ಜಗತ್ತಿನೊಂದಿಗೆ ನಾವೂ ಮಾತನಾಡಲಿದ್ದೇವೆ: ಇಂಟೆಲ್

By Super
|
ಜಗತ್ತಿನೊಂದಿಗೆ ನಾವೂ ಮಾತನಾಡಲಿದ್ದೇವೆ: ಇಂಟೆಲ್
ಬೆಂಗಳೂರು, ಜು. 25: ಇಲ್ಲಿಯವರೆಗೆ ಕೇವಲ ಭಾರತದಲ್ಲಷ್ಟೇ ತನ್ನ ಮಾರಾಟ ಜಾಲವನ್ನು ವಿಸ್ತರಿಸಿದ್ದ ಇಂಟೆಕ್ಸ್ ಇದೀಗ ಸಾಗರದಾಚೆಗೂ ತನ್ನ ಮೊಬೈಲ್ ಸಾಮ್ರಾಜ್ಯ ವಿಸ್ತರಿಸಲು ಯೋಚಿಸಿ ಕಾರ್ಯಪ್ರವೃತ್ತವಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಗಲ್ಫ್ ದೇಶಗಳಲ್ಲಿ ತನ್ನ ಹೊಸ ಮೊಬೈಲ್ " ಒಮಾನ್ ಸುಲ್ತಾನೇಟ್ " ಬಿಡುಗಡೆಗೆ ಮುಂದಾಗಿ ಪ್ರೊಮೋಶನ್ ಪ್ರಾರಂಭಿಸಿದೆ.

ಮೊಬೈಲ್ ಗೆ ಇರುವ ದರಕ್ಕೆ ಹೋಲಿಸಿದರೆ ಅತ್ಯಧಿಕ ಎನ್ನುವಷ್ಟು ಮಲ್ಟಿಮೀಡಿಯಾ ಹಾಗೂ ಮನರಂಜನೆ ಒದಗಿಸಬಲ್ಲ ಸೌಲಭ್ಯಗಳಿಂದ ತುಂಬಿ ತುಳುಕುತ್ತಿರುವ ಈ ಹೊಸ ಮೊಬೈಲ್ ಬೆಲೆ 14.9 ರಿಂದ 64 Rials ನಿಗದಿಯಾಗಿದೆ. ಇದೀಗ ಸೇಲ್ಸ್ ಪ್ರೊಮೋಶನ್ ಪ್ರಾರಂಭಿಸಲಾಗಿದ್ದು ರೋಡ್ ಶೋ & ಅವೇರ್ ಕ್ಯಾಂಪ್ ಮೂಲಕ ಮಾಡಲು ನಿರ್ಧರಿಸಿದೆ.

ಈ ಮ್ಯಾಕ್ಸ್ ಜೊತೆ ಟೈ ಅಪ್ ಮಾಡಿಕೊಂಡಿರುವ ಇಂಟೆಕ್ಸ್ ಮಧ್ಯಮ ತರಗತಿಯಿಂದ ಕೆಳವರ್ಗದ ಜನರನ್ನು ಗಮನದಲ್ಲಿಟ್ಟು ಈ ಮೊಬೈಲ್ ತಯಾರಿಸಿ ಬಿಡುಗಡೆ ಮಾಡಲು ಯೋಜಿಸಲಾಗಿದೆ. ಇದರಲ್ಲಿ ಆಯ್ದ 11 ವಿಶೇಷತೆಗಳಿವೆ. ತಿಂಗಳಿಗೆ 5000 ದಿಂದ 8000 ಮೊಬೈಲ್ ಮಾರಾಟ ಮಾಡುವ ಟಾರ್ಗೆಟ್ ರೂಪಿಸಲಾಗಿದೆ. ಯುವಜನರಿಗೆ ಮೆಚ್ಚಿಗೆಯಾಗಬಲ್ಲ ಅಂಶಗಳು ಇದರಲ್ಲಿ ಹೇರಳವಾಗಿವೆ.

ತನ್ನ ಈ ಪ್ರಯತ್ನದಲ್ಲಿ ಸಂಪೂರ್ಣ ಯಶಸ್ವಿಯಾಗುವ ನಂಬಿಕೆ ಹೊಂದಿರುವ ಇಂಟೆಕ್ಸ್ ಎಚ್ಚರಿಕೆಯಿಂದ ಪ್ರತಿ ಹೆಜ್ಜೆಯನ್ನೂ ಇಡುತ್ತಿದೆ. ಅದರ ಈ ಹೊಸ ಪ್ರಯತ್ನ ಎಷ್ಟರಮಟ್ಟಿಗೆ ಸಫಲವಾಗುವುದೆಂದು ತಿಳಿಯಲು ಹೆಚ್ಚು ಕಾಲವೇನೂ ಕಾಯಬೇಕಾಗಿಲ್ಲ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X