ಈ ಜೋಡಿ ಮಾಡಲಿವೆ ಮೋಡಿ: ಸೋನಿ ಎರಿಕ್ಸನ್ ಮೊಬೈಲ್

Posted By: Staff

ಈ ಜೋಡಿ ಮಾಡಲಿವೆ ಮೋಡಿ: ಸೋನಿ ಎರಿಕ್ಸನ್ ಮೊಬೈಲ್
ನಾವೀಗ ವಿದೇಶಿ ಮಾರುಕಟ್ಟೆಯಲ್ಲಿರುವ ಹಾಗೂ ಇನ್ನೇನು ಭಾರತೀಯ ಮಾರುಕಟ್ಟೆಗೆ ಕಾಲಿಡಲಿರುವ ಸೋನಿ ಎರಿಕ್ಸನ್ ನ ಎರಡು ಪ್ರಖ್ಯಾತ ಮೊಬೈಲ್ ಗಳ ಹೋಲಿಕೆ ಮಾಡಲಿದ್ದೇವೆ. ಅವು ಎಕ್ಸ್ ಪೆರಿಯಾ Arc ಹಾಗೂ ಎಕ್ಸ್ ಪೆರಿಯಾ Ray.

ಅವುಗಳಲ್ಲಿರುವ ಸಾಮ್ಯತೆ-ಭಿನ್ನತೆ, ವಿಶೇಷತೆಗಳನ್ನು ಈ ರೀತಿ ಪಟ್ಟಿ ಮಾಡಬಹುದು.

* ಎರಡೂ ಕೂಡ ಹೈ ಎಂಡ್ ಸ್ಮಾರ್ಟ್ ಫೋನ್ ಗಳು

* ಎಕ್ಸ್ ಪೆರಿಯಾ Arc, 4.2 ಇಂಚ್ ಫುಲ್ ಟಚ್ ಮಾದರಿಯ ಡಿಸ್ ಪ್ಲೇ ಹೊಂದಿದೆ. ಆದರೆ ಎಕ್ಸ್ ಪೆರಿಯಾ Ray, 3.3 ಡಿಸ್ ಪ್ಲೇ ಹೊಂದಿದೆ. ಎರಡೂ ಕೂಡ ಕೆಪಾಕ್ಟಿವ್ ಡಿಸ್ ಪ್ಲೇ ಆಗಿರುವುದು ವಿಶೇಷ.

* ಎರಡರಲ್ಲೂ 8 ಮೆಗಾ ಪಿಕ್ಸೆಲ್ ಕ್ಯಾಮೆರಾ, 1080p ವಿಡಿಯೋ ರೆಸೊಲ್ಯೂಷನ್ ಇದೆ.

* ಮಲ್ಟಿಮೀಡಿಯಾದಲ್ಲಿ MP3 ಮತ್ತು MP4, FM ರೇಡಿಯೋ, ಯುನಿವರ್ಸೆಲ್ ಆಡಿಯೋ ಜಾಕ್ ಎರಡರಲ್ಲೂ ಇದೆ.

* ಈ ಎರಡೂ ಫೊನ್ ಗಳು ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್ OS ಹೊಂದಿದೆ.

* ವಿಸ್ತರಿಸಬಲ್ಲ 32 GB ಮೆಮೊರಿ ಎರಡರಲ್ಲೂ ಇದೆ.

* 3G, Wi-Fi ಹಾಗೂ ಬ್ಲೂ ಟೂಥ್

* ಎಕ್ಸ್ ಪೆರಿಯಾ Arc ಯಲ್ಲಿ ಹೈಯರ್ ಡಿಸ್ ಪ್ಲೇ ರೆಸೊಲ್ಯೂಷನ್ ಇದೆ. ಹೈ ಡೆಫನಿಷನ್ ವಿಡಿಯೋ ಇದೆ. ಉಳಿದಂತೆ ವಿಶೇಷತೆಗಳು ಎರಡರಲ್ಲೂ ಸಾಮಾನ್ಯವಾಗಿವೆ.

ಈಗ ವಿದೇಶಗಳಲ್ಲಿ ಮಾತ್ರ ದೊರೆಯುತ್ತಿರುವ ಈ ಎರಡೂ ಫೋನ್ ಗಳು ಸದ್ಯದಲ್ಲಿಯೇ ಭಾರತಕ್ಕೆ ಬರಲಿವೆ. ಇದರ ಬೆಲೆ ನಿಗದಿಯಾಗುವ ಮೊದಲು ನಾವು ಇದು ಹೇಗೆ ಮಾರುಕಟ್ಟೆಯಲ್ಲಿ ಯಶಸ್ವಿಯಾಗಬಹುದೆಂದು ಹೇಳಲು ಸಾಧ್ಯವಿಲ್ಲ. ಹಾಗಾಗಿ ಬರುವವರೆಗೂ ಕಾಯಲೇಬೇಕು!

Please Wait while comments are loading...
Opinion Poll

Social Counting