ಫುಜಿತ್ಸು ತೊಷಿಬಾ ಮೊದಲ ವಿಂಡೋಸ್ 7 ಮೊಬೈಲ್

Posted By: Staff

ಫುಜಿತ್ಸು ತೊಷಿಬಾ ಮೊದಲ ವಿಂಡೋಸ್ 7 ಮೊಬೈಲ್
ಆಂಡ್ರಾಯ್ಡ್ ಕ್ಷೇತ್ರದಲ್ಲಿ ಆಪಲ್ ಮತ್ತು ಮೈಕ್ರೊಸಾಫ್ಟ್ ಪ್ರಾಬಲ್ಯ ಪಡೆದಿವೆ. ಆದರೆ ವಿಂಡೊಸ್ ಫೋನ್ 7 ಅಥವಾ ಮ್ಯಾಂಗೊ ಎಂಬ ಮೊಬೈಲ್ ಅಪರೇಟಿಂಗ್ ಸಿಸ್ಟಮ್ ಬರಲಿದ್ದು, ಆಪಲ್ ಮುಂತಾದ ಕಂಪನಿಗಳಿಗೆ ಗರಬಡಿಸಲಿದೆ.

ಹೆಚ್ಚಿನ ಕಂಪನಿಗಳು ತಮ್ಮ ಮೊಬೈಲಿಗೆ ಅಪರೇಟಿಂಗ್ ಸಿಸ್ಟಮ್(ಒಎಸ್) ನಿರ್ಮಿಸಲು ಮೈಕ್ರೊಸಾಫ್ಟ್ ನೊಂದಿಗೆ ಸಹಭಾಗಿತ್ವ ಮಾಡಿಕೊಂಡಿವೆ. ಆಂಡ್ರಾಯ್ಡ್ ಫ್ಲಾಟ್ ಫಾರ್ಮ್ ನಲ್ಲಿ ಬರುವ ಸ್ಮಾರ್ಟ್ ಫೋನ್ ಒಎಸ್ ಒಂದಿಷ್ಟು ದುಬಾರಿಯಾಗಿದೆ.

ಫುಜಿತ್ಸು ತೊಷೀಬಾ ಕಂಪನಿಯು ಶೀಘ್ರದಲ್ಲಿ ಈ ಅಪರೇಟಿಂಗ್ ಸಿಸ್ಟಮ್ ಮೊಬೈಲ್ ಹೊರತರುವುದಾಗಿ ಪ್ರಕಟಿಸಿದೆ. ಕಂಪನಿ ಹೊರತರಲಿರುವ ವಿಂಡೋಸ್ 7 ಮೊಬೈಲ್ ನೂತನ ಸ್ಮಾರ್ಟ್ ಫೋನ್ ಹೆಸರು IS12T. ಇದು ಅತ್ಯಂತ ಸಣ್ಣ(10.6 mm) ಫೋನಾಗಿದೆ. ಮತ್ತೊಂದು ಖುಷಿಯ ವಿಷ್ಯವೆಂದರೆ ಇದು ವಾಟರ್ ಫ್ರೂಫ್ ಫೋನಾಗಿರಲಿದೆ. ಆದರೆ ಶೀಘ್ರದಲ್ಲಿ ಈ ಫೋನ್ ಜಪಾನಿನಲ್ಲಿ ದೊರಕಲಿದೆ. ಭಾರತಕ್ಕೆ ಬರಲು ಹೆಚ್ಚು ದಿನ ಕಾಯಬೇಕಿಲ್ಲ ಎನ್ನಲಾಗಿದೆ.

ವಿಶೇಷತೆ
* ಡಿಸ್ ಪ್ಲೇ ಗಾತ್ರ 3.7 ಇಂಚು
* ವಿಂಡೋಸ್ ಒಎಸ್
* 13.2 ಮೆಗಾ ಫಿಕ್ಸೆಲ್ ಕ್ಯಾಮರಾ
* ವಾಟರ್ ಫ್ರೂಫ್

ಕಂಪನಿಯು ನೂತನ ಫೋನಿನ ವಿಶೇಷತೆ ಮತ್ತು ದರದ ಕುರಿತು ಹೆಚ್ಚಿನ ಮಾಹಿತಿ ನೀಡಿಲ್ಲ. ಸೆಪ್ಟಂಬರ್ ವೇಳೆಗೆ ಇದು ಜಪಾನ್ ಮಳಿಗೆಗಳಲ್ಲಿ ದೊರಕಲಿದೆ. ನಂತರದ ಕೆಲವೇ ದಿನಗಳಲ್ಲಿ ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಯಲ್ಲಿ ದೊರಕಲಿದೆಯಂತೆ!

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot