ಸ್ಪರ್ಧೆಯಲ್ಲಿ ಮೊಬೈಲ್ ಮಾತು... ನನ್ನ ನೀನು ಗೆಲ್ಲಲಾರೆ!

Posted By: Staff

ಸ್ಪರ್ಧೆಯಲ್ಲಿ ಮೊಬೈಲ್ ಮಾತು... ನನ್ನ ನೀನು ಗೆಲ್ಲಲಾರೆ!
ಬೆಂಗಳೂರು, ಆ, 01: ಈಗ ಎಲ್ಲವೂ ದಿನದಿನಕ್ಕೂ ಕಾಯದೇ ಕ್ಷಣಕ್ಷಣಕ್ಕೂ ಬದಲಾಗುವ ಕಾಲ! ಅದು ಮೊಬೈಲಿಗೂ ಅನ್ವಯಿಸುವುದು ಖಂಡಿತ. ಮಾರುಕಟ್ಟೆಯಲ್ಲಿರುವ ಬೇರೆಬೇರೆ ಕಂಪೆನಿಗಳ ಸಾಕಷ್ಟು ಮೊಬೈಲ್ ಗಳೊಂದಿಗೆ ಕಾದಾಡಿ ಇನ್ನೇನು ನಾನೇ ಜಯಶಾಲಿ ಎಂದು ನಿಟ್ಟುಸಿರು ಬಿಡುವ ಹೊತ್ತಿಗೆ ಒಂದೇ ಕಂಪೆನಿಯ ಮೊಬೈಲ್ ಗಳ ನಡುವೆಯೂ ಕಾದಾಡಬೇಕಾದ ಅನಿವಾರ್ಯತೆಯೂ ಎದುರಾಗುತ್ತದೆ. ಇದು ಮೊಬೈಲ್ ಮಾರುಕಟ್ಟೆಯ ವಾಸ್ತವ.

ಆದರೆ ಈಗಿಲ್ಲಿ ನಾವು ನೋಡಲಿರುವುದು 2 ದೈತ್ಯ ಕಂಪೆನಿಗಳ ಮೊಬೈಲ್ ಸ್ಪರ್ಧೆ. ಸ್ಪರ್ಧಿಗಳು- ವ್ಯೂ ಸೋನಿಕ್ ನ V350 ಹಾಗೂ ಮೈಕ್ರೋ ಮ್ಯಾಕ್ಸ್ ನ A70. ಎರಡೂ ಟಚ್ ಸ್ಕ್ರೀನ್ ಆಧಾರಿತ ಹಾಗೂ ಆಂಡ್ರಾಯ್ಡ್ ಫ್ರೋಯೋ OS ಆಧಾರಿತ ಸ್ಮಾರ್ಟ್ ಫೊನ್ ಗಳೆಂಬುದು ವಿಶೇಷ.

ವ್ಯೂ ಸೋನೊಕ್ V350, 3.5 ಇಂಚ್ ಡಿಸ್ ಪ್ಲೇ, 5 ಮೆಗಾ ಪಿಕ್ಸೆಲ್ ಕ್ಯಾಮೆರಾ, ಆಟೋ ಫೋಕಸ್ ಹಾಗೂ ಡಿಜಿಟಲ್ ಝೂಮ್ ಸೌಲಭ್ಯ, ಹೈ ಡೆಫನಿಷನ್ VGA ರೆಕಾರ್ಡಿಂಗ್, ವೈಡ್ ವೆರಾಯ್ಟಿ ಮಲ್ಟಿಮೀಡಿಯಾ ಸಾಮರ್ಥ್ಯ, ಬ್ಲೂ ಟೂಥ್ 2.1, USB PC, Wi-Fi, GPRS, EDGE ಮತ್ತು 3G ಹೈ ಸ್ಪೀಡ್ ಇಂಟರ್ ನೆಟ್ ಸೌಲಭ್ಯ, SD ಕಾರ್ಡ್ ಮೂಲಕ ವಿಸ್ತರಿಸಬಲ್ಲ 32 GB ಮೆಮೊರಿ ಸೌಲಭ್ಯವಿದೆ.

ಆದರೆ ಮೈಕ್ರೋ ಮ್ಯಾಕ್ಸ್ A70, 3.2 ಇಂಚ್ ಟಚ್ ಸ್ಕ್ರೀನ್ ಹೊಂದಿದೆ. ಉಳಿದಂತೆ ಎಲ್ಲಾ ಸೌಲಭ್ಯಗಳು ವ್ಯೂ ಸೋನಿಕ್ ನಂತೆ ಇದೆ. ಇನ್ನು ಬೆಲೆಯ ವಿಷಯಕ್ಕೆ ಬಂದರೆ ವ್ಯೂ ಸೋನೊಕ್ V350, ರು. 14,500 ಹಾಗೂ ಮೈಕ್ರೋ ಮ್ಯಾಕ್ಸ್ A70, ರು. 7,699. ಇವೆರಡರಲ್ಲಿ ನಿಮ್ಮ ಆಯ್ಕೆ ಯಾವುದು? ನೀವೇ ನಿರ್ಧರಿಸಿ...

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot