ಯಾವ ಮೊಬೈಲ್ ಯಾರ ಕೈಗೆ ಯಾರೂ ಹೇಳಲಾರರು!

Posted By: Staff

ಯಾವ ಮೊಬೈಲ್ ಯಾರ ಕೈಗೆ ಯಾರೂ ಹೇಳಲಾರರು!
ಇಲ್ಲೆರಡು ಮೊಬೈಲ್ ಗಳಿವೆ ಬೇರೆ ಬೇರೆ ಕಂಪೆನಿಯವು. ಒಂದು ಮ್ಯಾಕ್ಸ್ ಸ್ಕೋಪ್ MT150 ಹಾಗೂ ಇನ್ನೊಂದು ವ್ಯೂ ಸೋನಿಕ್ V 350. ಇವುಗಳಲ್ಲಿರುವ ಸಾಮ್ಯತೆ-ಭಿನ್ನತೆ ಈ ರೀತಿಯಾಗಿವೆ; ಆಯ್ಕೆ ನಿಮ್ಮದು.

* ವ್ಯೂ ಸೋನಿಕ್ V 350 ಇದು ಆಂಡ್ರಾಯ್ಡ್ 2.2 OS ಮೂಲಕ ಕಾರ್ಯ ನಿರ್ವಹಿಸಿದರೆ ಮ್ಯಾಕ್ಸ್ ಸ್ಕೋಪ್ MT150 ಜಾವಾ OS ಮೂಲಕ ಕಾರ್ಯ ನಿರ್ವಹಿಸುತ್ತದೆ.

* ವ್ಯೂ ಸೋನಿಕ್ 3D ಕೆಪಾಕ್ಟಿವ್ ಟಚ್ ಸ್ಕ್ರೀನ್ ಹಾಗೂ 1GHz ಕ್ಯುಲ್ಕಾಮ್ ಪ್ರೊಸೆಸರ್ ಹೊಂದಿ ದಕ್ಷ ಕಾರ್ಯಕ್ಷಮತೆ ನೀಡಲು ಸಮರ್ಥವಾಗಿದೆ.

* ಮ್ಯಾಕ್ಸ್ ಸ್ಕೋಪ್, ಅತೀ ಅಗತ್ಯವೆನಿಸುವ ಕೆಲವು ವಿಶೇಷ ಸೌಲಭ್ಯಗಳನ್ನು ಹೊಂದಿ ವಿಶಿಷ್ಠ ಮೊಬೈಲ್ ಎನಿಸಿಕೊಂಡಿದೆ. ಡ್ಯುಯಲ್ ಸಿಮ್, ಉತ್ತಮ ಗುಣಮಟ್ಟದ ವಿಡಿಯೋ ಚಿತ್ರಣ ಹೊಂದಿರುವ ಮ್ಯಾಕ್ಸ್ ಬಜೆಟ್ ಫೊನ್ ಅರ್ಹತೆಯನ್ನು ಮೀರಿ ಮಿಂಚುತ್ತಿದೆ.

* 3.5 mm ಆಡಿಯೋ ಜಾಕ್, 5 ಮೆಗಾ ಪಿಕ್ಸೆಲ್ ಕ್ಯಾಮೆರಾ, HD ವಿಡಿಯೋ ರೆಕಾರ್ಡಿಂಗ್, EDR ಜೊತೆ ಬ್ಲೂ ಟೂಥ್, ಯಾಹೂ ಲಾಫರ್ ಗೆ ಡೈರೆಕ್ಟ್ ಎಕ್ಸೆಸ್, 2 GB ಆಂತರಿಕ ಹಾಗೂ 8 GB ಗೆ ವಿಸ್ತರಿಸಬಲ್ಲ ಮೆಮೊರಿ ಸೌಲಭ್ಯ, ಈ ಎಲ್ಲಾ ಸೌಲಭ್ಯ ಮ್ಯಾಕ್ಸ್ ಸ್ಕೋಪ್ ನಲ್ಲಿದೆ.

* ಇನ್ನು ವ್ಯೂ ಸೋನಿಕ್ ನಲ್ಲಿ, 3.5 ಇಂಚ್ ಟಚ್ ಸ್ಕ್ರೀನ್, 512 MB RAM, 512 MB ROM, ವಿಸ್ತರಿಸಬಹುದಾದ 32 GB ಮೆಮೊರಿ, ಮೈಕ್ರೋ USB, ಈ ಎಲ್ಲಾ ಅತ್ಯಾಧುನಿಕ ಸೌಲಭ್ಯಗಳು ಲಭ್ಯವಿದೆ.

* ಇನ್ನು ಬೆಲೆಯ ವಿಷಯಕ್ಕೆ ಬಂದರೆ, ವ್ಯೂ ಸೋನಿಕ್ ರು. 17,000 ಹಾಗೂ ಮ್ಯಾಕ್ಸ್ ಸ್ಕೋಪ್ ರು. 3,272. ಬೆಲೆಗಳಿಗೆ ಹಾಗೂ ವಿಶೇಷತೆಗಳಿಗೆ ಹೋಲಿಸಿಕೊಂಡಾಗ ನಿಮ್ಮ ಆಯ್ಕೆ ಯಾವುದೆಂಬುದನ್ನು ನೀವೇ ನಿರ್ಧರಿಸಿ...

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot