ಎಚ್ ಟಿ ಸಿ ಹೊಸ ಸ್ಲೋಗನ್... ತುತ್ತಾ ಮುತ್ತಾ!

Posted By: Staff

ಎಚ್ ಟಿ ಸಿ ಹೊಸ ಸ್ಲೋಗನ್... ತುತ್ತಾ ಮುತ್ತಾ!
ಬೆಂಗಳೂರು, ಜು. 26: ಈಗ ಮೊಬೈಲ್ ದಿನನಿತ್ಯದ ಅಗತ್ಯಗಳಲ್ಲಿ ಒಂದಾಗಿದೆ. ಸ್ಮಾರ್ಟ್ ಫೋನ್ ಫೀಚರ್ಸ್ ಇದೆ ಅಂದರೆ ಎಂತಹವರಿಗೂ ಖರೀದಿಸೋದಕ್ಕೆ ಇಷ್ಟ ಆಗುತ್ತೆ. ಮೊಬೈಲ್ ವ್ಯಾಪಾರ ಚೆನ್ನಾಗಿ ಆಗಬೇಕು ಅಂದ್ರೆ ಮೊಬೈಲ್ ತಯಾರಕರು ಬಿಡೋ ಕೊನೇ ಬಾಣ ಈ ಸ್ಮಾರ್ಟ್ ಫೋನ್.

ಇಂತಹ ಎರಡು ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ತರೋದಕ್ಕೆ ರೆಡಿ ಆಗಿದೆ ತೈವಾನ್ ಮೂಲದ ಎಚ್ ಟಿ ಸಿ ಮೊಬೈಲ್ ಕಂಪನಿ. ಅವು
'ಎಚ್ ಟಿ ಸಿ ಚಾ ಚಾ' ಹಾಗೂ 'ಎಚ್ ಟಿ ಸಿ ವೈಲ್ಡ್ ಫೈರ್'. 3.2 ಇಂಚು ಡಿಸ್ ಪ್ಲೇ ಇರುವ ಎಚ್ ಟಿ ಸಿ ವೈಲ್ಡ್ ಫೈರ್ ನಲ್ಲಿ ಟಚ್ ಸ್ಕ್ರೀನ್ ಮೂಲಕ ಕಾರ್ಯ ನಿರ್ವಹಿಸುವ ಸೌಲಭ್ಯವಿದೆ. ಆದರೆ ಚಾ ಚಾ ಸಣ್ಣ ಸ್ಕ್ರೀನ್ ಹೊಂದಿದ್ದು, 2.6 ಇಂಚಿದ್ದು, ಟಚ್ ಸ್ಕ್ರೀನ್ ಲಭ್ಯವಿದೆ. QWERTY ಕೀಪ್ಯಾಡ್, ಫ್ರಂಟ್ ಕ್ಯಾಮೆರಾ, 5 ಮೆಗಾ ಪಿಕ್ಸಲ್ ಕ್ಯಾಮೆರಾ, 720p ವಿಡಿಯೋ ರೆಕಾರ್ಡಿಂಗ್ ಇದೆ.

ಆದರೆ ವೈಲ್ಡ್ ಫೈರ್ ನಲ್ಲಿ 3G, VGA ಫ್ರಂಟ್ ಕ್ಯಾಮೆರಾ ಇದೆ. ಆದರೆ ಚಾ ಚಾ ಿದನ್ನು ಹೊಂದಿಲ್ಲ. ಅಷ್ಟೇ ಅಲ್ಲ, ಈ ಎರಡರಲ್ಲೂ mp3, mp4,wmv, AAC+ ಮತ್ತು h263, h264 ವಿಡಿಯೋ ತಂತ್ರಜ್ಞಾನ ಇವೆ. ವೈಲ್ಡ್ ಫೈರ್ ನಲ್ಲಿFM, RDS ಸಹಿತವಾಗಿದ್ದು ಇದು ಚಾ ಚಾ ದಲ್ಲಿ ಇಲ್ಲ. ಇದರ ಜೊತೆ ಬ್ಲೂಟೂಥ್, Wi-Fi, GPRS, EDGE ಮತ್ತು 14 Mbp ಡಾಟಾ ಟ್ರಾನ್ಸ ಫರ್ 3 G ಇಂಟರ್ ನೆಟ್ ಇದೆ.

ಚಾ ಚಾ ದಲ್ಲಿ ಇವುಗಳೆಲ್ಲದರ ಲೇಟೆಸ್ಟ್ ಆವೃತ್ತಿಯಿದೆ. ಉದಾ: cha cha ದಲ್ಲಿ ಬ್ಲೂಟೂಥ್ 3.0 ಇದ್ದರೆ wild fire ನಲ್ಲಿ 2.1 ಆವೃತ್ತಿ ಇದೆ.
ಎರಡೂ ಕೂಡ ಮೈಕ್ರೊ SD ಮೂಲಕ 32 gb ವರೆಗೆ ವಿಸ್ತರಿಸಬಹುದಾದ ಮೆಮೊರಿ ಸೌಲಭ್ಯ ಇದೆ. ಆದರೆ ಬೆಲೆಯಲ್ಲಿ ಈ ಎರಡೂ ಮೊಬೈಲ್ ಗಳ ನಡುವೆ

ವ್ಯತ್ಯಾಸವಿದೆ. ಚಾ ಚಾ ಬೆಲೆ ರು. 15,500 ಆದರೆ ವೈಲ್ಡ್ ಫೈರ್ ಬೆಲೆ ರು. 10,500. ಆದ್ದರಿಂದ ಕಡಿಮೆ ಬೆಲೆಗೆ ಹೆಚ್ಚು ಸೌಲಭ್ಯ ಹೊಂದಿರುವ ವೈಲ್ಡ್ ಫೈರ್ ಎಲ್ಲರ ಕಣ್ಮಣಿಯಾಗಬಹುದು.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot