ಸುಂದರ ಸರಳ ಸಲೊರಾ ಮೊಬೈಲಿಗೊಂದು ಸಲಾಂ

Posted By: Staff

ಸುಂದರ ಸರಳ ಸಲೊರಾ ಮೊಬೈಲಿಗೊಂದು ಸಲಾಂ
ಸಲೊರಾ ಇಂಟರ್ ನ್ಯಾಷನಲ್ ಅಂದ್ರೆ ಮೊಬೈಲ್ ಜಗತ್ತಿನಲ್ಲಿ ಹೆಚ್ಚಿನವರಿಗೆ ಗೊತ್ತಿರಲಿಕ್ಕಲ್ಲ. ಕಂಪನಿಯು ಎಲೆಕ್ಟ್ರಾನಿಕ್ಸ್ ಬ್ರಾಂಡ್ ನಲ್ಲಿ ಹೆಚ್ಚು ಜನಪ್ರಿಯ. ಇದೀಗ ಕಂಪನಿಯು ದೇಶದ ಮೊಬೈಲ್ ಸೆಗ್ಮೆಂಟಿನಲ್ಲಿ ಪಾಲು ಪಡೆಯಲು ಸಿದ್ಧವಾಗಿದೆ. ಸಲೊರಾ ಶೀಘ್ರದಲ್ಲಿ ಸಲೊರಾ ಎಸ್ಎಂ 401 ಎಂಬ ಮೊಬೈಲ್ ಪರಿಚಯಿಸಲಿದೆ.

ನೂತನ ಸಲೊರಾ ಎಸ್ಎಂ 401 ಆಕರ್ಷಕ ವಿನ್ಯಾಸದಿಂದ ಇಷ್ಟವಾಗುತ್ತದೆ. ಕಡಿಮೆ ದರವಾದರೂ ಫೀಚರ್ ಗಳ ವಿಷಯದಲ್ಲಿ ಯಾವುದೇ ರಾಜಿ ಮಾಡದೇ ಸಲಾರೊ ಫೋನ್ ಬರಲಿದೆ. ಇದರಲ್ಲಿ 1.3 ಮೆಗಾ ಪಿಕ್ಸೆಲ್ ಕ್ಯಾಮರಾ ಮತ್ತು ವಿಡಿಯೋ ರೆಕಾರ್ಡಿಂಗ್ ಸೌಲಭ್ಯವಿದೆ. ನಿಮ್ಮ ಕಂಪ್ಯೂಟರಿಗೆ ಈ ಮೊಬೈಲನ್ನು ವೆಬ್ ಕ್ಯಾಮ್ ಆಗಿಯೂ ಬಳಸಬಹುದಂತೆ!

ಇಷ್ಟೇ ಅಲ್ಲದೇ ಇದರಲ್ಲಿ ಮಲ್ಟಿ ಫಾರ್ಮೆಟ್ ಆಡಿಯೋ ಪ್ಲೇಯರ್ ಇದೆ. ಎಂಪಿ3, ಎಂಪಿ4 ಇತ್ಯಾದಿ ಯಾವುದೇ ಫಾರ್ಮೆಟ್ ನಲ್ಲಿರುವ ಸಂಗೀತವನ್ನು ಇದರಲ್ಲಿ ಕೇಳಬಹುದಾಗಿದೆ. ಎಫ್ಎಂ ರೆಡಿಯೋ, ದೊಡ್ಡದಾದ ಸ್ಪೀಕರ್, ಕೆ ಸರಣಿಯ ಆಂಪ್ಲಿಪ್ಲೇಯರ್ ಇತ್ಯಾದಿಗಳಿವೆ. ಜಿಪಿಆರ್ಎಸ್ ಸೇರಿದಂತೆ ಇನ್ನೂ ಆಕರ್ಷಕ ಸೌಲಭ್ಯಗಳಿವೆ. ಇಷ್ಟೇ ಅಲ್ಲದೇ ಕತ್ತಲಲ್ಲಿ ನಿಮಗೆ ದಾರಿ ಕಾಣದಾದರೆ ಟಾರ್ಚ್ ಲೈಟಿದೆ.

ಸಲೊರಾ ಎಸ್ಎಂ 401 ಫೀಚರ್ಸ್
* 1.3 ಮೆಗಾ ಪಿಕ್ಸೆಲ್ ಕ್ಯಾಮರಾ
* ಜಾವಾ
* ಬ್ಲೂಟೂಥ್
* 16 ಜಿಬಿವರೆಗೆ ವಿಸ್ತರಿಸಬಹುದಾದ ಮೈಕ್ರೊ ಎಸ್ಡಿ ಮೆಮೊರಿ
* ಎಂಪಿ3 ಮತ್ತು ವಿಡಿಯೋ ಪ್ಲೇಯರ್
* ಕೆ ಸರಣಿಯ ಆಂಪ್ಲಿಪ್ಲೇಯರ್
* ಟಾರ್ಚ್ ಲೈಟ್.

ಇಷ್ಟೇಲ್ಲ ಫೀಚರ್ ಗಳಿರುವ ಸಲೊರಾಕ್ಕೆ ಸಲಾಂ ಹೊಡೆಯುವ ಮುನ್ನ ದರ ಕೇಳುತ್ತಿದ್ದೀರಾ? ಜಾಸ್ತಿ ಏನಿಲ್ಲ. 2,499 ರುಪಾಯಿ ಅಷ್ಟೇ. ಅತಿಶೀಘ್ರದಲ್ಲಿ ಈ ಮೊಬೈಲ್ ಮಾರುಕಟ್ಟೆಗೆ ಬರಲಿದೆಯಂತೆ.

Please Wait while comments are loading...
Opinion Poll

Social Counting