ಲೈಫು ಇಷ್ಟೇನಾ..! ಇಲ್ಲ, ಬರುತ್ತಿದೆ ಸ್ಯಾಮ್ ಸಂಗ್ 3D

Posted By: Staff

ಲೈಫು ಇಷ್ಟೇನಾ..! ಇಲ್ಲ, ಬರುತ್ತಿದೆ ಸ್ಯಾಮ್ ಸಂಗ್ 3D
ಬೆಂಗಳೂರು, ಜು. 25: 3D ಹೆಸರು ಕೇಳಿದ ತಕ್ಷಣ ರೋಮಾಂಚನವಾಗಿ ಮೈ ನವಿರೇಳುತ್ತದೆ. ಅಂತಹ ಅಪರೂಪದ ತಂತ್ರಜ್ಞಾನವದು. ಇದೀಗ ಹಾಲಿವುಡ್ ನ ಬಹಳಷ್ಟು ಸಿನಿಮಾ 3D ತಂತ್ರಜ್ಞಾನ ಅಳವಡಿಸಲ್ಪಟ್ಟೇ ಬಿಡುಗಡೆಯಾಗುತ್ತಿದೆ. ಅಷ್ಟೇ ಏಕೆ, 3D ಟಿವಿ, ಲ್ಯಾಪ್ ಟಾಪ್, ಡೆಸ್ಕ್ ಟಾಪ್ಸ್, ಇದೀಗ ಮೊಬೈಲ್ಸ್, ಹೀಗೆ ದೃಶ್ಯ ಮಾಧ್ಯಮದ ಬಹುತೇಕ ಎಲ್ಲವೂ ಈಗ 3D ಮಯವಾಗಿದೆ.

ಈಗಾಗಲೇ ಎಲ್ ಜಿ ಯ ಆಪ್ಟಿಮಸ್ 3D ಮಾರುಕಟ್ಟೆಯಲ್ಲಿದೆ. ಈಗ ಬಿಡುಗಡೆಯಾಗುತ್ತಿದೆ ಹೊಸ ಸ್ಯಾಮ್ ಸಂಗ್ ಗೆಲಾಕ್ಸಿ 3D. ಈ ಫೊನ್ ಉಪಯೋಗಿಸಲು 3D ಗ್ಲಾಸ್ ಉಪಯೋಗಿಸಬೇಕಾದ ಅಗತ್ಯ ಇಲ್ಲ ಎನ್ನುವುದೇ ಇದರ ಅತ್ಯಂತ ದೊಡ್ಡ ವಿಶೇಷ. ಇನ್ನುಳಿದ ಗುಣಲಕ್ಷಣಗಳು ಕೆಳಗಿನಂತಿವೆ.

ದೊಡ್ಡ 4.3 ಇಂಚ್ ಗಳ LCD ಫುಲ್ ಟಚ್ ಸ್ಕ್ರೀನ್ ಹೊಂದಿರುವ ಇದು, 1.2 ಅಥವಾ 1.4 GHz ಪ್ರೊಸೆಸರ್ & ಹೈ ಡೆಪನಿಷನ್ 3D ಹೈ RAM ಹೊಂದಿದೆ. 8 ಮೆಗಾ ಪಿಕ್ಸೆಲ್ ಕ್ಯಾಮೆರಾ, ಹೈ ಡೆಪನಿಷನ್ ರೆಕಾರ್ಡಿಂಗ್ ಸೌಲಭ್ಯ, ಮೈಕ್ರೋ SD ಕಾರ್ಡ್ ಮೂಲಕ ವಿಸ್ತರಿಸಬಹುದಾದ ಹೆಚ್ಚಿನ ಮೆಮೊರಿ ಇರಬಹುದೆಂದು ನಿರೀಕ್ಷಿಸಲಾಗಿದೆ. ಆಂಡ್ರಾಯ್ಡ್ ಜಿಂಜರ್ ಬ್ರೆಡ್ OS ಮೂಲಕ ಕಾರ್ಯ ನಿರ್ವಹಿಸುವ ಸದ್ಯ ಬಳಸಲ್ಪಡುವ ಮೊಬೈಲ್ ಗಳಲ್ಲಿ ಇದು ಹೈ ಎಂಡ್ ಸ್ಮಾರ್ಟ್ ಫೊನ್ ಆಗಲಿದೆ.

' ಗ್ರಾಹಕ ಇಲೆಕ್ಟ್ರಾನಿಕ್ಸ್ ಶೋ 2011 ' ರಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿರುವ ಈ ಮೊಬೈಲ್ ನ ದರ ಹಾಗೂ ಬಿಡುಗಡೆ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಬಿಡುಗಡೆಯ ನಂತರ ಖಂಡಿತ ಇದು ಸಾಕಷ್ಟು ಸುದ್ದಿಯಾಗಲಿದೆ; ಮಾರಾಟದಲ್ಲಿ ದಾಖಲೆ ಬರೆಯಲಿದೆ.

Please Wait while comments are loading...
Opinion Poll

Social Counting