ತರ ತರ ಹೊಸ ತರದ ಲೀಡ್ ಎಚ್ ಟಿ ಸಿ ಮೊಬೈಲ್

By Super
|
ತರ ತರ ಹೊಸ ತರದ ಲೀಡ್ ಎಚ್ ಟಿ ಸಿ ಮೊಬೈಲ್
ಬೆಂಗಳೂರು, ಆ, 01: ಮೊಬೈಲ್ ಕಂಪೆನಿ ಎಚ್ ಟಿ ಸಿ, ಹೊಸ ಹೊಸ ಮೊಬೈಲ್ ಗಳನ್ನು ಮಾರುಕಟ್ಟೆಗೆ ಬಿಡುವುದರಲ್ಲಿ ಯಾವತ್ತೂ ಹಿಂದೆ ಬಿದ್ದಿಲ್ಲ. ಈಗ ಇನ್ನೊಂದು ಹೊಸ ಮೊಬೈಲ್ 'ಲೀಡ್' ಮೂಲಕ ಮತ್ತೆ ಲಗ್ಗೆ ಇಡುತ್ತಿದೆ. ಬನ್ನಿ ಹೇಗಿದೆ ಈ ಹೊಸ ಮೊಬೈಲ್ ನೋಡೋಣ!

ದೊಡ್ಡ 4.3 ಇಂಚ್ ಟಚ್ ಸ್ಕ್ರೀನ್ ಹೊಂದಿರುವ ಇದು 2.3.4 ಆವೃತ್ತಿಯ ಆಂಡ್ರಾಯ್ಡ್ ಜಿಂಜರ್ ಬ್ರೆಡ್ OS ಮೂಲಕ ಕಾರ್ಯ ನಿರ್ವಹಿಸುತ್ತದೆ. ಇದರಲ್ಲಿ1.2 GHz ಕ್ವುಲ್ ಕಾಮ್ ಪ್ರೊಸೆಸರ್, 768 MB ಯ RAM, 5 ಮೆಗಾ ಪಿಕ್ಸೆಲ್ ಕ್ಯಾಮೆರಾ, ಹೈ ಡೆಪನಿಷನ್ 720p ವಿಡಿಯೋ ರೆಕಾರ್ಡಿಂಗ್, VGA ಫ್ರಂಟ್ ಕ್ಯಾಮೆರಾ, 3G ನೆಟ್ ವರ್ಕ್ ಎಲ್ಲಾ ಸೌಲಭ್ಯಗಳಿವೆ.

ವಿಶೇಷತೆಗಳ ಪಟ್ಟಿ ಈರೀತಿ ಇದೆ:
* 1.2 GHz ಪ್ರೊಸೆಸರ್
* 2.3.4 OS ಆಂಡ್ರಾಯ್ಡ್ ಜಿಂಜರ್ ಬ್ರೆಡ್
* 768 MB RAM, ವಿಸ್ತರಿಸಬಹುದಾದ 32 GB ಮೆಮೊರಿ
* 3G, GPRS, EDGE
* Wi-Fi & ಬ್ಲೂ ಟೂಥ್
* ಜಾವಾ
* ಗೇಮ್ಸ್

ಇನ್ನು ಇದರ ದರ, ಬಡುಗಡೆಯ ದಿನಾಂಕ ನಿಗದಿಯಾಗಿಲ್ಲ. ಸದ್ಯದಲ್ಲಿಯೇ ಬರುವುದಂತೂ ಗ್ಯಾರಂಟಿ. ಯಾವುದಕ್ಕೂ ಹತ್ತಿರದ ಶೋರೂಂ ಮೇಲೆ ಕಣ್ಣಿಟ್ಟಿರಿ!

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X