ನೋಕಿಯಾ NFC: ಜಗತ್ತೇ ಈಗ ನಿಮ್ಮ ಕೈನಲ್ಲಿ!

Posted By: Staff

ನೋಕಿಯಾ NFC: ಜಗತ್ತೇ ಈಗ ನಿಮ್ಮ ಕೈನಲ್ಲಿ!
ಬೆಂಗಳೂರು, ಆ. 02: ಇಂದು ಪ್ರಪಂಚ ಸಾಕಷ್ಟು ಬದಲಾಗಿದೆ. ಹೊಸ ಹೊಸ ತಂತ್ರಜ್ಞಾನ ಕಾಲಿಟ್ಟಿದೆ. ಈಗ ನೋಕಿಯಾ ಮೊಬೈಲ್ ಒಂದು ಹೊಸ ತಂತ್ರಜ್ಞಾನದ ಮೂಲಕ ಮಾರುಕಟ್ಟೆಗೆ ಬರಲಿದೆ. ಅದು NFC (Near Field Communication) ತಂತ್ರಜ್ಞಾನ. ಇದು 2 ಡಿವೈಸ್ ಮೂಲಕ ಕೇವಲ ಒಂದೇ ಒಂದು ಟಚ್ ನಿಂದ ಡಾಟಾ ಬದಲಾವಣೆ ಮಾಡಬಲ್ಲ NFC Hub. ಅಥವಾ ಇದನ್ನು ಒಂದೇ ಮಾತಿನಲ್ಲಿ ' ಸಮೀಪದಲ್ಲಿಯ ಸಂಪರ್ಕ ' ಎನ್ನಬಹುದು.

ಇದು ಹೊಸ ಸ್ಮಾರ್ಟ್ ಫೋನ್, ಟ್ಯಾಬ್ ಲೆಟ್ ಪಿಸಿ, ಇವುಗಳ ಮೂಲಕ ಹೊಸ ತಂತ್ರಜ್ಞಾನವನ್ನು ಬಳಸಿ ಬ್ಯಾಂಕಿಂಗ್ ಸೇವೆಯನ್ನು ಬಳಸಿಕೊಳ್ಳುವ ಪಾತ್ರ ನಿರ್ವಹಿಸುತ್ತದೆ. ಲಾಕಿಂಗ್ ಕೀ ಕಾರ್ಡ್ ಅಥವಾ ಐಡಿ ಮೂಲಕ ಇದರ ಪ್ರಯೋಜನ ಪಡೆಯಬಹುದು.

ಸದ್ಯ ಇದು ಕೇವಲ ಹೈ ಎಂಡ್ & ದುಬಾರಿ ಬೆಲೆಯ ಫೊನಿನಲ್ಲಿ ಮಾತ್ರ ಲಭ್ಯವಿದ್ದು ಶೀಘ್ರದಲ್ಲಿ ಬೆಲೆ ಕಡಿಮೆಯಾಗಲಿದೆ. ಆಗ ಸಾಮಾನ್ಯ ವರ್ಗವೂ ಇದರ ಪ್ರಯೋಜನ ಪಡೆಯಲಿದೆ.


ಸದ್ಯಕ್ಕೆ ರಿಟೇಲ್ ಶಾಪ್ಸ್, ಹೊಟೆಲ್ಸ್ ಗಳಲ್ಲಿ ಬಳಸಿ ಸಾಕಷ್ಟು ಪ್ರಯೋಜನ ಪಡೆಯಬಲ್ಲ ಈ ಹೊಸ ತಂತ್ರಜ್ಞಾನ, ನೋಕಿಯಾ ಮೂಲಕ ಜಗತ್ತಿನಲ್ಲೆಡೆ ಪ್ರಸಿದ್ಧಿ ಪಡೆದು ಜನಸಾಮಾನ್ಯರಿಗೂ ನಿಲುಕುವ ಕಾಲ ಬರಲಿದೆ. ಅಲ್ಲಿಯವರೆಗೆ ಕಾಯಬೇಕಷ್ಟೇ!

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot