Subscribe to Gizbot

ತಾಜ್ ಮಹಲ್ ಬಣ್ಣದಲ್ಲಿನ್ನು ಸ್ಯಾಮ್ ಸಂಗ್ ಗೆಲಾಕ್ಸಿ ಲಭ್ಯ

Posted By: Super

ತಾಜ್ ಮಹಲ್ ಬಣ್ಣದಲ್ಲಿನ್ನು ಸ್ಯಾಮ್ ಸಂಗ್ ಗೆಲಾಕ್ಸಿ ಲಭ್ಯ
ಬೆಂಗಳೂರು, ಜು. 02: ಸ್ಯಾಮ್ ಸಂಗ್ ಹೊಸ ಮೊಬೈಲ್ ಬರುತ್ತಿದೆ, ಗೆಲಾಕ್ಸಿ S2 White. ಇದು ಇದೇ ತಿಂಗಳಲ್ಲಿ ಬರುತ್ತಿದ್ದು ಗ್ರಾಹಕರಿಗೆ ಖಂಡಿತ ಪುಳಕವನ್ನು ಉಂಟುಮಾಡಲಿದೆ.

ದೊಡ್ಡ 4.3 ಇಂಚ್ AMOLED ಡಿಸ್ ಪ್ಲೇ ಹೊಂದಿರುವ ಇದು ಹೈ ಡೆಪನಿಷನ್ ಡಿಸ್ ಪ್ಲೇ ಹೊಂದಿದೆ. ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್ OS ಮೂಲಕ ಕಾರ್ಯ ನಿರ್ವಹಿಸುವ ಇದು ಡ್ಯುಯಲ್ ಕೋರ್ 1.2 GHz ಪ್ರೊಸೆಸರ್ ಹಾಗೂ 768 MB, RAM ಒಳಗೊಂಡಿದೆ.

ವಿಶೇಷತೆಗಳು:
* 1.2 GHz ಪ್ರೊಸೆಸರ್
* ಆಂಡ್ರಾಯ್ಡ್ ಜಿಂಜರ್ ಬ್ರೆಡ್ OS
* 8 ಮೆಗಾ ಪಿಕ್ಸೆಲ್ ಕ್ಯಾಮೆರಾ
* ವಿಸ್ತರಿಸಬಲ್ಲ 32 GB ಮೆಮೊರಿ
* ಮಲ್ಟಿ ಪಾರ್ಮೆಟ್ ಮ್ಯೂಸಿಕ್ & ವಿಡಿಯೋ ಪಾರ್ಮೆಟ್ಸ್
* ಜಾವಾ ಸಹಕಾರ

ಸಾಕಷ್ಟು ವಿಶಿಷ್ಟತೆಯನ್ನು ಹೊಂದಿರುವ ಇದರ ಬೆಲೆ ಕೂಡ ಹೆಚ್ಚೆ ಇದೆ. ರು. 32,000 ಬೆಲೆ ನಿಗದಿಯಾಗಿರುವ ಈ ಮೊಬೈಲ್ ಇದೇ ಆಗಸ್ಟ್ ನಲ್ಲಿ ಬರಲಿದೆ. ನೋಡಿ, ಒಂದು ನಿಮಗಿರಲಿ ಅಲ್ಲವೇ!


Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot