Home
ಮೊಬೈಲ್

ಮೋಟೋರೊಲಾ ಈ 3 ಮೊಬೈಲ್ಸ್ ಮೋಡಿ ನೋಡಿ!

By Super
ಮೋಟೋರೊಲಾ ಈ 3 ಮೊಬೈಲ್ಸ್ ಮೋಡಿ ನೋಡಿ!
ಮೋಟೋರೊಲಾ ಅಂತಿಂಥ ಕಂಪೆನಿಯಲ್ಲ. ಹೊಸ ಹೊಸ ಫೊನುಗಳನ್ನು ಮಾರುಕಟ್ಟೆಗೆ ಬಿಡುವುದರ ಜೊತಜೊತೆಗೆ ಅತ್ಯಾಧುನಿಕ ಫೋನುಗಳನ್ನು ಬಿಡುಗಡೆ ಮಾಡುತ್ತಿರುತ್ತದೆ. ಇದೀಗ ಮೋಟೋರೊಲಾದ 3 ಡ್ಯುಯಲ್ ಸಿಮ್ ಮೊಬೈಲುಗಳನ್ನು ಮಾರುಕಟ್ಟೆಯಲ್ಲಿವೆ.

ಅವು EX ಸಿರೀಸ್ ಗಳಾಗಿದ್ದು, EX 212, EX 119, ಮತ್ತು EX 109. ಆಕರ್ಷಕ ವಿನ್ಯಾಸ ಹಾಗೂ ದರಗಳಲ್ಲಿ ಲಭ್ಯವಿರುವ ಇವುಗಳ ವಿಶೇಷತೆಗಳು ಹೀಗಿವೆ.

EX 212 ರೂಪ ಈಗಾಗಲೇ ಮಾರುಕಟ್ಟೆಯಲ್ಲಿರುವ RAZR ನಂತೆ ಇದೆ. ಇದರ ಬೆಲೆ ರು. 5,190. ಇದರಲ್ಲಿದೆ FM ರೇಡಿಯೋ, 2 ಮೆಗಾ ಪಿಕ್ಸೆಲ್ ಕ್ಯಾಮೆರಾ, 2.4 ಇಂಚ್ (TFT) ಡಿಸ್ ಪ್ಲೇ, SD ಕಾರ್ಡ್ ಮೂಲಕ ವಿಸ್ತರಿಸಬಹುದಾದ 16 GB ಮೆಮೊರಿ ಹೊಂದಿದೆ.

EX 119 QWERTY ಕೀ ಪ್ಯಾಡ್ ಹೊಂದಿದ್ದು 2.4 ಇಂಚ್ VGA ಡಿಸ್ ಪ್ಲೇ ಹೊಂದಿದೆ. 3 ಮೆಗಾ ಪಿಕ್ಸೆಲ್ ಕ್ಯಾಮೆರಾ, SD ಕಾರ್ಡ್ ಮೂಲಕ ವಿಸ್ತರಿಸಬಹುದಾದ 32 GB ಮೆಮೊರಿ ಹೊಂದಿದೆ. ಇದರ ಬೆಲೆ ರು. 6,190.

ಇನ್ನು EX109 QWERTY ಕೀ ಪ್ಯಾಡ್ ಹೊಂದಿದೆ. ದರ ರು. 3,590. ಇದು 2 ಮೆಗಾ ಪಿಕ್ಸೆಲ್ ಕ್ಯಾಮೆರಾ, FM ರೇಡಿಯೋ, 2.1 ಆವೃತ್ತಿಯ ಬ್ಲೂ ಟೂಥ್ ಹೊಂದಿದೆ. 750 mAh ಬ್ಯಾಟರಿ ಹೊಂದಿರುವ ಇದರ ಬೆಲೆ ರು. 3,590. ಇದರಲ್ಲಿ 32 GB ಮೆಮೊರಿ ಸಾಮರ್ಥ್ಯವಿದೆ.

ಈ ಎಲ್ಲಾ 3 ಮೊಬೈಲ್ ಭಾರತದ ಮಧ್ಯಮ ವರ್ಗದವರನ್ನು ಗಮನದಲ್ಲಿಟ್ಟು ತಯಾರಿಸಿ ಬಿಡುಗಡೆ ಮಾಡಲಾಗಿದೆ. ನೀವು ಮಧ್ಯಮ ವರ್ಗದವರಾಗಿದ್ದರೆ ಇದು ನಿಮ್ಮನ್ನು ಆಕರ್ಷಿಸುವುದರಲ್ಲಿ ಸಂಶಯವೇ ಇಲ್ಲ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+