ನೋಕಿಯಾ 500 vs ನೋಕಿಯಾ ಸಿ5: ಟಚ್ ಮೇನಿಯಾ

Posted By: Staff

ನೋಕಿಯಾ 500 vs ನೋಕಿಯಾ ಸಿ5: ಟಚ್ ಮೇನಿಯಾ
ಅಕ್ಕ ತಂಗಿ, ಅಣ್ಣ ತಮ್ಮರ ನಡುವೆ ಕೆಲವೊಮ್ಮೆ ಕಲಹ ಆರಂಭವಾಗುತ್ತದೆ. ಇದರಿಂದ ಅಂಬಾನಿ ಸಹೋದರರೂ ಹೊರತಾಗಿಲ್ಲ. ಆದರೆ ನೋಕಿಯಾ ಕುಟುಂಬದ ನಡುವೆಯೂ ಕೌಟುಂಬಿಕ ಕಲಹವೇ? ಹೌದು. ನೋಕಿಯಾ ಇತ್ತೀಚೆಗೆ ಹೊರತಂದ ನೋಕಿಯಾ ಸಿ5 ಮತ್ತು ಮಾರುಕಟ್ಟೆಗೆ ಬರಲಿರುವ ನೋಕಿಯಾ 500 ನಡುವೆ ಸ್ಪರ್ಧೆ ನಡೆಸಿದರೆ ಹೇಗಿರಬಹುದು. ಇಲ್ಲೀಗ ನಾವು ಅಂಪೈರ್.

ಇವೆರಡು ಒಂದೇ ಕುಟುಂಬದ ಮೊಬೈಲ್ ಗಳು. ಆದರೆ ಫೀಚರ್ಸ್ ಮತ್ತು ಎಫಿಸಿನ್ಸಿ ನಡುವೆ ಪೈಪೋಟಿಯಿದೆ. ನೋಕಿಯಾ ಇತ್ತೀಚೆಗೆ ಹೊರಬಂದ ಸಿ5 ಆಕರ್ಷಕ ವಿನ್ಯಾಸ, ಮಿನುಗುವ ಮೇಲ್ಮೈ ಇಷ್ಟವಾಗುವಂತ್ತಿದೆ. ನೂತನ ನೋಕಿಯಾ ಸಿ5ನಲ್ಲಿ ಇತ್ತೀಚೆಗೆ ಮಾರುಕಟ್ಟೆಯಲ್ಲಿರುವ ಟಚ್ ಸ್ಕ್ರೀನ್ ಮೊಬೈಲ್ ಗಳಲ್ಲಿರುವ ಹೆಚ್ಚಿನ ಫೀಚರ್ ಗಳಿವೆ.

ನೂತನ ನೋಕಿಯಾ 500 ಸಣ್ಣ ಗಾತ್ರದ ಮೊಬೈಲಾಗಿದ್ದು 1GHZ ಪ್ರೊಸೆಸರ್ ಹೊಂದಿದೆ. ಇದರಲ್ಲಿ ಆನ್ ಲೈಣ್ ಇಂಟರಾಕ್ಷನ್ ವೇಗವಾಗಿ ಮಾಡಬಹುದಾಗಿದ್ದು 1.3 ಇಂಚಿನ ಟಚ್ ಸ್ಕ್ರೀನ್ ಆಯ್ಕೆಕೂಡ ಹೃದಯ ಟಚ್ ಮಾಡುವಂತ್ತಿದೆ.

ಆನ್ ಲೈನ್ ವಿಷ್ಯಕ್ಕೆ ಬಂದರೆ ನೋಕಿಯಾ ಸಿ5 ಸೂಕ್ತವಾಗಿಲ್ಲ. ಅದರಲ್ಲಿ ನಿಮ್ಮ ಪ್ರೀತಿಯ ಸೋಷಿಯಲ್ ನೆಟ್ ವರ್ಕ್ ಗಳನ್ನು ಆಕ್ಸೆಸ್ ಮಾಡುವುದು, ಫೋಟೊ ಅಪ್ ಲೋಡ್ ಮಾಡುವುದು ಇತ್ಯಾದಿಗಳು ತಲೆಚಿಟ್ಟುಹಿಡಿಸುತ್ತದೆ. ಈ ಮೊಬೈಲಿನಲ್ಲಿ 16 ಜಿಬಿ(ಫುಲ್ ಲೋಡೆಡ್) ಮೆಮೊರಿ ಕೂಡ ಇದೆ. ಆದರೆ ನೋಕಿಯಾ 500ರಲ್ಲಿ ಕೇವಲ 2ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ ಇದೆ. ಮೆಮೊರಿ ಸಂಗ್ರಹದಲ್ಲಿ ನೋಕಿಯಾ 500 ಇಷ್ಟವಾಗದು.

ನೋಕಿಯಾ ಸಿ5ನಲ್ಲಿರುವ 5 ಎಂಪಿ ಕ್ಯಾಮರಾ, ಡ್ಯೂಯಲ್ ಎಲ್ ಇಡಿ ಪ್ಲಾಷ್ ಇದೆ. ಇದರಲ್ಲಿ ಸೆಕೆಂಡರಿ ಕ್ಯಾಮರಾ ಕೂಡ ಇದೆ. ಇದು ಫೋನಿನ ಮುಂಭಾಗದಲ್ಲಿದೆ. ಇದರಿಂದಾಗಿ ವಿಡಿಯೋ ಕಾಲಿಂಗ್ ಸುಲಭವಾಗಿದೆ. ಒವಿಐ ಸ್ಟೋರ್ ನಲ್ಲಿ ನಿಮ್ಮ ಪ್ರೀತಿಯ ಗೇಮ್, ವಾಲ್ ಪೇಪರ್, ರಿಂಗ್ ಟೋನ್ ಇತ್ಯಾದಿಗಳನ್ನು ಸಂಗ್ರಹಿಸಿಟ್ಟುಕೊಳ್ಳಬಹುದು. ನೋಕಿಯಾ 500ರಲ್ಲೂ 5 ಎಂಪಿ ಕ್ಯಾಮರಾವಿದೆ. ವಿಡಿಯೋ ಗುಣಮಟ್ಟದಲ್ಲಿ ನೋಕಿಯಾ 500ಗೆ ಹೆಚ್ಚು ಮಾರ್ಕ್ಸ್ ಕೊಡಬಹುದು.

ಸ್ಮಾರ್ಟ್ ಫೋನಲ್ಲಿ ಇರಬೇಕಾದ ಎಲ್ಲಾ ಫೀಚರ್ ಗಳು ನೋಕಿಯಾ 500ನಲ್ಲಿದೆ. ಯಾಕೆಂದರೆ ಇದರಲ್ಲಿ ಇತ್ತೀಚಿನ ಸಿಂಬಿಯನ್ ಅನ್ನಾ ಒಎಸ್ ಅಪರೇಟಿಂಗ್ ಸಿಸ್ಟಮ್ ಇದೆ. ಸಿ5ಗೆ ಹೋಲಿಸಿದರೆ ಈ ಮೊಬೈಲಿನಲ್ಲಿ ವೇಗದಲ್ಲಿ ಪ್ರೊಸೆಸಿಂಗ್ ಮಾಡಬಹುದು.

ಆದರೆ ನೋಕಿಯಾ 500ನಲ್ಲಿ ಫ್ಲಾಷ್ ಮತ್ತು ಬ್ಲೂಟೂಥ್ 3.0 ಸಪೋರ್ಟ್ ಕೊರತೆಯಿದೆ. ಒಂದು ಬಟನ್ ಕ್ಯಾಮರಾ ಅಥವಾ ಯುಎಸ್ಬಿ ಕನೆಕ್ಟರ್ ಜಾಕ್ ಇಷ್ಟವಾಗುವಂತ್ತಿಲ್ಲ. ಆದರೆ ಪಾವತಿಸಿದ ದುಡ್ಡಿಗೆ ನೋಕಿಯಾ 500 ಮೋಸ ಮಾಡುವುದಿಲ್ಲ.

ಮಾರುಕಟ್ಟೆ ದರ: ನೋಕಿಯಾ ಸಿ5 ದರ ಸುಮಾರು 8 ಸಾವಿರ ರು. ಆದರೆ ನೋಕಿಯಾ 500 ದರ ಸುಮಾರು 9,456 ರು. ಇದರಲ್ಲಿ ನೋಕಿಯಾ 500 ಯಾವಾಗ ಮಾರುಕಟ್ಟೆಗೆ ಬರುತ್ತೆ ಎಂಬುದನ್ನು ಕಂಪನಿ ಇನ್ನೂ ಖಚಿತಪಡಿಸಿಲ್ಲ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot