ಹೊಸ ನೋಕಿಯಾ ಸಿಂಬಿಯನ್ ಅಣ್ಣಾ ಮೋಡಿ ನೋಡಿ!

Posted By: Staff

ಹೊಸ ನೋಕಿಯಾ ಸಿಂಬಿಯನ್ ಅಣ್ಣಾ ಮೋಡಿ ನೋಡಿ!
ಬೆಂಗಳೂರು, ಆ, 03: ನೋಕಿಯಾ ಕಂಪೆನಿಯ ಮೊಬೈಲ್ ಎಂದರೆ ಎಲ್ಲರ ದೃಷ್ಟಿ ಹೊರಳುತ್ತದೆ. ಕಾರಣ ಅದರ ಹೊಸತನ ಹಾಗೂ ವಿಶೇಷತೆಗಳು. ಇದೀಗ ನೋಕಿಯಾ ಹೊಸ ಮೊಬೈಲ್ ಭಾರತೀಯ ಮಾರುಕಟ್ಟೆಗೆ ಬರಲಿದ್ದು ಅದು ಸಿಂಬಿಯನ್ ಅಣ್ಣಾ OS ಆಧಾರಿತ "ನೋಕಿಯಾ 500".

ಇದು ಈಗಾಗಲೇ ಯುರೋಪಿಯನ್ ದೇಶಗಳಲ್ಲಿ ಬಿಡುಗಡೆಯಾಗಿ ಸುದ್ದಿ ಮಾಡುತ್ತಿದೆ.

ದೊಡ್ಡ 3.2 ಇಂಚ್ ಗಳ ಫುಲ್ ಟಚ್ ಸ್ಕ್ರೀನ್ ಹೊಂದಿರುವ ಇದು ಕೆಪಾಕ್ಟಿವ್ ಆಗಿದ್ದು ಹೆಚ್ಚಿನ ರೆಸೊಲ್ಯೂಷನ್ ಹೊಂದಿದೆ. ಇದರಿಂದ ದೃಶ್ಯಗಳ ಸ್ಪಷ್ಟ ಚಿತ್ರಣ ದೊರೆಯಲಿದೆ.

***ಇದರ ವಿಶೇಷತೆಗಳು:
* ಸಿಂಬಿಯನ್ ಅಣ್ಣಾ OS
* 1 GHz ARM ಪ್ರೊಸೆಸರ್
* 5 ಮೆಗಾ ಪಿಕ್ಸೆಲ್ ರೇರ್ ಕ್ಯಾಮೆರಾ
* 32 GB ಮೆಮೊರಿಗೆ ವಿಸ್ತರಿಸಬಲ್ಲ 2GB ಮೈಕ್ರೋ SD ಕಾರ್ಡ್
* FM ರೇಡಿಯೋ & 3.5 mm ಯುನಿವರ್ಸೆಲ್ ಜಾಕ್
* USB PC, GPRS, EDGE,
* 2G ನೆಟ್ ವರ್ಕ್, ಹೈ ಸ್ಪೀಡ್ 3G ಇಂಡರ್ ನೆಟ್, Wi-Fi

ಸಾಕಷ್ಟು ವಿಶೇಷತೆಗಳಿಂದ ಕೂಡಿ ಬರಲಿರುವ ಈ ಮೊಬೈಲ್, ಯುರೋಪಿಯನ್ ಮಾರುಕಟ್ಟೆಯಲ್ಲಿ 150 ಯುರೋ ಬೆಲೆಬಾಳುತ್ತದೆ. ಭಾರತದಲ್ಲಿ ಸುಮಾರು ರು. 11,000 ಆಗಬಹುದೆಂದು ಹೇಳಲಾಗಿದೆ. ಇದು ಮಾರುಕಟ್ಟೆಯಲ್ಲಿ ಖಂಡಿತವಾಗಿಯೂ ಹೊಸ ಸಂಚಲನೆ ಉಂಟುಮಾಡಲಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot