Subscribe to Gizbot

ಝೆನ್ ಮತ್ತೊಂದು ಮೊಬೈಲ್ ನೊಂದಿಗೆ ಲಗ್ಗೆ

Posted By: Staff

ಝೆನ್ ಮತ್ತೊಂದು ಮೊಬೈಲ್ ನೊಂದಿಗೆ ಲಗ್ಗೆ
ಬೆಂಗಳೂರು, ಜು. 28: ಭಾರತೀಯ ಗ್ರಾಹಕರ ನಾಡಿ ಮಿಡಿತವನ್ನು ಝೆನ್ ಚೆನ್ನಾಗಿ ಅರ್ಥೈಸಿಕೊಂಡಿದೆ. ಈಗಾಗಲೇ ಸಾಕಷ್ಟು ಫೋನ್ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಅದು ಈಗ ಹೊಸ ಮೊಬೈಲ್ ನೊಂದಿಗೆ ಮತ್ತೆ ಬರಲು ಸಜ್ಜಾಗಿದೆ.

ಈಗ ಬರುತ್ತಿರುವ ಝೆನ್ ಹೊಸ ಮೊಬೈಲ್- ಝೆನ್ ಫ್ಲಿಕ್ M45. ಈ ಮೊಬೈಲ್ 7.1 CM ಕೆಪಾಕ್ವಿವ್ ಟಚ್ ಸ್ಕ್ರೀನ್ ಹೊಂದಿರುವ ಎಂಟ್ರಿ ಲೆವೆಲ್ ಬೇಸಿಕ್ ಫೋನ್ ಆಗಿದೆ. ಜಾವಾ OS ಮೂಲಕ ಕಾರ್ಯ ನಿರ್ವಹಿಸುವ ಇದು ಪಿಂಚ್ ಝೂಮ್ & ಸ್ಕ್ರಾಲ್ ಕಾರ್ಯವನ್ನು ನಿರ್ವಹಿಸುವುದರೊಂದಿಗೆ ಪರ್ಸನಲೈಜ್ಡ್ ಹೋಮ್ ಸ್ಕ್ರೀನ್ ಹೊಂದಿದೆ.

*** ಇನ್ನುಳಿದ ವಿಶೇಷತೆಗಳು:
* 3.2 ಮೆಗಾ ಪಿಕ್ಸೆಲ್ ಕ್ಯಾಮೆರಾ
* SD ಕಾರ್ಡ್ ಮೂಲಕ ವಿಸ್ತರಿಸಬಹುದಾದ 16 GB ಮೆಮೊರಿ
* ಜಾವಾ
* ಮಲ್ಟಿಮೀಡಿಯಾ ಸಹಕಾರ
* ಪರ್ಸನಲೈಜ್ಡ್ ಹೋಮ್ ಸ್ಕ್ರೀನ್

ಈ ವಿಶೇಷತೆಗಳೊಂದಿಗೆ 4GB ಮೈಕ್ರೋ SD ಕಾರ್ಡ್ ನಲ್ಲಿ ಬಾಲಿವುಡ್ ಸುಪರ್ ಹಿಟ್ ಸಿನಿಮಾಗಳಾದ 3 ಈಡಿಯಟ್ಸ್, ದಬಾಂಗ್, ಮತ್ತು ದೀವಾರ್ ಗಳು ಲಭ್ಯವಿದೆ. ಇದರ ಬೆಲೆ ಸುಮಾರು ರು. 5,000. ಈ ಹೊಸ ಮೊಬೈಲ್ ಮಾರುಕಟ್ಟೆಯಲ್ಲಿರುವ ಇತರ ಬೇಸಿಕ್ ಫೊನ್ ಗಳಿಗೆ ಖಂಡಿತವಾಗಿ ಸಮರ್ಥ ಸ್ಪರ್ಧೆ ನೀಡಲಿರುವುದಂತೂ ಗ್ಯಾರಂಟಿ!

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot