ಕಾಸಿಗೆ ತಕ್ಕ ಕಜ್ಜಾಯ ! ನಿಮ್ಗೆ ನೋಕಿಯಾನಾ, ಸೋನಿನಾ?

By Super
|
ಕಾಸಿಗೆ ತಕ್ಕ ಕಜ್ಜಾಯ ! ನಿಮ್ಗೆ ನೋಕಿಯಾನಾ, ಸೋನಿನಾ?
ಬೆಂಗಳೂರು, ಜು. 25: ಮೊದಲೆಲ್ಲ ಕೇವಲ ಶ್ರೀಮಂತರ ಸ್ವತ್ತಾಗಿದ್ದ ಮೊಬೈಲ್ ಇಂದು ಬಡವರ ದಿನನಿತ್ಯದ ಅಗತ್ಯಗಳಲ್ಲಿ ಒಂದಾಗಿದೆ. ಇದೇ ಮನುಷ್ಯರ ನಡುವಿನ ಸಂಪರ್ಕ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ಆದರೆ ಅವುಗಳಲ್ಲೂ ಕೆಲವೊಂದು ಲಕ್ಸುರಿಯಸ್ ಬರುತ್ತವೆ.

ನಾವೀಗ ಅಂತಹ ಎರಡು ಫೋನ್ ಗಳನ್ನು ಹೋಲಿಸಿ ನೋಡೋಣ. ನೋಕಿಯಾ ಓರೋ ಮತ್ತು ಸೋನಿ ಎರಿಕ್ ಸನ್ ಎಕ್ಸ್ ಪೆರಿಯಾ ರೇ ಅಂತಹ ಆ ಎರಡು ಫೋನ್ ಗಳು.

ಮೊದಲನೆಯದಾಗಿ ಈ ಎರಡೂ ಮೊಬೈಲ್ ಗಳು ಮಾಮೂಲಿಯದಲ್ಲ. ಬಹು ಅಪರೂಪದ ಮುತ್ತು ರತ್ನಗಳನ್ನು ಅಳವಡಿಸಿದ, ಸಮಾಜದಲ್ಲಿ ವಿಶೇಷ ವ್ಯಕ್ತಿಗಳೆಂದು ಪರಿಗಣಿಸಲ್ಪಟ್ಟ ವ್ಯಕ್ತಿಗಳು ಮಾತ್ರ ಉಪಯೋಗಿಸುವಂತಹುದು. ಈಗೀಗ ನಮ್ಮ ಭಾರತದಲ್ಲಿಯೂ ಇಂತಹ ಜನರು ಕಾಣಸಿಗುತ್ತಾರೆ.

ನೋಕಿಯಾ ಓರೋ ಇದು 18 ಕ್ಯಾರೆಟ್ ಬಂಗಾರದ ಫ್ರೇಂ ಹಾಗೂ ಕೀ ಹೊಂದಿದೆ. ಗೋಲ್ಡ್ ಕವರಿಂಗ್ ಹೊಂದಿರುವ ಇದು ರೇಡಿಯಂಟ್ ಲುಕ್ ಹೊಂದಿದೆ. 3.5 ಇಂಚ್ ಕೆಪಾಕ್ವಿವ್ ಟಚ್ ಸ್ಕ್ರೀನ್ ಬೇಸ್ಡ್ AMOLED ಡಿಸ್ ಪ್ಲೇ ಹೊಂದಿರುವ ಇದು ಹೈ ಡೆಪನಿಷನ್ ವಿಡಿಯೋ ಪ್ಲೇಬ್ಯಾಕ್ ಹೊಂದಿದೆ.

ಇನ್ನು ಸೋನಿ ಎರಿಕ್ ಸನ್ ಎಕ್ಸ್ ಪೆರಿಯಾ ರೇ, ಅಂತಹ ಯಾವುದೇ ಗೋಲ್ಡ್ ಕವರಿಂಗ್ ಹೊಂದಿಲ್ಲ. ಬೆಲೆಬಾಳುವ ಯಾವ ಆಡಂಬರಗಳೂ ಇಲ್ಲದೇ ಮೆಟಲ್ ಫ್ರೇಂ ವರ್ಕ್ ನಿಂದ ಮಾಡಿದ ತಂಬಾ ಸರಳಸುಂದರ ಹಾಗೂ ಡೀಸೆಂಟ್ ಲುಕ್ ಹೊಂದಿದೆ. 3.3 ಇಂಚ್ LED ಬ್ಯಾಕ್ಲೈಟ್ LCD ಫುಲ್ ಟಚ್ ಸ್ಕ್ರೀನ್ ಡಿಸ್ ಪ್ಲೇ ಹೊಂದಿದೆ.

ಆದರೆ ಎರಡೂ ಮೊಬೈಲ್ ಗಳು ತಾಂತ್ರಿಕ ದೃಷ್ಟಿಯಿಂದ ಅತ್ಯುತ್ತಮವಾಗಿವೆ. 8 ಮೆಗಾ ಪಿಕ್ಸೆಲ್ ಕ್ಯಾಮೆರಾ, LED ಫ್ಲಾಶ್, 720p ಹೈ ಡೆಪನಿಷನ್ ವಿಡಿಯೋ ರೆಕಾರ್ಡಿಂಗ್, ಅತಿವೇಗದ 3G ನೆಟ್ ವರ್ಕ್ ನಿಂದ ವಿಡಿಯೋ ಕಾಲಿಂಗ್ ನಿರ್ವಹಿಸಬಲ್ಲ VGA ಫ್ರಂಟ್ ಕ್ಯಾಮೆರಾ ಹೊಂದಿವೆ.

ಮಲ್ಟಿಮೀಡಿಯಾ & ಮನರಂಜನೆಯಲ್ಲೂ ಇವು ಸಾಕಷ್ಟು ಉನ್ನತ ತಾಂತ್ರಿಕತೆ ಹೊಂದಿವೆ. MP3, MP4, WAV, WMV, AAC+ ಹೀಗೆ ಬಹಳಷ್ಟು ಮೀಡಿಯಾ ಪಾರ್ಮೆಟ್ಸ್ ಗಳಲ್ಲದೇ ಹೈ ಡೆಪನಿಷನ್ ವಿಡಿಯೋ h263 and h264 ಬಳಕೆಯಾಗಿದೆ.

ಎಲ್ಲಾ ಲೇಟೆಸ್ಟ್ ಕನೆಕ್ಟಿವಿಟಿ ಹೊಂದಿರುವ ಈ ಎರಡೂ ಫೊನ್ ಗಳು ಬ್ಲೂ ಟೂಥ್, USB PC ಸಿಂಕ್, Wi-Fi, 2G ಇಂಟರ್ ನೆಟ್ ತಾಂತ್ರಿಕತೆ, EDGE & GPRS ನೊಂದಿಗೆ ವೇಗದ 3G ಎಕ್ಸೆಸ್ ಹೊಂದಿದೆ. ನೋಕಿಯಾ ಓರೋ 3G ಡಾಟಾ ಟ್ರಾನ್ಸ್ ಪರ್ ವೇಗ 10 Mbps ಒಳಗೊಂಡಿದ್ದರೆ, ಸೋನಿ ಎರಿಕ್ ಸನ್ ಎಕ್ಸ್ ಪೆರಿಯಾ ರೇ ಕೇವಲ 7 Mbps ಹೊಂದಿದೆ.

ಇನ್ನು ಹೋಲಿಕೆಯಲ್ಲಿ ಅತೀ ಮುಖ್ಯವಾದ ಅಂಶ ಬೆಲೆಯ ವಿಷಯಕ್ಕೆ ಬಂದರೆ ಇನ್ನು ಸೋನಿ ಎರಿಕ್ ಸನ್ ಎಕ್ಸ್ ಪೆರಿಯಾ ರೇ ಬೆಲೆ ನಿಖರವಾಗಿಲ್ಲವಾದರೂ ಸುಮಾರು 45,000 ಆಗಬಹುದು. ಆದರೆ ನೋಕಿಯಾ ಓರೋ ರು. 75,000 ಬೆಲೆ ಬಾಳುತ್ತದೆ. ಈಗ ಯಾವುದು ಒಳ್ಳೆಯದು ಎನ್ನುವ ಬದಲು " ಕಾಸಿಗೆ ತಕ್ಕ ಕಜ್ಜಾಯ " ಎನ್ನಬಹುದಲ್ಲವೇ?

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X