ಮೊಟೊರೊಲಾ ಡ್ಯೂಯಲ್ ಸಿಮ್ ಮೊಬೈಲ್ ಧಮಾಕ

Posted By: Staff

ಮೊಟೊರೊಲಾ ಡ್ಯೂಯಲ್ ಸಿಮ್ ಮೊಬೈಲ್ ಧಮಾಕ
ಅದೊಂದು ಕಾಲವಿತ್ತು. ಕೇವಲ ಸಣ್ಣಪುಟ್ಟ ಕಂಪನಿಗಳು ಮಾತ್ರ ಡ್ಯೂಯಲ್ ಸಿಮ್ ಫೋನ್ ಹೊರತರುತ್ತಿದ್ದವು. ಈಗ ಕಾಲ ಬದಲಾಗಿದೆ. ಮೊಟೊರೊಲಾದಂತ ಬೃಹತ್ ಕಂಪನಿಗಳು ಡಬಲ್ ಸಿಮ್ ಧಮಾಕದತ್ತ ಧುಮುಕಿವೆ. ಮೊಟೊರೊಲಾ ಕಂಪನಿಯು ಎಕ್ಸ್ ಟಿ531 ಎಂಬ ಡ್ಯೂಯಲ್ ಸಿಮ್ ಹ್ಯಾಂಡ್ ಸೆಟ್ ಹೊರತಂದಿದೆ.

ನೂತನ ಎಕ್ಸ್ ಟಿ531 ಆಂಡ್ರಾಯ್ಡ್ 2.3 ಅಪರೇಟಿಂಗ್ ಸಿಸ್ಟಮ್ ಹೊಂದಿದೆ. ಇದರ 3.2 ಇಂಚಿನ ಟಚ್ ಸ್ಕ್ರೀನ್ ಹೊಂದಿದೆ. ನೋಡಲು ತೆಳ್ಳಗಿರುವ ಈ ಮೊಬೈಲು ಕೇವಲ 114 ಗ್ರಾಂ ತೂಕವಿದೆ. ಈ ಮೊಬೈಲಿನಲ್ಲಿ ಮಲ್ಟಿ ಟಚ್ ಸೌಲಭ್ಯವಿದ್ದು ಎಚ್ ವಿಜಿಎ ತಂತ್ರಜ್ಞಾನದೊಂದಿಗೆ ಹೊರಬಂದಿದೆ. ಈ ತಂತ್ರಜ್ಞಾನ ಮೊಬೈಲ್ ಸ್ಕ್ರೀನ್ ಬಣ್ಣ ಮತ್ತು ಗುಣಮಟ್ಟವನ್ನು ಹೆಚ್ಚಿಸಿದೆ.

ಕ್ಯಾಮರಾ ಇದೆಯೇ ಎಂದು ಕೇಳುತ್ತಿದ್ದೀರಾ? ಅದೊಂದು ಇಲ್ಲದ ಮೊಬೈಲನ್ನು ಹೆಚ್ಚಿನವರು ಕಲ್ಪಿಸಿಕೊಳ್ಳುವುದಿಲ್ಲ. ಇದು 5 ಮೆಗಾ ಫಿಕ್ಸೆಲ್ ಕ್ಯಾಮರಾ ಹೊಂದಿದೆ. ಆಕರ್ಷಕ ವಿಡಿಯೋ ರೆಕಾರ್ಡಿಂಗ್ ಸೌಲಭ್ಯವೂ ಇದರಲ್ಲಿದೆ. ಇಷ್ಟೇ ಅಲ್ಲ ಮೊಬೈಲಿನ ಎದುರುಗಡೆ ಸಣ್ಣ ವಿಜಿಎ ಕ್ಯಾಮರಾ ಕೂಡ ಇದೆ.

ಇಷ್ಟಕ್ಕೂ ಈ ಮೊಬೈಲ್ ಕೇವಲ ಫೋಟೊ ತೆಗೆಯಲು ಮತ್ತು ವಿಡಿಯೋ ರೆಕಾರ್ಡಿಂಗ್ ಗೆ ಮಾತ್ರ ಇರುವುದಲ್ಲ. ಇದು 32 ಜಿಬಿ ಮೆಮೊರಿ ಸಂಗ್ರಹ ಸಾಮರ್ಥ್ಯ ಹೊಂದಿದೆ. ಉಳಿದಂತೆ ಜಿಪಿಎಸ್, ಗೂಗಲ್ ಮ್ಯಾಪ್, ನ್ಯಾವಿಗೇಷನ್ ಸಿಸ್ಟಮ್, ವೈಫೈ, ಬ್ಲೂಟೂಥ್, 3ಜಿ ಇತ್ಯಾದಿ ಫೀಚರ್ ಗಳಿವೆ.

ನಂಬಿದರೆ ನಂಬಿ. ಈ ಮೊಬೈಲನ್ನು ಫುಲ್ ಚಾರ್ಜ್ ಮಾಡಿ ಉಪಯೋಗಿಸದೇ ಇಟ್ಟರೆ 28 ದಿನ ಬ್ಯಾಟರಿ ಬಾಳಿಕೆ ಬರುತ್ತದೆ. ಈ ಮೊಬೈಲ್ 8 ಗಂಟೆ ಟಾಕ್ ಟೈಂ ಬ್ಯಾಟಿ ಬಾಳಿಕೆ ಹೊಂದಿದೆ. ಎಲ್ಲಾ ಓಕೆ. ದರ ಎಷ್ಟು ಎಂದು ಕೇಳುತ್ತೀರಾ. ಹೆಚ್ಚೇನಿಲ್ಲ. ಕೇವಲ 12 ಸಾವಿರ ರುಪಾಯಿ.

Please Wait while comments are loading...
Opinion Poll

Social Counting