ಎಚ್ ಟಿ ಸಿ ಅವಳಿ ಮೊಬೈಲ್ ಗಳಲ್ಲಿ ನಿಮ್ಮ ಆಯ್ಕೆ ಯಾವುದು?

ಸಾಮ್ಯತೆ-ಭಿನ್ನತೆಗಳು:
* ಎಚ್ ಟಿ ಸಿ ಸೆನ್ಸೇಶನ್, ದೊಡ್ಡ 4.3 ಇಂಚ್ S LCD ಟಚ್ ಸ್ಕ್ರೀನ್ ಡಿಸ್ ಪ್ಲೇ ಹೊಂದಿದೆ. ಆದರೆ ಎಚ್ ಟಿ ಸಿ ಡಿಸಾಯರ್ 3.7 ಇಂಚ್ ಗಳ AMOLED ಫುಲ್ ಟಚ್ ಸ್ಕ್ರೀನ್ ಹೊಂದಿದೆ.
* ಸೆನ್ಸೇಷನ್ 8 ಮೆಗಾ ಪಿಕ್ಸೆಲ್ ಕ್ಯಾಮೆರಾ, 1080p ಫಾರ್ಮೆಟ್ ವಿಡಿಯೋ ರೆಕಾರ್ಡಿಂಗ್ ಹಾಗೂ 1.2 ಮೆಗಾ ಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ. ಹೊಂದಿದ್ದರೆ, ಡಿಸಾಯರ್, 5 ಮೆಗಾ ಪಿಕ್ಸೆಲ್ ಕ್ಯಾಮೆರಾ, 720p ವಿಡಿಯೋ ಫಾರ್ಮೆಟ್ ಹೊಂದಿದೆ.
* ಮಲ್ಟಿಮೀಡಿಯಾದಲ್ಲಿ ಎರಡೂ ಫೊನ್ ಗಳು ಉತ್ತಮ್ ಪ್ಲೇ ಬ್ಯಾಕ್ & ವಿಡಿಯೋ ಫಾರ್ಮೆಟ್ಸ್ ಹೊಂದಿವೆ. .
* Wi-Fi, ಬ್ಲೂ ಟೂಥ್, USB PC ಕನೆಕ್ಟಿವಿಟಿ ಎರಡರಲ್ಲೂ ಇದೆ.
* GPRS, EDGE & ಹೈ ಸ್ಪೀಡ್ 3G ಇಂಟರ್ನೆಟ್, 3G ಡಾಟಾ ಟ್ರಾನ್ಸ್ ಫರ್ ಎರಡರಲ್ಲೂ ಇದೆ. ಆದರೆ ಸೆನ್ಸೇಷನ್ ನಲ್ಲಿ 14 Mbps ಸ್ಪೀಡ್ ಇದ್ದರೆ ಡಿಸಾಯರ್ ನಲ್ಲಿ ಕೇವಲ 7 Mbps ಇದೆ.
* ಎರಡರಲ್ಲೂ ಕೂಡ ಆಂಡ್ರಾಯ್ಡ್ OS ಇದ್ದರೂ ಸೆನ್ಸೇಷನ್ 2.3 ಜಿಂಜರ್ ಬ್ರೆಡ್ ಹಾಗೂ ಡಿಸಾಯರ್ 2.2 ಫ್ರೋಯೋ ಮೂಲಕ ಕಾರ್ಯನಿರ್ವಹಿಸುತ್ತವೆ.
* ಇನ್ನು ಬೆಲೆ, ಸೆನ್ಸೇಷನ್ ರು. 28,900 ಹಾಗೂ ಡಿಸಾಯರ್ ರು. 16,499 ಇದೆ. ಎರಡೂ ಕೂಡ ಬೇರೆ ಬೇರೆ ರೀತಿಯಲ್ಲಿ ಇರುವ ಬೆಲೆಗೆ ತಕ್ಕಂತಿದೆ. ಯಾವುದು ನಿಮ್ಮ ಆಯ್ಕೆ ಎಂಬುದು ನಿಮಗೇ ಸೇರಿದ್ದು!


Click it and Unblock the Notifications








