ಟಚ್ ಮಾಡಿ ನೋಡಿ ಹೊಸ ಸೋಲ್ ಮೊಬೈಲ್

Posted By: Staff

ಟಚ್ ಮಾಡಿ ನೋಡಿ ಹೊಸ ಸೋಲ್ ಮೊಬೈಲ್
ಭಾರತದ ಚಿರಪರಿಚಿತ ಮೊಬೈಲ್ ಕಂಪೆನಿಗಳಲ್ಲಿ ಮ್ಯಾಕ್ಸ್ ಕೂಡ ಒಂದು. ಮ್ಯಾಕ್ಸ್ ಈಗಾಗಲೇ ಸಾಕಷ್ಟು ಮೊಬೈಲ್ ಗಳನ್ನು ಮಾರುಕಟ್ಟೆಗೆ ತಂದಿದೆ. ಈ ಬಾರಿ Maxx Soul MS 727 ಎಂಬ ಬಜೆಟ್ ಮೊಬೈಲನ್ನು ಬಿಡುಗಡೆ ಮಾಡುವ ಮೂಲಕ ಪ್ರಚಾರದಲ್ಲಿದೆ.

ಇದು ಟಚ್ ಅಂಡ್ ಟೈಪ್ ಸ್ಲೈಡರ್ ಮೊಬೈಲ್ ಆಗಿದ್ದು, 2.8 ಇಂಚು ಡಿಸ್ ಪ್ಲೇ ಹೊಂದಿದೆ. ಎರಡು ಸಿಮ್ ಗಳ ಸಾಮರ್ಥ್ಯವಿರುವ ಈ ಮೊಬೈಲ್ ನಲ್ಲಿ ಅತ್ಯಾಧುನಿಕ ತಂತ್ರಜ್ಞಾನಕ್ಕೇನೂ ಕಡಿಮೆಯಿಲ್ಲ. ಪೂರ್ತಿ ಮೆಟಲ್ ಹೊದಿಕೆಯಿರುವ ಈ ಮೊಬೈಲ್ ನೋಡಲು ಸ್ಟೈಲಿಶ್ ಕೂಡ ಆಗಿದೆ.

ಆಪರೇಟ್ ಮಾಡಲು ಟಚ್ ಸ್ಕ್ರೀನ್ ಮತ್ತು ಮೆಸೇಜ್ ಮಾಡಲು ಕೀಪ್ಯಾಡ್ ಉದ್ದೇಶವಿಟ್ಟುಕೊಂಡು ಈ ಮೊಬೈಲನ್ನು ತಯಾರಿಸಲಾಗಿದೆ. ಮಲ್ಟಿಮೀಡಿಯಾದ ಎಲ್ಲ ಫೀಚರ್ಸ್ ಇರುವ ಈ ಮೊಬೈಲ್ ಗೆ 2GB ಮೈಕ್ರೊ SD ಮೆಮರಿ ಕಾರ್ಡ್ ನೀಡಲಾಗಿದೆ. ಕಾರ್ಡ್ ಗೆ ಹಾಡುಗಳನ್ನು ಮತ್ತು ವಿಡಿಯೋಗಳನ್ನು ಪ್ರಿ ಲೋಡ್ ಮಾಡಿಕೊಡಲಾಗುತ್ತೆ.

1.3 ಮೆಗಾ ಪಿಕ್ಸಲ್ ಕ್ಯಾಮೆರಾ ಮತ್ತು ವಿಡಿಯೋ ರೆಕಾರ್ಡಿಂಗ್ VGA ಕೂಡ ಇದರಲ್ಲಿದೆ. ಇದರಲ್ಲಿ ಜಾವಾ OS ಇದ್ದು, WPA ಬೆಂಬಲಿತವಾಗಿದೆ. ಇಂಟರ್ನೆಟ್ ಮತ್ತು GPRS ಗಾಗಿ opera mini browser ಒದಗಿಸಲಾಗಿದೆ. ಬ್ಲೂಟೂಥ್, ಎಫ್.ಎಂ.ರೇಡಿಯೋ, ಎಫ್.ಎಂ.ಶೆಡ್ಯೂಲಿಂಗ್ ಮುಂತಾದ ಸೌಲಭ್ಯಗಳನ್ನು ಎಫ್.ಎಂ.ಪ್ರಿಯರಿಗೆಂದೇ ನೀಡಲಾಗಿದೆ. ಇದರ ಬೆಲೆ 3,395 ಆಗಿದ್ದು, ಕೈಗೆಟುಕುವಂತಿದೆ.

ಮ್ಯಾಕ್ಸ್ ಸೋಲ್ MS 727 ನ ವಿಶೇಷತೆಗಳು:
* ಡುಯಲ್ ಸಿಮ್
* 1.3 ಮೆಗಾ ಪಿಕ್ಸಲ್ ಕ್ಯಾಮೆರಾ
* ಜಾವಾ
* 2GB ಮೈಕ್ರೊ SD ಮೆಮರಿ ಪ್ರಿಲೋಡೆಡ್
* ಬ್ಲೂಟೂಥ್
* GPRS
* ಒಪೆರಾ ಮಿನಿ ಬ್ರೌಸರ್
* ಬೆಲೆ 3395

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot