ಬ್ಲಾಕ್ ಬೆರ್ರಿ ಮಾಡುವುದೇ ಮತ್ತೊಮ್ಮೆ ಮೋಡಿ: ಕಾದು ನೋಡಿ!

Posted By: Staff

ಬ್ಲಾಕ್ ಬೆರ್ರಿ ಮಾಡುವುದೇ ಮತ್ತೊಮ್ಮೆ ಮೋಡಿ: ಕಾದು ನೋಡಿ!
ಬೆಂಗಳೂರು, ಜು. 28: ನೋಕಿಯಾ, ಸ್ಯಾಮ್ ಸಂಗ್, ಎಚ್ ಟಿ ಸಿ ಮೊಬೈಲ್ ಗಳ ಮಾರಾಟ ಭರಾಟೆಯಲ್ಲಿ ತನ್ನ ಚಾರ್ಮ್ ಕಳೆದುಕೊಳ್ಳುತ್ತಿರುವ ಕಂಪೆನಿ ಪ್ರಖ್ಯಾತ ಬ್ಲಾಕ್ ಬೆರ್ರಿ. ಇತ್ತೀಚಿನ ದಿನಗಳಲ್ಲಿ ಅದೇಕೋ ಮಂಕಾಗುತ್ತಿದೆ ಮಾಜಿ ಈ ಮೊಬೈಲ್ ರಾಜ.

ಆದರೂ ಹೊಸ ಮೊಬೈಲ್ ಬಿಡುಗಡೆಗೆ ಮತ್ತೆ ಸಜ್ಜಾಗಿ ಆಶಾಭಾವದೊಂದಿಗೆ ಹೆಜ್ಜೆ ಹಾಕುತ್ತಿದೆ ಈ ಬ್ಲಾಕ್ ಬೆರ್ರಿ. ಬಿಡುಗಡೆಗೆ ಕಾದಿರುವ ಹೊಸ ಮೊಬೈಲ್- ಬ್ಲಾಕ್ ಬೆರ್ರಿ ಬೋಲ್ಡ್ ಟಚ್ 9900.

ಬನ್ನಿ ನೋಡೋಣ ಈ ಬ್ಲಾಕ್ ಬೆರ್ರಿಯಲ್ಲೇನಿದೆ! ನೋಡಲು ಅಂದವಾಗಿರುವ ಈ ಫೊನ್, 2.8 ಇಂಚ್ ಟಚ್ ಸ್ಕ್ರೀನ್ ಡಿಸ್ ಪ್ಲೇ ಹೊಂದಿದೆ. ಮಲ್ಟಿಮೀಡಿಯಾದಲ್ಲಿ ಸಾಕಷ್ಡು ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಇದು MP3, WAV, WMV ಹಾಗೂ ವಿಡಿಯೋ ಪ್ಲೇ ಬ್ಯಾಕ್ 3GP, MP4, AVI ನೂಲಕ ಮನರಂಜನೆಯ ರಸದೌತಣವನ್ನೇ ನೀಡಲಿದೆ.

ಹೈ ಡೆಪನಿಷನ್ ವಿಡಿಯೋ ರೆಕಾರ್ಡಿಂಗ್ h263 and h264 ಪಾರ್ಮೆಟ್ಸ್ ಹೊಂದಿರುವುದು ಈ ಮೊಬೈಲ್ ಆಧುನಿಕವಾಗಿದೆ ಎಂಬುದಕ್ಕೆ ಸಾಕ್ಷಿ!

ಬ್ಲಾಕ್ ಬೆರ್ರಿ OS 5 ಹೊಂದಿರುವ ಇದರ ಉಳಿದ ವಿಶೇಷತೆಗಳು:
* 1.2 GHz ಪ್ರೊಸೆಸರ್, 768 MB RAM
* 5.0 ಮೆಗಾ ಪಿಕ್ಸೆಲ್ ಕ್ಯಾಮೆರಾ, 720p ವಿಡಿಯೋ ರೆಕಾರ್ಡಿಂಗ್
* 8 GB ಆಂತರಿಕ ಹಾಗೂ ವಿಸ್ತರಿಸಬಹುದಾದ 32 GB ಹೊರ ಮೆಮೊರಿ
* 3G, GPRS, EDGE
* ಬ್ಲೂ ಟೂಥ್ & Wi-Fi
* ಒಳ್ಳೆಯ ಬ್ಯಾಟರಿ ಸಾಮರ್ಥ್ಯ

ಸಾಕಷ್ಟು ವಿಶೇಷತೆಗಳನ್ನು ಹೊಂದಿರುವ ಇದು ಈ ವರ್ಷದ ಡಿಸೆಂಬರ್ ವೇಳೆಗೆ ಬಿಡುಗಡೆಯಾಗಲಿದ್ದು ಮಾರುಕಟ್ಟೆಯಲ್ಲಿ ಮ್ಯಾಜಿಕ್ ಮಾಡಿ ಮತ್ತೊಮ್ಮೆ ಬ್ಲಾಕ್ ಬೆರ್ರಿ ಸಾಮ್ರಾಜ್ಯ ಉದಯವಾಗಲು ಕಾರಣವಾಗಬಹುದೇ! ಈಗಲೇ ಬೇಕೆಂದರೆ UK ನಲ್ಲಿ ಅಡ್ವಾನ್ಸ್ ಬುಕಿಂಗ್ ಮೂಲಕ ಪಡೆಯಬಹುದು, ಟ್ರೈ ಮಾಡಿ...

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot