ಒಂದೇ ಒಂದು ಮೊಬೈಲಿನಲಿ ಇಂದು ಜಗವೇ ಕಾಣುವುದು

Posted By: Staff

ಒಂದೇ ಒಂದು ಮೊಬೈಲಿನಲಿ ಇಂದು ಜಗವೇ ಕಾಣುವುದು
ಎಲ್ಲೆಡೆ ಈಗ ಮೊಬೈಲ್ ಘಲ್, ಎಲ್ಲಲ್ಲೂ ಈಗ ಮೊಬೈಲ್ ಮೊಬೈಲ್. ಒಂದಾನೊಂದು ಕಾಲದಲ್ಲಿ ಇದು ಶ್ರೀಮಂತರ ಸ್ವತ್ತಾಗಿತ್ತು. ಆದರೆ ಈಗ ಇದು ಎಲ್ಲರಲ್ಲಿರುವ ವಸ್ತು. ಸಂಪರ್ಕ ಮಾಧ್ಯಮಗಳಲೆಲ್ಲಾ ಇದು ಅತ್ಯಂತ ಅನಿವಾರ್ಯ ಎನಿಸಿಕೊಂಡಿದ್ದು ಇದರ ಕರಾಮತ್ತು!

ಜಾವಾ ಆಧರಿಸಿ ಕೆಲಸ ಮಾಡುವ ಫೊನ್ ಈಗ ಹಳೆಯದು. ನಂತರ ಬಂದ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಗೆ ಈಗ ಮಧ್ಯ ಪ್ರಾಯ. ಅಥವಾ ಕೊನೆಗಾಲ!. ಮುಂದೆ ಬರಲಿದೆ ವಿಂಡೋಸ್ ಫೊನ್ 7 ಅಥವಾ ಮ್ಯಾಂಗೋ.

ಬೇಸಿಕ್ ಮಾಡೆಲ್ ನಿಂದ ಸ್ಮಾರ್ಟ್ ಫೊನ್ ತನಕ ಸಾಗಿ ಬಂದ ಮೊಬೈಲ್ ಯಾತ್ರೆ ಈಗ ಹೈ ಎಂಡ್ ಆಗಿದೆ. ಮುಂದೆ ಅದೇನಾಗುತ್ತೋ!. ದಿನದಿನಕ್ಕೂ ಮೊಬೈಲ್ ಸ್ಪರ್ಧೆ ಏರುತ್ತಲೇ ಸಾಗಿ ಗ್ರಾಹಕರಿಗೆ ಅನುಕೂಲದ ಜೊತೆ ಗೊಂದಲವೂ ಆಗತೊಡಗಿದೆ. ಯಾವುದನ್ನು ತಗೋಬೇಕು ಎಂಬುದಕ್ಕಿಂತ ಯಾವುದನ್ನು ಬಿಡಬೇಕು ಎಂಬುದೇ ದೊಡ್ಡ ಗೊಂದಲವಾಗಿ ಕಾಡತೊಡಗಿದೆ.

ತಲೆ ಕೆಡಿಸಿಕೊಳ್ಳಬೇಡಿ ಗ್ರಾಹಕರೆ, ನಾವಿದ್ದೇವೆ ಎಂದೆಂದಿಗೂ ನಿಮ್ಮೊಂದಿಗೆ. ಯಾವುದರಲ್ಲಿ ಏನಿದೆ ಏನಿಲ್ಲ ಎಂಬ ಸಮಗ್ರ ಮಾಹಿತಿಯೊಂದಿಗೆ. ದಿನವೂ ತಪ್ಪದೇ ಓದಿ ಮೊಬೈಲ್ ಮಾಹಿತಿ. ನಿಮಗಿಷ್ಟವಾದ ಮೊಬೈಲ್ ನಿಮ್ಮ ಕೈಯಲ್ಲಿರಲಿ...

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot