ಸ್ಯಾಮ್ ಸಂಗ್ ಮೊಬೈಲ್ಸ್ ಯುದ್ಧ: ಗೆಲ್ಲೋದು ಯಾರು?

By Super
|
ಸ್ಯಾಮ್ ಸಂಗ್ ಮೊಬೈಲ್ಸ್ ಯುದ್ಧ: ಗೆಲ್ಲೋದು ಯಾರು?
ಬೆಂಗಳೂರು, ಜು. 26: ಸ್ಯಾಮ್ ಸಂಗ್, ಸ್ಮಾರ್ಟ್ ಫೋನ್ ಜಗತ್ತಿನಲ್ಲಿ ಸಾಕಷ್ಟು ಜನಪ್ರಿಯ ಹೆಸರು. ಇದು ಇತರ ಫೋನ್ ಗಳಿಗೆ ಸ್ಟ್ರಾಂಗ್ ಎದುರಾಳಿ. ಆಶ್ಚರ್ಯವೆಂದರೆ ಈಗ ಸ್ಯಾಮ್ ಸಂಗ್ 2 ಫೋನ್ ಗಳು ತಮ್ಮಲ್ಲಿಯೇ ಯುದ್ಧ ಪ್ರಾರಂಭಿಸಿವೆ. ಇತ್ತೀಚಿನ ಜನಪ್ರಿಯ ಫೊನ್ ಸ್ಯಾಮ್ ಸಂಗ್ ಗೆಲಾಕ್ಸಿ S, ಹಾಗೂ ಮುಂದೆ ಸದ್ಯದಲ್ಲಿಯೇ ಬರಲಿರುವ ಸ್ಯಾಮ್ ಸಂಗ್ ಗೆಲಾಕ್ಸಿ R ಮಧ್ಯೆ ಪೈಪೋಟಿ ಆರಂಭವಾಗಲಿದೆ.

ಯಾವುದರಲ್ಲಿ ಏನೇನಿದೆ ಅಂತ ಈಗ ನೋಡೋಣ. ಈ ಎರಡೂ ಫೊನ್ ಗಳು ಸಾಕಷ್ಟು ಫೀಚರ್ ಉಳ್ಳ ಹೈ ಎಂಡ್ ಸ್ಮಾರ್ಟ್ ಫೋನ್ ಗಳು. ಗೆಲಾಕ್ಸಿ S 4.0 ಇಂಚ್ ಸುಪರ್ AMOLED ಟಚ್ ಸ್ಕ್ರೀನ್ ಹೊಂದಿದ್ದರೆ, ಗೆಲಾಕ್ಸಿ R 4.2 ಸುಪರ್ LCD ಪುಲ್ ಟಚ್ ಸ್ಕ್ರೀನ್ ಡಿಸ್ ಪ್ಲೇ ಹೊಂದಿದೆ. ಎರಡೂ ಫೊನ್ 5 ಮೆಗಾ ಪಿಕ್ಸೆಲ್ ಕ್ಯಾಮೆರಾ, ಹೈ ಡೆಪನಿಷನ್ 720p ವಿಡಿಯೋ ರೆಕಾರ್ಡಿಂಗ್ ಇದೆ.

ಇದರ ಜೊತೆ 1.3 ಮೆಗಾ ಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿರುವುದು ಗೆಲಾಕ್ಸಿ R ನ ವಿಶೇಷ. ಎರಡರಲ್ಲೂ ಮಲ್ಟಿಮೀಡಿಯಾ & ಎಂಟರ್ ಟೈನ್ ಮೆಂಟ್ ಸೌಲಭ್ಯ ಚೆನ್ನಾಗಿದೆ. MP3, MP4, WAV, WMV, AAC+ ಮತ್ತು ಹೈ ಡೆಪನಿಷನ್ h263 and h264 ವಿಡಿಯೋ ಪಾರ್ಮೆಟ್ಸ್ ಇದೆ. FM Radio, RDS ಹಾಗೂ 3.5 mm ಯುನಿವರಸೆಲ್ ಆಡಿಯೋ ಜಾಕ್ 2 ರಲ್ಲೂ ಲಭ್ಯವಿದೆ.

ಬ್ಲೂ ಟೂಥ್, USB PC, Wi-Fi ಕನೆಕ್ಟಿವಿಟಿ, GPRS & EDGE ಇಂಟರ್ ನೆಟ್ ಬ್ರೌಸಿಂಗ್ ಈ ಎರಡೂ ಫೋನ್ ಗಳಲ್ಲಿ ಲಭ್ಯವಿದೆ. ಗೆಲಾಕ್ಸಿ S, 1GHz Cortex ARM ಪ್ರೊಸೆಸರ್ ಹೊಂದಿದ್ದು ಆಂಡ್ರಾಯ್ಡ್ ಈಕ್ಲೇರ್ OS ಮೂಲಕ ಕಾರ್ಯ ನಿರ್ವಹಿಸಿದರೆ ಸ್ಯಾಮ್ ಸಂಗ್ R, ಇದಕ್ಕಿಂತ ಹೆಚ್ಚು ಶಕ್ತಿಯುತವಾದ ಡ್ಯುಯಲ್ ಕೋರ್ 1GHz NVIDIA Tegra 2 ಪ್ರೊಸೆಸರ್ ಹಾಗೂ ಆಂಡ್ರಾಯ್ಡ್ ಜಿಂಜರ್ ಬ್ರೆಡ್ ಮೂಲಕ ಕಾರ್ಯ ಮೂಲಕ ಕಾರ್ಯ ನಿರ್ವಹಿಸುತ್ತದೆ.

ಇನ್ನು ದರದ ವಿಷಯಕ್ಕೆ ಬಂದರೆ ಸ್ಯಾಮ್ ಸಂಗ್ ಗೆಲಾಕ್ಸಿ S, ರು. 25,000. ಆದರೆ ಸ್ಯಾಮ್ ಸಂಗ್ ಗೆಲಾಕ್ಸಿ R ದರ ಇನ್ನೂ ನಿಗದಿಯಾಗಿಲ್ಲ. ವಿಶೇಷತೆಗಳ ದೃಷ್ಟಿಯಿಂದ ಗೆಲಾಕ್ಸಿ R ಒಳ್ಳೆಯದು. ಆದರೆ ದರವನ್ನೂ ಹೋಲಿಸಿ ನೋಡಿ ಹೇಳಬೇಕಲ್ಲವೇ? ಬಿಡುಗಡೆಯ ತನತ ಕಾಯಲೇಬೇಕು!

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X