ಇಲ್ಲಿದೆ ಮೋಟೋರೊಲಾ ಜೋಡಿ: ಯಾವುದಿಷ್ಟ ನೋಡಿ!

By Super
|
ಇಲ್ಲಿದೆ ಮೋಟೋರೊಲಾ ಜೋಡಿ: ಯಾವುದಿಷ್ಟ ನೋಡಿ!
ನಾವಿಲ್ಲಿ ಮೋಟೋರೊಲಾ ಕಂಪೆನಿಯ 2 ಟಚ್ ಸ್ಕ್ರೀನ್ ಮೊಬೈಲ್ ಹೋಲಿಕೆ ನೋಡಲಿದ್ದೇವೆ. ಅವು ಮೋಟೋರೊಲಾ XT 531 ಮತ್ತು ಮೋಟೋರೊಲಾ 870. ಎರಡೂ ಕೂಡ ಅತ್ಯಾಧುನಿಕ ಫುಲ್ ಟಚ್ ಸ್ಕ್ರೀನ್ ಮೊಬೈಲುಗಳಾಗಿದ್ದು ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್ ಮೂಲಕ ಕಾರ್ಯ ನಿರ್ವಹಿಸುತ್ತವೆ.

* ಮೋಟೋರೊಲಾ MT 870, ದೊಡ್ಡ 4 ಇಂಚ್ ಸ್ಕ್ರೀನ್ ಹೊಂದಿದ್ದರೆ, ಮೋಟೋರೊಲಾ XT 531, 3.5 ಇಂಚ್ ಗಳ ಸ್ಕ್ರೀನ್ ಹೊಂದಿದೆ.

* ಮಲ್ಟಿಮೀಡಿಯಾದಲ್ಲಿ ಎರಡೂ ಕೂಡ ಮಲ್ಟಿ ಫಾರ್ಮೆಟ್ ವಿಡಿಯೋ ಮತ್ತು ಆಡಿಯೋ ಪ್ಲೇಯರ್, h263 & h 264 ವಿಡಿಯೋ ಫಾರ್ಮೆಟ್ಸ್ ಹೊಂದಿದೆ.

* ಆಶ್ಚರ್ಯಕರ ಸಂಗತಿ ಎಂದರೆ XT 531, FM ರೇಡಿಯೋ ಹೊಂದಿದ್ದರೆ MT 870 ಹೊಂದಿಲ್ಲ.

* ಎರಡರಲ್ಲೂ 3.5 ಮಿ.ಮೀ ಯುನಿವರ್ಸೆಲ್ ಆಡಿಯೋ ಜಾಕ್ ಇದೆ.

* ಮೋಟೋರೊಲಾ MT 870, 8 ಮೆಗಾ ಪಿಕ್ಸೆಲ್ ಕ್ಯಾಮೆರಾ ಹೊಂದಿದ್ದರೆ, XT 531 5 ಮೆಗಾ ಪಿಕ್ಸೆಲ್ ಕ್ಯಾಮೆರಾ ಹೊಂದಿದೆ.

* ಎರಡರಲ್ಲೂ VGA ಫ್ರಂಟ್ ಕ್ಯಾಮೆರಾ ಇದ್ದು ಹೈ ಸ್ಪೀಡ್ 3G ನೆಟ್ ವರ್ಕ್ ವಿಡಿಯೋ ಕಾಲಿಂಗ್ ಲಭ್ಯವಿದೆ.

* ಈ ಎರಡೂ ಮೊಬೈಲುಗಳು 3G, ವೈ-ಫೈ, ಜಿಪಿಆರ್ ಎಸ್ ಮತ್ತು ಎಡ್ಜ್ ಕನೆಕ್ಟಿವಿಟಿ ಇದ್ದು ಯುಎಸ್ ಬಿ & ಬ್ಲೂ ಟೂಥ್ ಕೂಡ ಲಭ್ಯ. .

ಬೆಲೆ ಇನ್ನೂ ನಿಗದಿಯಾಗಿಲ್ಲದ ಈ ಹೊಸ ಫೋನ್ ಗಳು ಸದ್ಯದಲ್ಲಿಯೇ ಮಾರುಕಟ್ಟೆಗೆ ಬರಲಿರುವುದಂತೂ ಸತ್ಯ...

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X