ಮೊಟೊರೊಲಾ ತ್ರಿವಳಿ, ನಿಮಗೆ ಬೇಕಾದನ್ನು ತಗೋಳ್ಳಿ

By Super
|
ಮೊಟೊರೊಲಾ ತ್ರಿವಳಿ, ನಿಮಗೆ ಬೇಕಾದನ್ನು ತಗೋಳ್ಳಿ
ಮೊಟೊರೊಲಾ ಗ್ರಾಹಕರಿಗೆ ತ್ರಿಬಲ್ ಧಮಾಕಾ ಇಲ್ಲಿದೆ. ಕಂಪನಿಯು ಮಿನಿ EX 108, WX 294 ಮತ್ತು XTEX118 ಎಂಬ ಮೂರು ಮೊಬೈಲ್ ಗಳನ್ನು ಹೊರತಂದಿದೆ. ಅತ್ಯಾಧುನಿಕ ಫೀಚರ್ಸ್ ಗಳನ್ನು ಹೊಂದಿರುವ ಈ ಮೂರು ಹ್ಯಾಂಡ್ ಸೆಟ್ ಗಳ ದರವನ್ನು ಕಂಪನಿ ಇನ್ನೂ ಬಹಿರಂಗಪಡಿಸಿಲ್ಲ.

ಮಿನಿ EX 108 ನೋಡಲು ಟ್ರೆಂಡಿಯಾಗಿದ್ದು, 2.0 ಇಂಚಿನ ಸಣ್ಣ ಡಿಸ್ ಪ್ಲೇ ಹೊಂದಿದೆ. 8 ಗಂಟೆಗಳ ಟಾಕ್ ಟೈಂ ಬ್ಯಾಟರಿ ಬ್ಯಾಕಪ್ ಹೊಂದಿದೆ. 2 ಮೆಗಾ ಪಿಕ್ಸಲ್ ಕ್ಯಾಮೆರಾದೊಂದಿಗೆ ವಿಡಿಯೋ ರೆಕಾರ್ಡಿಂಗ್ ಹಾಗೂ ಡಿಜಿಟಲ್ ಝೂಮಿಂಗ್ ಸೌಲಭ್ಯ ಕೂಡ ಇದರಲ್ಲಿದೆ.

ಮೊಟೊರೊಲಾ WX 294 ಕೇವಲ 65 ಗ್ರಾಂ ಇದೆ. ಹೆಚ್ಚು ಬ್ಯಾಟರಿ ಬ್ಯಾಕಪ್ ಇರುವ ಈ ಮೊಬೈಲ್, 1.8 ಇಂಚು ಡಿಸ್ ಪ್ಲೇ ಹೊಂದಿದೆ. VGA ಕ್ಯಾಮೆರಾ ಇರುವ ಈ ಹ್ಯಾಂಡ್ ಸೆಟ್ ಗೆ ಕಡಿಮೆ ಬೆಲೆ ಇರಬಹುದೆಂದು ಅಂದಾಜಿಸಲಾಗಿದೆ.

ಮೊಟೊರೊಲಾ XT EX118 ನೋಡಲು ತುಂಬಾ ಸ್ಟೈಲಿಶ್ ಆಗಿದ್ದು, QWERTY ಕೀಪ್ಯಾಡ್ ಹೊಂದಿದೆ. 3 ಮೆಗಾ ಪಿಕ್ಸಲ್ ಮತ್ತು 4 X ಡಿಜಿಟಲ್ ಝೂಮ್ ಸೌಲಭ್ಯವನ್ನು ಹೊಂದಿರುವ ಕಾರಣ ಮೊದಲ ಎರಡೂ ಮೊಬೈಲ್ ಗಳಿಗಿಂತ ಇದು ಸ್ವಲ್ಪ ಹೆಚ್ಚು ಬೆಲೆಯಿರುವ ನಿರೀಕ್ಷೆಯಿದೆ.

ಅಂತೂ ಆಗಸ್ಟ್ ನಲ್ಲಿ ಈ ಮೂರೂ ಮೊಬೈಲ್ ಗಳು ಭಾರತದ ಮೊಬೈಲ್ ಶಾಪ್ ಗಳಲ್ಲಿ ಕಾಣಿಸಿಕೊಳ್ಳಲಿವೆ, ಮೊಬೈಲ್ ಪ್ರಿಯರು ಈ ಮೂರರಲ್ಲಿ ಯಾವುದು ತಮಗೊಪ್ಪುತ್ತದೆಯೋ ಅವುಗಳನ್ನು ಮುಂದಿನ ತಿಂಗಳು ಖರೀದಿಸಬಹುದಾಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X