ಈ ಜೋಡಿಯಲ್ಲಿ ನಿಮ್ಮ ಓಟು ಯಾರಿಗೆ ಹೇಳಿ!

Posted By: Staff

ಈ ಜೋಡಿಯಲ್ಲಿ ನಿಮ್ಮ ಓಟು ಯಾರಿಗೆ ಹೇಳಿ!
ಬೆಂಗಳೂರು, ಆ. 03: ಈಗ ಮೊಬೈಲ್ ವಾರ್ ಜಗತ್ತಿನೆಲ್ಲೆಡೆ ಜೋರಾಗಿದೆ. ಜತೆಗೆ ಟ್ಯಾಬ್ ಲೆಟ್ ಪಿಸಿ ಯುದ್ಧ ಕೂಡ ಪ್ರಾರಂಭವಾಗಿದೆ. ಪ್ರಸಿದ್ಧ ಎಲೆಕ್ಟ್ರಾನಿಕ್ಸ್ ಕಂಪೆನಿಗಳು ಲ್ಯಾಪ್ ಟಾಪ್/ ಟ್ಯಾಬ್ ಲೆಟ್ ಪಿಸಿ ಗಳನ್ನು ಮಾರುಕಟ್ಟೆಗೆ ಬಿಡುತ್ತಿದ್ದು ಸ್ಪರ್ಧೆಯು ಏರುಗತಿಯಲ್ಲಿ ಸಾಗುತ್ತಿದೆ.

ವಿಐಪಿಗಳಿಗಂತೂ ಈ ಲ್ಯಾಪ್ ಟಾಪ್ ಗಳು ಅಚ್ಚುಮೆಚ್ಚು. ಇದೀಗ ನಾವು ಸ್ಯಾಮ್ ಸಂಗ್ ಗೆಲಾಕ್ಸಿ ಟ್ಯಾಬ್ 10.1 ಹಾಗೂ ಮೋಟೋರೊಲಾ ಝೂಮ್ ಅವುಗಳ ಮಧ್ಯೆ ಇರುವ ಸಾಮ್ಯತೆ-ಭಿನ್ನತೆಗಳನ್ನು ನೋಡೋಣ!

ಎರಡರಲ್ಲೂ 10.1 ಇಂಚ್ ಟಚ್ ಸ್ಕ್ರೀನ್ ಇದೆ. ಸ್ಯಾಮ್ ಸಂಗ್ ಗೆಲಾಕ್ಸಿ 3.1 ಆವೃತ್ತಿಯ ಆಂಡ್ರಾಯ್ಡ್ OS ಮೂಲಕ ಕಾರ್ಯ ನಿರ್ವಹಿಸುತ್ತದೆ. ಆದರೆ ಝೂಮ್ 3.0 ಆವೃತ್ತಿ ಹೊಂದಿದೆ. ಮಲ್ಟಿಮೀಡಿಯಾದಲ್ಲಿ ಎರಡೂ ಕೂಡ NVIDIA Tegra ಪ್ರೊಸೆಸರ್, 1GB ಯ RAM ಹೊಂದಿವೆ.

ಸ್ಯಾಮ್ ಸಂಗ್ ಗೆಲಾಕ್ಸಿ, 3G, GPRS, EDGE ಹೊಂದಿದೆ. ಆದರೆ ಮೋಟೋರೊಲಾ ಇವುಗಳ ಜೊತೆಗೆ 4G ನೆಟ್ ವರ್ಕ್ ಹೊಂದಿದೆ.

ಸ್ಯಾಮ್ ಸಂಗ್ ಗೆಲಾಕ್ಸಿ ಟ್ಯಾಬ್ Tab 10.1 idu 16, 32 ಮತ್ತು 64 GB ಹೊಂದಿದ್ದು ವಿಸ್ತರಿಸಬಹುದಾದ ಹೊರ ಮೆಮೊರಿ ಹೊಂದಿಲ್ಲ. ಆದರೆ ಮೋಟೋರೊಲಾ ಝೂಮ್ ಇವುಗಳ ಜೊತೆ ಹೊರ ಮೆಮೊರಿ ಹೊಂದಿದೆ.

ಎರಡರಲ್ಲೂ ಬ್ಲೂ ಟೂಥ್, Wi-Fi & USB ಪಿಸಿ ಸ್ಲಾಟ್ ಇದೆ. ಮೋಟೋರೋಲಾ ಝೂಮ್ ನಲ್ಲಿ HDMI ವಿಶೇಷ ಎನ್ನಲೇಬೇಕಾದ HDMI ಕೂಡ ಇದೆ. ಇನ್ನು ಬೆಲೆಯ ವಿಷಯಕ್ಕೆ ಬಂದರೆ, ಸ್ಯಾಮ್ ಸಂಗ್ ಗೆಲಾಕ್ಸಿ ಟ್ಯಾಬ್ 10.1 ರು. 29,000 ಹಾಗೂ ಮೋಟೋರೊಲಾ ಝೂಮ್ ಬೆಲೆ ರು. 35,500. ಹೆಚ್ಚಿನ ವಿಶೇಷತೆಗಳಿರುವ ಮೋಟೋರೋಲಾ ಝೂಮ್, ಸ್ವಲ್ಪ ಮಾತ್ರ ಹೆಚ್ಚಿನ ದರ ಹೊಂದಿರುವುದರಿಂದ ನಿಜವಾಗಿಯೂ ಇನ್ನೊಂದಕ್ಕಿಂತ ಒಳ್ಳೆಯ ಆಯ್ಕೆ ಎನ್ನಬಹುದು.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot