ಸದ್ದು ಮಾಡಲಿದೆ ಕಡಿಮೆ ಸದ್ದಿನ ಖಾಮೋಶ್ ಮ್ಯಾಕ್ಸ್

Posted By: Staff

ಸದ್ದು ಮಾಡಲಿದೆ ಕಡಿಮೆ ಸದ್ದಿನ ಖಾಮೋಶ್ ಮ್ಯಾಕ್ಸ್
ಬೆಂಗಳೂರು, ಜು. 26: ಸ್ವದೇಶಿ ಮೊಬೈಲ್ ಅಂದಾಗ ಮ್ಯಾಕ್ಸ್ ನೆನಪಾಗಲೇಬೇಕು. ಭಾರತದಲ್ಲಿ ಹುಟ್ಟಿರುವ ಮೊಬೈಲ್ ಕಂಪೆನಿಯಾದ ಮ್ಯಾಕ್ಸ್ ಈಗಾಗಲೇ ಸಾಕಷ್ಟು ಮೊಬೈಲ್ ಗಳನ್ನು ಮಾರುಕಟ್ಟೆಗೆ ತಂದಿದೆ. ಇದೀಗ 'ಲೋ ನೊಯ್ಸ್' ಮೊಬೈಲ್ ತರುವ ಮೂಲಕ ಸುದ್ದಿ ಮಾಡುತ್ತಿದೆ.

ಏನಿದು ಲೋ ನೊಯ್ಸ್ ಮೊಬೈಲ್! ನಿಜವಾಗಿಯೂ ಇದೊಂದು ಉಪಯುಕ್ತ ಸಾಧನ. ಇದರಲ್ಲಿರುವ ಸ್ಮಾಲ್ ಆರಿ ಮೈಕ್ರೋಫೋನ್ (SAM), ಮಾತನಾಡುವಾಗ ನಾವು ಕೇಳಿಸಿಕೊಳ್ಳುವ ಹೊರಗಿನ ಶಬ್ಧಗಳನ್ನು ಅವಾಯ್ಡ್ ಮಾಡಿ ಮಾತಿನ ಧ್ವನಿ ಮಾತ್ರ ಸ್ಪಷ್ಟವಾಗಿ ಕೇಳಿಸುವಂತೆ ಮಾಡುತ್ತದೆ.

ಇದರಲ್ಲಿರುವ ಫಿಲ್ಟರ್, ಸ್ಪೆಷಲ್ ಸಿಗ್ನಲಿಂಗ್ ಮೂಲಕ ಈ ಕೆಲಸವನ್ನು ಮಾಡಿ ನಮಗೆ ಮಾತಿನ ಸವಿ ಹಿತವಾಗಿ ತಲುಪುವಂತೆ ಮಾಡುತ್ತದೆ. ಈ ಸಿರೀಸ್ ನಲ್ಲಿ 2 ಮೊಬೈಲ್ ಗಳಿದ್ದು ಅವು ಮ್ಯಾಕ್ಸ್ MX 401 ಮತ್ತು ಮ್ಯಾಕ್ಸ್ MQ 601.

*** ಮ್ಯಾಕ್ಸ್ MX 401 ವಿಶೇಷತೆಗಳು:

* ಡ್ಯುಯಲ್ ಸಿಮ್
* 2.0 ಮೆಗಾ ಪಿಕ್ಸೆಲ್ ಕ್ಯಾಮೆರಾ
* 2.4 ಇಂಚ್ ಡಿಸ್ ಪ್ಲೇ
* ದೊಡ್ಡ 1500 mAh ಬ್ಯಾಟರಿ, 5.5 ತಾಸುಗಳ ಟಾಕ್ ಟೈಮ್
* SD ಕಾರ್ಡ್ ಮೂಲಕ ವಿಸ್ತರಿಸಬಹುದಾದ 8 GB ಮೆಮೊರಿ
* FM ರೇಡಿಯೋ, FM ಶೆಡ್ಯೂಲಿಂಗ್

*** ಮ್ಯಾಕ್ಸ್ MQ 601 ವಿಶೇಷತೆಗಳು:

*QWERTY ಕೀ ಪ್ಯಾಡ್, ಡ್ಯುಯಲ್ ಸಿಮ್
* 2.0 ಮೆಗಾ ಪಿಕ್ಸೆಲ್ ಕ್ಯಾಮೆರಾ, ವಿಡಿಯೋ ರೆಕಾರ್ಡಿಂಗ್
* 1000mAh ಬ್ಯಾಟರಿ, 4.5 ತಾಸುಗಳ ಟಾಕ್ ಟೈಮ್
* SD ಕಾರ್ಡ್ ಮೂಲಕ ವಿಸ್ತರಿಸಬಹುದಾದ 8 GB ಮೆಮೊರಿ
* ವೈರ್ ಫ್ರೀ FM ರೇಡಿಯೋ, FM ಶೆಡ್ಯೂಲಿಂಗ್
* ಬ್ಲೂ ಟೂಥ್
* ಜಾವಾ

ಇನ್ನು ದರದ ವಿಷಯ. ಮ್ಯಾಕ್ಸ್ MX 401 ಬೆಲೆ ರು. 2,833 ಹಾಗೂ ಮ್ಯಾಕ್ಸ್ MQ 601 ಬೆಲೆ ರು. 2,970. ಆಕರ್ಷಕ ಬೆಲೆಯ ಜತೆ ಆಕರ್ಷಕ ಫೊನ್! ಯಾರಿಗುಂಟು ಯಾರಿಗಿಲ್ಲ, ಆಗಲಿದೆಯೇ ಬಾಳೆಲ್ಲ ಮೊಬೈಲ್ ಮಯ!

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot