ಇಲ್ಲಿದೆ ನೋಡಿ ಹೊಸ ಸ್ಯಾಮ್ ಸಂಗ್ ಲ್ಯಾಪ್ ಟಾಪ್!

Posted By: Staff

ಇಲ್ಲಿದೆ ನೋಡಿ ಹೊಸ ಸ್ಯಾಮ್ ಸಂಗ್ ಲ್ಯಾಪ್ ಟಾಪ್!
ಬೆಂಗಳೂರು, ಆ, 02: ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಾನಿಕ್ಸ್ ಗೂಡ್ಸ್ ಗಳು ಸಾಕಷ್ಟು ಕಡಿಮೆ ದರದಲ್ಲಿ ಸಿಗುತ್ತಿವೆ. ಆಧುನಿಕ ತಂತ್ರಜ್ಞಾನ ಈ ಬೆಳವಣಿಗೆ ಸಾಧ್ಯವಾಗಿರಿಸಿದೆ. ಮೊದಲೆಲ್ಲ ಲ್ಯಾಪ್ ಟಾಪ್ ದರ ಕೈಗೆಟುಕಲು ಸಾಧ್ಯವಿರಲಿಲ್ಲ. ಆದ್ದರಿಂದ ಜನರು ಕಂಪ್ಯೂಟರ್ ಗೆ ಮೊರೆ ಹೋಗುತ್ತಿದ್ದರು. ಆದರೆ ಈಗ ಲ್ಯಾಪ್ ಟಾಪ್ ಅತಿ ಕಡಿಮೆ ಬೆಲೆ, ರು. 15,000 ಕ್ಕೇ ದೊರೆಯುತ್ತಿದೆ.

ಇನ್ನೊಂದು ವಿಷಯವೆಂದರೆ ಈಗ ವಿಐಪಿಗಳ ಕೈನಲ್ಲಿ ಲ್ಯಾಪ್ ಟಾಪ್ ಇದ್ದೇ ಇರುತ್ತದೆ. ನಿನ್ನೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ವೆಂಕಯ್ಯನಾಯ್ಡು ಅವರ ಲ್ಯಾಪ್ ಟಾಪ್ ಎತ್ತಿ ಬಿಸಾಡಿದ್ದು ಗೊತ್ತೇ ಇದ್ಯಲ್ಲ! ಲ್ಯಾಪ್ ಟಾಪ್ ಪೀಸ್ ಪೀಸ್...

ಆದರೆ ಆಶ್ಚರ್ಯವೆಂದರೆ ಈಗೀಗ ಲ್ಯಾಪ್ ಟಾಪ್ ಕೂಡ ತನ್ನ ಆಕರ್ಷಣೆ ಕಳೆದುಕೊಳ್ಳುತ್ತಿದೆ. ಏಕೆಂದರೆ ಈಗ ಬರುತ್ತಿವೆ ಲೇಟೆಸ್ಟ್ ನೆಟ್ ಬುಕ್ಸ್ ಹಾಗೂ ಟ್ಯಾಬ್ ಲೆಟ್ ಪಿಸಿಗಳು. ಇವು ತೀರಾ ಹಗುರವಾಗಿವೆ ಮತ್ತು ಇಂಡರ್ ನೆಟ್ ಸರ್ಫಿಂಗ್, ವರ್ಡ್ ಪ್ರೊಸೆಸಿಂಗ್ ಮುಂತಾದ ಅಗತ್ಯ ಆಧುನಿಕ ಸೌಲಭ್ಯಗಳಿವೆ.

ಇದೀಗ ಸ್ಯಾಮ್ ಸಂಗ್ ತರುತ್ತಿದೆ- ಅಲ್ಟ್ರಾ ಪೋರ್ಟೆಬಲ್ ಲ್ಯಾಪ್ ಟಾಪ್ N100. ಇದು ಅತ್ಯಂತ ಹಗುರ ಹಾಗೂ ಆಕರ್ಷಕವಾಗಿದೆ. ಪೋರ್ಟೆಬಲ್ ಅನ್ನುವುದನ್ನು ಹೆಸರೇ ಸೂಚಿಸುತ್ತಿದೆ.

ಇದು 10.1 ಇಂಚ್ ಡಿಸ್ ಪ್ಲೇ ಸ್ಕ್ರೀನ್ ಹೊಂದಿದ್ದು, 1.33 GHz ಆಟಮ್ ಪ್ರೊಸೆಸರ್ ಹೊಂದಿದೆ. ಜೊತೆಗೆ ಇದು 1GB ಯ DDR3 RAM, ಆಂತರಿಕ ಗ್ರಾಫಿಕ್ಸ್ ಹಾಗೂ 250 GB ಹಾರ್ಡ್ ಡಿಸ್ಕ್ ಸೌಲಭ್ಯವಿದೆ. ಇಂಟೆಲ್ ಮೀಗೋ ಲೈನಕ್ಸ್ OS ಮೂಲಕ ಕಾರ್ಯ ನಿರ್ವಹಿಸುವ ಇದರಲ್ಲಿ ವಿಂಡೋಸ್ 7 OS ಆಯ್ಕೆ ಇದೆ.

ಬರೋಬ್ಬರಿ 3 ಮಿಲಿಯನ್ ಸೇಲ್ಸ್ ಟಾರ್ಗೆಟ್ ನಲ್ಲಿ ಇದನ್ನು ಮಾರಾಟ ಮಾಡಲು ಹೊರಟಿದೆ ಸ್ಯಾಮ್ ಸಂಗ್. 8 ಬೇರೆ ಬೇರೆ ವಿಧಗಳಲ್ಲಿ ಲಭ್ಯವಿರುವ ಇದರ ಬೆಲೆ ರು. 12,290 ರಿಂದ 21,990 ರವರೆಗೆ ಇದೆ. ಇದೇ ತಿಂಗಳು ಮಾರುಕಟ್ಟೆಯಲ್ಲಿ ಸಿಗಲಿದೆ. ಖರೀದಿಸಿ ಆನಂದಿಸಿ...

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot