Subscribe to Gizbot

ಎಲ್ ಜಿ: ಆಂಡ್ರಾಯ್ಡ್ ಗೆ ವಿದಾಯ, ವಿಂಡೋಸ್ ಗೆ ಸ್ವಾಗತ!

Posted By: Staff

ಎಲ್ ಜಿ: ಆಂಡ್ರಾಯ್ಡ್ ಗೆ ವಿದಾಯ, ವಿಂಡೋಸ್ ಗೆ ಸ್ವಾಗತ!
ಬೆಂಗಳೂರು, ಜು. 28: ಸ್ಮಾರ್ಟ್ ಫೋನ್ ಅಂದ್ರೆ ಆಂಡ್ರಾಯ್ಡ್ ಎಂಬ ಕಾಲ ನಿಧಾನವಾಗಿ ಮರೆಯಾಗುತ್ತಿದೆಯೇ? ಹೀಗೊಂದು ಪ್ರಶ್ನೆ ನಿಮ್ಮನ್ನು ಕಾಡಿದರೆ ಸಹಜವೇ! ಏಕೆಂದರೆ ಅದು ಈಗ ವಾಸ್ತವ. ಏಕೆಂದರೆ ಆಂಡ್ರಾಯ್ಡ್ OS ನಿಂದ ಸ್ಮಾರ್ಟ್ ಫೊನ್ ತಯಾರಿಸಿ ಒಂದರ ಹಿಂದೆ ಇನ್ನೊಂದು ಮೊಬೈಲ್ ಮಾರುಕಟ್ಟೆಗೆ ಬಿಡುತ್ತಿದ್ದ ನೋಕಿಯಾ, ಸ್ಯಾಮ್ ಸಂಗ್, ಎಲ್ ಜಿ ಈಗ ಬದಲಿ OS ಗಾಗಿ ಹಂಬಲಿಸುತ್ತಿರುವುದು ಕಟು ಸತ್ಯ.

ಇದೀಗ ಎಲ್ ಜಿ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಬದಲಿ OS 'ವಿಂಡೋಸ್ ಫೋನ್ 7 ಮ್ಯಾಂಗೋ' ನಿಂದ ತಯಾರಿಸಿ ಮೊಬೈಲ್ ಬಿಡುಗಡೆಗೆ ಸಜ್ಜಾಗಿದೆ. ಹೀಗಾಗಿ ಇನ್ನು ಮುಂದೆ ಆಂಡ್ರಾಯ್ಡ್ OS & iOS ಅಧಿಪತ್ಯಕ್ಕೆ ತಾತ್ಕಾಲಿಕ ತಡೆಯಂತೂ ಬೀಳಲಿದೆ.

ಈ ಹೊಸ OS 'ವಿಂಡೋಸ್ ಫೋನ್ 7 ಮ್ಯಾಂಗೋ' ನಿಂದ ಎಲ್ ಜಿ ತಯಾರಿಸಿ ಬಿಡುಗಡೆ ಮಾಡಲಿರುವ ಮೊಬೈಲ್ ಹೆಸರು " ಎಲ್ ಜಿ ಫ್ಯಾಂಟಸಿ". ಈ ಹೊಸ ಮೊಬೈಲ್ ನಲ್ಲಿ ದೊಡ್ಡ 4.5 ಇಂಚ್ ಡಿಸ್ ಪ್ಲೇ ಹೊಂದಿರುವ ಇದು ಆಧುನಿಕ ಮಲ್ಟಿಮೀಡಿಯಾ, HD ವಿಡಿಯೋ ಪಾರ್ಮೆಟ್ಸ್, 8 ಮೆಗಾ ಪಿಕ್ಸೆಲ್ ಫವರ್ ಫುಲ್ ಕ್ಯಾಮೆರಾ, ಬ್ಲೂ ಟೂಥ್ 3.0 ಆವೃತ್ತಿ, 4G ನೆಟ್ ವರ್ಕ್, 3G & Wi-Fi ಕನೆಕ್ಟಿವಿಟಿ ಇದೆ.

ಎಲ್ಲಾ ಆಧುನಿಕ ಫೀಚರ್ಸ್ ಹೊಂದಿರುವ ಇದರ ಬೆಲೆ ಗಗನಕ್ಕೆ ಸಮೀಪವಿರುವ ಸಂದೇಹವಿದೆ. ಮಾರುಕಟ್ಟೆಗೆ ಬಂದಾಗ ನಿಮ್ಮ ಕೈಗೆಟಕುವಂತೆ ಇದ್ದರೆ ಖಂಡಿತ ನಿಮ್ಮ ಕೈನಲ್ಲೊಂದಿರಲಿ...

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot