವಿಡಿಯೋ ರೆಕಾರ್ಡಿಂಗ್, ನಾರ್ಮಲ್ ಮಲ್ಟಿಮೀಡಿಯಾ ಸೌಲಭ್ಯಗಳನ್ನು ಹೊಂದಿದೆ. MP3, WAV, WMV ಒಳಗೊಂಡಿರುವ ಇದು, ವಿಡಿಯೋ ಫೈಲ್ಸ್ 3GP, MP4 and AVI ಪಾರ್ಮೆಟ್ಸ್ ಹೊಂದಿದೆ.

ಬ್ಲೂ ಟೂಥ್ 2.1 ಕನೆಕ್ಟಿವಿಟಿ, USB PC ಸಿಂಕ್, Wi-Fi i, GPRS & EDGE, ಅತಿ ವೇಗದ 3G ಡಾಟಾ ಟ್ರಾನ್ಸ್ಪರ್ 7.1 Mbps ಹೊಂದಿದೆ. ಆಂತರಿಕ ಮೆಮೊರಿ 200 MB, SD ಕಾರ್ಡ್ ಮೂಲಕ 32 GB ಗೆ ವಿಸ್ತರಿಸಬಹುದಾದ ಮೆಮೊರಿ ಇದೆ. ಸ್ಮಾರ್ಟ್ ಫೊನ್ ಹೊಂದಿರುವ ಎಲ್ಲಾ ಗುಣಗಳನ್ನು ಇದು ಹೊಂದಿದೆ ಎಂದು ಸ್ಥೂಲವಾಗಿ ಹೇಳಬಹುದು.

ಇದರಲ್ಲಿರುವ ಗುಣ ವಿಶೇಷತೆಗಳು ತಿಳಿದಿದ್ದರೂ ಬೆಲೆ ಇನ್ನೂ ನಿಖರವಾಗಿಲ್ಲ. ಹಾಗಾಗಿ ಸದ್ಯಕ್ಕೆ ನಿರೀಕ್ಷೆಯಲ್ಲಿ ಕಾಲ ಕಳೆಯಲೇಬೇಕು.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot