Subscribe to Gizbot

ಸ್ಯಾಮ್ ಸಂಗ್ ಹೊಸ ಟ್ರಾನ್ಸ್ ಫಾರ್ಮ್ ಧನ್ ಧನಾ ಧನ್

Posted By: Super

ಸ್ಯಾಮ್ ಸಂಗ್ ಹೊಸ ಟ್ರಾನ್ಸ್ ಫಾರ್ಮ್ ಧನ್ ಧನಾ ಧನ್
ಬೆಂಗಳೂರು, ಜು. 31: ಖ್ಯಾತ ಮೊಬೈಲ್ ಕಂಪೆನಿ ಸ್ಯಾಮ್ ಸಂಗ್ ಇದೀಗ ತನ್ನ ಚಿತ್ತವನ್ನು ಭಾರತೀಯ ಮಧ್ಯಮ ತರಗತಿಯ ಜನರೆಡೆಗೆ ಕೇಂದ್ರೀಕರಿಸಿದೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವ ಇದು, ಸದ್ಯದಲ್ಲೇ 'ಟ್ರಾನ್ಸ್ ಫಾರ್ಮ್' ಎಂಬ ಹೊಸ ಮೊಬೈಲ್ ಭಾರತದ ಮಾರುಕಟ್ಟೆಗೆ ತರುತ್ತಿದೆ.

ಅದರಲ್ಲೂ ಆಂಡ್ರಾಯ್ಡ್ ಆಧಾರಿತ ಮೊಬೈಲ್ ಸ್ಯಾಮ್ ಸಂಗ್ ಕಂಪೆನಿಯಿಂದ ಹೆಚ್ಚು ಹೆಚ್ಚು ಹೊರಬರುತ್ತಿದೆ. ಈಗ ಹೊರಬರುತ್ತಿರುವ ಹೊಸ ಮೊಬೈಲ್ ಆಂಡ್ರಾಯ್ಡ್ ಆಧಾರಿತ 'ಟ್ರಾನ್ಸ್ ಫಾರ್ಮರ್ ಸಾಕಷ್ಟು ನವನವೀನವಾಗಿದೆ.

ದೊಡ್ಡ 3.5 ಇಂಚ್ ಟಚ್ ಸ್ಕ್ರೀನ್, QWERTY ಕೀ ಪ್ಯಾಡ್, ದೊಡ್ಡ 3.5 ಡಿಸ್ ಪ್ಲೇ ಹೊಂದಿರುವ ಮೊಬೈಲ್ ಆಕರ್ಷಕ ರೂಪ ಹೊಂದಿದೆ. ಆಂಡ್ರಾಯ್ಡ್ ಫ್ರೋಯೋ OS ಹೊಂದಿರುವ ಇದು 3.2 ಮೆಗಾ ಪಿಕ್ಸೆಲ್ ಕ್ಯಾಮೆರಾ, ವಿಡಿಯೋ ರೆಕಾರ್ಡಿಂಗ್ ಅಳವಡಿಸಲ್ಪಟ್ಟಿದೆ.

MP3, MP4, AAC+, AVI, 3GP, WMV & FM ರೇಡಿಯೋ, 3.5 mm ಯುನಿವರ್ಸೆಲ್ ಆಡಿಯೋ ಜ್ಯಾಕ್ ಕೂಡ ಇದೆ. 512 MB ಆಂತರಿಕ ಹಾಗೂ SD ಕಾರ್ಡ್ ಮೂಲಕ 32 GB ವರೆಗೆ ವಿಸ್ತರಿಸಬಲ್ಲ ಮೆಮೊರಿ ಹೊಂದಿರುವ ಇದು ಹಾಡು, ಸಿನಮಾ ಹಾಗೂ ವಿಡಿಯೋ ಕ್ಲಿಪ್ಸ್ ಗಳ ಖಜಾನೆಯನ್ನೇ ಹೊಂದಿದೆ.

ದಕ್ಷ ಕಾರ್ಯಕ್ಷಮತೆಯ 3G ನೆಟ್ ವರ್ಕ್, Wi-Fi, ಬ್ಲೂ ಟೂಥ್, GPRS ಮತ್ತು EDGE ಒಳಗೊಂಡಿದೆ. ಉತ್ತಮ ಬ್ಯಾಟರಿ ಬ್ಯಾಕಪ್ ಇದೆ. 800 MHz ಪ್ರೊಸೆಸರ್ ಹೊಂದಿರುವ ಈ ಹೊಸ ಮೊಬೈಲ್ ಕಾರ್ಯದಕ್ಷತೆ ಉತ್ತಮವಾಗಿರಲಿದೆ.

ಸಾಕಷ್ಟು ಆಧುನಿಕವಾಗಿರುವ ಈ ಫೊನ್ ಬೆಲೆ ರು. 8000. ಉತ್ತಮ ಅಂಶಗಳ ಪ್ಯಾಕೇಜ್ ಎಂದು ಹೇಳಬಹುದಾದ ಈ ಮೊಬೈಲ್ ಬೇಕೆನಿಸುತ್ತಿದೆಯಾ? ಅಥವಾ ಈ ಮೊಬೈಲ್ ನಲ್ಲಿ ಇನ್ನೂ ಹೆಚ್ಚಿನ ವಿಶೇಷತೆಯಾ!

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot