Subscribe to Gizbot

ಹೊಸ ಬಾಳಿಗೆ ನಾ ಜೊತೆಯಾದೆ: ರೇಜ್ ಮೊಬೈಲ್

Posted By: Super

ಹೊಸ ಬಾಳಿಗೆ ನಾ ಜೊತೆಯಾದೆ: ರೇಜ್ ಮೊಬೈಲ್
ಬೆಂಗಳೂರು, ಆ. 02: ಸುಮಾರು 50 ಕ್ಕೂ ಮಿಕ್ಕಿರುವ ಮೊಬೈಲ್ ಕಂಪೆನಿಗಳು ಭಾರತದಲ್ಲಿ ಈಗಾಗಲೇ ಸ್ಪರ್ಧೆಯಲ್ಲಿ ನಿರತವಾಗಿದ್ದರೆ ಇನ್ನೂ ಹೊಸ ಹೊಸ ಕಂಪೆನಿಗಳು ಪಾದಾರ್ಪಣೆ ಮಾಡಲು ಕಾತರದಿಂದಿವೆ. ಆ ಹೊಸ ಕಂಪೆನಿಗಳಲ್ಲಿ ಒಂದಾಗಿರುವ ರೇಜ್ ಸದ್ಯದಲ್ಲಿಯೇ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಬರಲಿರುವ ಹೊಸ ಫೊನ್ ರೇಜ್ RD 20V.

ಈ ಹೊಸ ಫೊನ್, ಡ್ಯುಯಲ್ ಸಿಮ್, ಉತ್ತಮ ರೆಸೊಲ್ಯೂಷನ್ ಇರುವ ಡಿಸ್ ಪ್ಲೇ, ಜಾವಾ ಆಧಾರಿತ OS, ಗೇಮ್ಸ್, 4 GB ಆಂತರಿಕ ಹಾಗೂ ಮೈಕ್ರೋ SD ಕಾರ್ಡ್ ಮೂಲಕ ವಿಸತ್ರಿಸಬಲ್ಲ ಮೆಮೊರಿ, MP3, ವಿಡಿಯೋ ಪ್ಲೇಯರ್, FM ರೇಡಿಯೋ, VGA ಕ್ಯಾಮೆರಾ, ಯುನಿವರ್ಸೆಲ್ 3.5 mm ಹೆಡ್ ಫೊನ್ ಹೊಂದಿದೆ.

ಇದರ ಬೆಲೆ ರು. 2,500. ಇತ್ತೀಚಿಗೆ ಬರುತ್ತಿರುವ ಹೊಸ ಫೊನ್ ಗಳು ಭಾರತ & ಜಾಗತಿಕ ಮಾರುಕಟ್ಟೆಯಲ್ಲಿ ವ್ಯಾಪಾರ ವೃದ್ಧಿಗೆ ಕಂಡುಕೊಂಡ ಏಕೈಕ ಮಾರ್ಗ ಕಡಿಮೆ ಬೆಲೆಗೆ ಹೆಚ್ಚು ವಿಶೇಷತೆಗಳು. ಇದೇ ತಂತ್ರವನ್ನು ನಂಬಿ ಮಾರುಕಟ್ಟೆಗೆ ಬರಲಿದೆ ಈ ರೇಜ್ ಫೊನ್.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot