ದೇಶಿ ಕಾರ್ಬನ್ ನಿಂದ ಅಗ್ಗದ 3ಜಿ ಆಂಡ್ರಾಯ್ಡ್ ಫೋನ್

By Super
|
ದೇಶಿ ಕಾರ್ಬನ್ ನಿಂದ ಅಗ್ಗದ 3ಜಿ ಆಂಡ್ರಾಯ್ಡ್ ಫೋನ್
ಒಮ್ಮೆ ನೆನಪಿಸಿಕೊಳ್ಳಿ. ಏಳೆಂಟು ವರ್ಷಗಳ ಹಿಂದೆ ದೇಶದ ಮೊಬೈಲ್ ಫೋನ್ ವಲಯದಲ್ಲಿ ನೋಕಿಯಾ, ಸೋನಿ ಎರಿಕ್ಸನ್ ಮತ್ತು ಸ್ಯಾಮ್ ಸಂಗ್ ನಂತಹ ವಿದೇಶಿ ಕಂಪನಿಗಳು ಪ್ರಾಬಲ್ಯ ಪಡೆದಿದ್ದವು. ನಂತರ ಎಲ್ ಜಿ, ಎಚ್ ಟಿಸಿ ಮತ್ತು ಮೊಟೊರೊಲಾ ಪ್ರವೇಶಿಸಿದ್ದವು.

ದೇಶದ ಮೊಬೈಲ್ ಮಾರುಕಟ್ಟೆಯಲ್ಲಿ ವಿದೇಶಿ ಕಂಪನಿಗಳು ಪ್ರಾಬಲ್ಯ ಸಾಧಿಸುವುದು ಯಾಕೋ ದೇಶಿ ಕಂಪನಿಗಳಿಗೆ ಇಷ್ಟವಾಗಲಿಲ್ಲ. ಮೇಡ್ ಇನ್ ಇಂಡಿಯಾ ಟ್ಯಾಗ್ ನೊಂದಿಗೆ ಕಾರ್ಬನ್ ಮೊಬೈಲ್ಸ್, ಮೈಕ್ರೊಮ್ಯಾಕ್ಸ್, ಮ್ಯಾಕ್ಸ್ ಮೊಬೈಲ್ಸ್ ಪದಾರ್ಪಣೆ ಮಾಡಿದ್ದವು.

ದೇಶಿ ಕಂಪನಿ ಕಾರ್ಬನ್ ಮೊಬೈಲ್ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಬೆಂಗಳೂರು ಮೂಲದ ಯುಟಿಎಲ್ ಗ್ರೂಪ್ ಮತ್ತು ದೆಹಲಿಯ ಜೈನಾ ಗ್ರೂಪ್ ಸಹಭಾಗಿತ್ವದಲ್ಲಿ ಕಾರ್ಬನ್ ಮೊಬೈಲ್ ಕಂಪನಿ ಅಸ್ತಿತ್ವಕ್ಕೆ ಬಂದಿತ್ತು.

ಇದೀಗ ಬಂದ ಸುದ್ದಿಯ ಪ್ರಕಾರ ಕಾರ್ಬನ್ 3ಜಿ ಆಂಡ್ರಾಯ್ಡ್ ಫೋನ್ ಹೊರತರಲಿದೆಯಂತೆ. ನೂತನ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ದರ 6,999 ರು. ಇರಲಿದೆಯೆಂದು ಕಂಪನಿ ಪ್ರಕಟಿಸಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಸ್ಮಾರ್ಟ್ ಫೋನ್ ದರಗಳಿಗೆ ಹೋಲಿಸಿದರೆ ಇದು ಅತ್ಯಂತ ಅಗ್ಗದ ಫೋನಾಗಲಿದೆ. ಕಾರ್ಬನ್ ಪ್ರಿಯರೆಲ್ಲರು ಅಗ್ಗದ ಸ್ಮಾರ್ಟ್ ಫೋನಿಗಾಗಿ ಸ್ವಲ್ಪ ದಿನ ಕಾಯಿರಿ ಎಂದು ಕಂಪನಿ ಹೇಳಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X