ನನಗೆ ನಾನೇ ಸಾಟಿ; ಎಚ್ ಟಿ ಸಿ ಮೊಬೈಲ್ಸ್!

ಹೀಗೇ ಆಗಿರುವ 2 ಮೊಬೈಲುಗಳು ಇಲ್ಲಿವೆ ನೋಡಿ! ಎಚ್ ಟಿಸಿ ಕಂಪೆನಿಯ ಡಿಸೈರ್ ಒಂದಾಗಿದ್ದರೆ ಸೆನ್ಸೇಶನ್ ಇನ್ನೊಂದು.
* ಎರಡರಲ್ಲೂ ಫುಲ್ ಟಚ್ ಸ್ಕ್ರೀನ್ ಇದೆ. ಸನ್ಸೇಶನ್ ನಲ್ಲಿ 4.3 ಇಂಚ್ S LCD ಡಿಸ್ ಪ್ಲೇ ಹಾಗೂ ಡಿಸೈರ್ ನಲ್ಲಿ 3.7 ಇಂಚ್ AMOLED ಕೆಪಾಕ್ಟಿವ್ ಟಚ್ ಸ್ಕ್ರೀನ್ ಇದೆ.
* ಸನ್ಸೇಶನ್ ನಲ್ಲಿ 8 ಮೆಗಾ ಪಿಕ್ಸೆಲ್ ಕ್ಯಾಮೆರಾ, 1.2 ಮೆಗಾ ಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹಾಗೂ 1080p ಪಾರ್ಮೆಟ್ ವಿಡಿಯೋ ರೆಕಾರ್ಡಿಂಗ್ ಇದೆ. ಆದರೆ ಡಿಸೈರ್ ನಲ್ಲಿರುವುದು 5 ಮೆಗಾ ಪಿಕ್ಸೆಲ್ ಕ್ಯಾಮೆರಾ ಹಾಗೂ 720p ಪಾರ್ಮೆಟ್ ವಿಡಿಯೋ ರೆಕಾರ್ಡಿಂಗ್.
* ಮಲ್ಟಿಮೀಡಿಯಾದಲ್ಲಿ ಎರಡರಲ್ಲೂ ಇರುವ ವಿಶೇಷತೆಗಳಲ್ಲಿ ಸಾಮ್ಯತೆ ಇದೆ.
* ವೈ-ಫೈ, ಬ್ಲೂ ಟೂಥ್, USB ಪಿಸಿ ಕನೆಕ್ಟಿವಿಟಿ, GPRS, EDGE ಹಾಗೂ ಹೈ ಸ್ಪೀಡ್ 3G ನೆಟ್ ವರ್ಕ್ ಇದೆ. ಆದರೆ ಸೆನ್ಸೇಶನ್ ನಲ್ಲಿ ಹೆಚ್ಚು ಶಕ್ತಿಶಾಲಿಯಾದ 14 Mbps ಇದ್ದರೆ ಡಿಸೈರ್ ನಲ್ಲಿ ಕೇವಲ 7 Mbps ಇದೆ.
* ಎರಡೂ ಕೂಡ ಆಂಡ್ರಾಯ್ಡ್ ಮೂಲಕವೇ ಕಾರ್ಯನಿರ್ವಹಿಸುತ್ತವೆಯಾದರೂ ಸೆನ್ಸೇಶನ್ ನಲ್ಲಿ 2.3 ಜಿಂಜರ್ ಬ್ರೆಡ್ ಹಾಗೂ ಡಿಸೈರ್ ನಲ್ಲಿ 2.2 ಫ್ರೋಯೋ ಇದೆ.
* ಇನ್ನು ಅತಿ ಮುಖ್ಯವಾದ ಬೆಲೆಯ ವಿಷಯಕ್ಕೆ ಬಂದರೆ ಸೆನ್ಸೇಶನ್ ಬೆಲೆ, ರು. 28,000 ಹಾಗೂ ಡಿಸೈರ್ ಬೆಲೆ ರು. 16,499.
ಎರಡರಲ್ಲಿರುವ ವಿಶೇಷತೆಗಳು ಹಾಗೂ ದರಗಳು ನಿಮ್ಮ ಮುಂದಿವೆ. ನಿಮ್ಮ ಇಷ್ಟಕ್ಕೆ, ಬಜೆಟ್ಟಿಗೆ ಯಾವುದು ಸರಿ ಎಂದು ನೀವೇ ಆಯ್ಕೆ ಮಾಡಿದರೆ ನೀವು ಜಾಣರು ಎನ್ನಬಹುದಲ್ಲವೇ!


Click it and Unblock the Notifications