ಮ್ಯಾಕ್ಸ್ ಟ್ಯಾಬ್ ಲೆಟ್ ಪಿಸಿ ಜಗಕ್ಕೆಲ್ಲಾ ಜಗಮಗಿಸಲಿದೆ

Posted By: Staff

ಮ್ಯಾಕ್ಸ್ ಟ್ಯಾಬ್ ಲೆಟ್ ಪಿಸಿ ಜಗಕ್ಕೆಲ್ಲಾ ಜಗಮಗಿಸಲಿದೆ
ಬೆಂಗಳೂರು, ಆ. 02: ಮ್ಯಾಕ್ಸ್ ಮೊಬೈಲ್ ಕಂಪೆನಿ ಈಗ ಮೊಬೈಲ್ ಜೊತೆಗೆ ಟ್ಯಾಬ್ ಲೆಟ್ ಪಿಸಿ ಬಿಡುಗಡೆ ಮಾಡುವತ್ತ ತನ್ನ ಚಿತ್ತ ನೆಟ್ಟಿದೆ. ಮ್ಯಾಕ್ಸ್ ಗ್ರೂಫ್ ಚೇರ್ ಮನ್ ಶ್ರೀ ಅಜಯ್ ಅಗರ್ವಾಲ್ ಹೇಳಿರುವಂತೆ, ಸಂಪೂರ್ಣ ದೂರದೃಷ್ಟಿಯಿಂದ ದೀರ್ಘಕಾಲ ಬಾಳಿಕೆ ಬರುವ ಟ್ಯಾಬ್ ಲೆಟ್ ಪಿಸಿ ಯನ್ನು ರೆಡಿ ಮಾಡುವ ಕಂಪೆನಿಯ ಉದ್ದೇಶ ಈಗ ಕಾರ್ಯರೂಪಕ್ಕೆ ಬರಲಿದೆ.

ಹೆಚ್ಚು ಬಾಳಿಕೆ ಬರುವ ಬ್ಯಾಟರಿ, ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ, ಸಾಕಷ್ಟು ವಿಶೇಷತೆಗಳ, ಈ ಬರಲಿರುವ ಲ್ಯಾಪ್ ಟಾಪ್ ಈಗ ಮಾರುಕಟ್ಟೆಯಲ್ಲಿರುವ ಪ್ರಾಡೆಕ್ಟ್ ಗಳಿಗೆ ತೀವ್ರ ಸ್ಪರ್ಧೇ ಒಡ್ಡಲಿದೆ. ಈಗ ವಿದೇಶಿ ಕಂಪೆನಿಗಳಿಂದ ಆಳಲ್ಪಡುತ್ತಿರುವ ಈ ಗಜೆಟ್ ಸಾಮ್ರಾಜ್ಯವನ್ನು ತಾನು ಸಂಪೂರ್ಣ ಆವರಿಸುವುದಾಗಿ ಕಂಪೆನಿ ಹೇಳಿಕೊಳ್ಳುತ್ತಿದೆ.

ನವೀನ ರೀತಿಯ ಸುಮಾರು 40 ಬಗೆಗಳಲ್ಲಿ ಬರಲಿರುವ ಈ ಟ್ಯಾಬ್ ಲೆಟ್ ಪಿಸಿ, ಭಾರತೀಯ ಗ್ರಾಹಕರನ್ನು ಗಮನದಲ್ಲಿಟ್ಟು ತಯಾರಿಸದ್ದೆಂದು ಅವರು ಹೇಳಿದ್ದಾರೆ. ಈ ಯೋಜನೆಗೆ ರು, 320 ಕೋಟಿಗಳಷ್ಟು ಹೂಡಿಕೆ ಮಾಡಲಾಗಿದೆಯಂತೆ. ಶೀಘ್ರದಲ್ಲಿ ಬರಲಿರುವ ಇದು ಈ ನಮ್ಮ ದೇಶದಲ್ಲಿ ಹೇಗೆ ಮಾರಟವಾಗಲಿದೆ ಎಂಬುದನ್ನು ಮುಂದೆ ಕಾದು ನೋಡಬೇಕು.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot