Subscribe to Gizbot

ಮೋಟೋರೊಲಾ ಮೊಬೈಲ್ ಸೂಪರ್ರೋ...ಸೂಪರ್!

Posted By: Super

ಮೋಟೋರೊಲಾ ಮೊಬೈಲ್ ಸೂಪರ್ರೋ...ಸೂಪರ್!
ಬೆಂಗಳೂರು, ಜು. 31: ಪ್ರಖ್ಯಾತ ಮೊಬೈಲ್ ಕಂಪೆನಿ ಮೋಟೋರೊಲಾ ಈಗ ಹೊಸದೊಂದು ಸುಪರ್ ಫೊನ್ XT860 4G ಬಿಡುಗಡೆಗೆ ಸಜ್ಜಾಗಿದೆ.

ಅಮೇರಿಕಾ ಮತ್ತು ಕೆನಡಾ ಮಾರುಕಟ್ಟೆಯಲ್ಲಿ ಡ್ರಾಯ್ಡ್ 3 ಎಂಬ ಹೆಸರಿನಲ್ಲಿ ಓಡಾಡಲಿರುವ ಈ ಮೊಬೈಲ್ ಜಗತ್ತಿನ ಸದ್ಯದ ಅತ್ಯಂತ ತೆಳುವಾದ QWERTY ಕೀ ಪ್ಯಾಡ್ ಹೊಂದಿರುವ ಫೊನ್ ಆಗಿದೆ. ಜತೆಗೆ ಅತ್ಯಂತ ಸಣ್ಣ ಆಕಾರ ಹೊಂದಿ ನಾಜೂಕು ನಾರಿಯಂತಿದೆ. ದೊಡ್ಡ 4 ಇಂಚ್ ನ ಟಚ್ ಸ್ಕ್ರೀನ್ ಹೊಂದಿರುವ ಇದು ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್ OS ಮೂಲಕ ಕಾರ್ಯ ನಿರ್ವಹಿಸಲಿದೆ.

ಇದು 8 ಮೆಗಾ ಪಿಕ್ಸೆಲ್ ಕ್ಯಾಮೆರಾ ಹೊಂದಿದ್ದು 1080p ಸಾಮರ್ಥ್ಯದ ವಿಡಿಯೋ ರೆಕಾರ್ಡಿಂಗ್ ನಿರ್ವಹಿಸಲು ಸಮರ್ಥವಾಗಿದೆ. 16 GB ಆಂತರಿಕ ಹಾಗೂ SD ಕಾರ್ಡ್ ಮೂಲಕ ವಿಸ್ತರಿಸಬಲ್ಲ 32 GB ಮೆಮೊರಿ ಇದೆ. ಇನ್ನು ಮಲ್ಟಿಮೀಡಿಯಾದಲ್ಲಿ ಹೈ ಡೆಫನಿಷನ್ ವಿಡಿಯೋ ಫಾರ್ಮೆಟ್ಸ್ ಹೊಂದಿ ಆಡಿಯೋ & ವಿಡಿಯೋ ಸುಪರ್ ಸೌಲಭ್ಯ ಇದರಲ್ಲಿದೆ.

ಇದರಲ್ಲಿ 4G & 3G ನೆಟ್ ವರ್ಕ್, Wi-Fi, ಬ್ಲೂ ಟೂಥ್, GPRS, EDGE, ಜಾವಾ, 1GHz ಪ್ರೊಸೆಸರ್, AGPS ಸಹಕಾರದ GPS ಎಲ್ಲವೂ ಇದೆ. ನಿಜವಾಗಿಯೂ ಇದು ಸುಪರ್ರೋ ಸುಪರ್ರು ಎನಿಸುತ್ತಿದೆ ಅಲ್ಲವೇ? ಬೆಲೆ ಗೊತ್ತಾಗಿಲ್ಲದ ಇದು ಭಾರತಕ್ಕೆ 2012 ರಲ್ಲಿ ಕಾಲಿಡುವ ನಿರೀಕ್ಷೆಯಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot