ಜಿಫೈವ್ ಮೊಬೈಲು: 20 ಸಿನಿಮಾ, ಸಾವಿರ ಗೇಮ್ಸ್!!!

By Super
|
ಜಿಫೈವ್ ಮೊಬೈಲು: 20 ಸಿನಿಮಾ, ಸಾವಿರ ಗೇಮ್ಸ್!!!
ಜಿಫೈವ್ ಗೆ ದೇಶದ ಮೊಬೈಲ್ ಕಂಪನಿಗಳಲ್ಲಿ ಮೂರನೇ ಸ್ಥಾನ. ಇದೀಗ ಜಿಫೈವ್ ನಾಲ್ಕು ಮೊಬೈಲ್ ಫೋನ್ ಗಳನ್ನು ಹೊರತಂದಿದೆ. ಇದರಲ್ಲಿ ಮೂರು ಮೊಬೈಲ್ ಗಳು ಸಿನಿಮಾ ವೀಕ್ಷಣೆಗೆ ಬೆಸ್ಟ್. ಮತ್ತೊಂದು ಮೊಬೈಲ್ ಗೇಮ್ ಪ್ರೇಮಿಗಳಿಗೆ ಸೂಕ್ತ. ಈ ಎಲ್ಲಾ ಫೋನ್ ಗಳು ಶೀಘ್ರದಲ್ಲಿ ನಿಮ್ಮ ಹತ್ತಿರದ ಮೊಬೈಲ್ ಸ್ಟೋರ್ ಗಳಲ್ಲಿ ದೊರಕಲಿದೆ.

ಇ680, ಇ650 ಮತ್ತು ಇ620 ಎಂಬ ಮೂರು ಸೆಟ್ ಗಳು ಮೂವಿ ಕಿಂಗ್ ಸೀರಿಸ್ ನಲ್ಲಿ ಹೊರಬಂದಿವೆ. ಇವುಗಳಲ್ಲಿ ಸುಮಾರು 20 ಸಣ್ಣ ಮೂವಿಗಳಿವೆ. ಆಯಾ ಪ್ರದೇಶಕ್ಕೆ ಅನುಗುಣವಾಗಿ ಪ್ರಾದೇಶಿಕ ಚಿತ್ರಗಳಿಗೆ ಕಂಪನಿ ಆದ್ಯತೆ ನೀಡುತ್ತದಂತೆ. ಜೊತೆಗೆ ಹಾಲಿವುಡ್ ಸಿನಿಮಾಗಳು ಇರಲಿವೆ. 4 ಜಿಬಿ ಮೈಕ್ರೊ ಎಸ್ ಡಿ ಮೆಮೊರಿ ಕಾರ್ಡ್ ಅಳವಡಿಸಬಹುದಾಗಿದೆ. ಜೊತೆಗೆ 20 ರಿಂಗ್ ಟೋನ್ ಮತ್ತು 5ಎಫ್ಟಿವಿ ವಿಡಿಯೊಗಳಿವೆ. ಜಿಫೈವ್ ಜಿ20 ಎಂಬುದು ಗೇಮಿಂಗ್ ಮೊಬೈಲಾಗಿದ್ದು, ಇದರಲ್ಲಿ ಒಂದು ಸಾವಿರಕ್ಕಿಂತಲೂ ಹೆಚ್ಚು ಗೇಮ್ ಲೋಡ್ ಆಗಿದೆ.

ಮೂವಿ ಕಿಂಗ್ ಇ680 ವಿಶೇಷತೆ
* ಡ್ಯೂಯಲ್ ಸಿಮ್ ಸ್ಟಾಂಡ್ ಬೈ ಆಯ್ಕೆ
* 2.2 ಇಂಚಿನ ಸಣ್ಣ ಡಿಸ್ ಪ್ಲೇ
* ಮಲ್ಟಿಮೀಡಿಯಾ
* ಹಿಂದುಗಡೆ ಸ್ಪೀಕರ್ ಗೆ ಯಮಾಹ ಆಂಪ್ಲಿಪ್ಲೇಯರ್
* ಎಫ್ಎಂ ರೆಡಿಯೋ
* ಯುನಿವರ್ಸಲ್ ಆಡಿಯೋ ಜಾಕ್
* ಸೀಮಿತ ವ್ಯಾಪ್ತಿಯ ವೈರ್ ಲೆಸ್ ಕನೆಕ್ಟಿವಿಟಿ

ಇ620 ವಿಶೇಷತೆ
* ಇ680ನಲ್ಲಿರುವ ಎಲ್ಲಾ ಫೀಚರ್ ಗಳು ಇವೆ.
* ಅನಲಾಗ್ ಟೆಲಿವಿಷನ್(ಮೊಬೈಲ್ ನಲ್ಲಿ ಟಿವಿ ಕಂಟೆಂಟ್ ನೋಡಬಹುದು)

ಇ650 ಫೀಚರ್ಸ್
* ಮೇಲಿನ ಮೊಬೈಲ್ ಗಳಲ್ಲಿರುವ ಹೆಚ್ಚಿನ ಫೀಚರುಗಳು ಇದರಲ್ಲಿವೆ.
* ಇದು ಸ್ಟೈಲಿಶ್ ಮೊಬೈಲ್
* ಅತ್ಯಧಿಕ ರೆಸಲ್ಯೂಷನ್ ಹೊಂದಿದೆ.

ಜಿಫೈವ್ ಜಿ20 ಸ್ಪೆಷಲ್
* ಇದು ಗೇಮ್ ಪ್ರಿಯರ ಫೋನ್
* ಒಂದು ಸಾವಿರಕ್ಕೂ ಗೇಮ್ ಲೋಡ್ ಆಗಿದೆ.
* ಅತ್ಯುತ್ತಮ ಗುಣಮಟ್ಟದ ಲೌಡ್ ಸ್ಪೀಕರ್
* ಮಲ್ಟಿಮೀಡಿಯಾ ಮತ್ತು ಕೆಮರಾ

ಜಿಫೈವ್ ಮೊಬೈಲ್ ದರ
* ಇ680 ದರ: 2,000 ರು.
* ಇ620 ದರ: 2,700 ರು.
* ಇ650 ದರ: 3000 ರು.
* ಜಿಫೈವ್ ಜಿ20 ದರ: 2,900 ರು.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X