Subscribe to Gizbot

ರಿಲಾಯನ್ಸ್ ಜೊತೆ 64ನೇ ಸ್ವಾತಂತ್ರ್ಯೋತ್ಸವ ಆಚರಿಸಿ

Posted By: Super

ರಿಲಾಯನ್ಸ್ ಜೊತೆ 64ನೇ ಸ್ವಾತಂತ್ರ್ಯೋತ್ಸವ ಆಚರಿಸಿ
ಸುಪ್ರಸಿದ್ಧ ಕಂಪೆನಿ 'ರಿಲಾಯನ್ಸ್ ಕಮ್ಯುನಿಕೇಶನ್ಸ್' ತನ್ನ ಗ್ರಾಹಕ ಬಳಗಕ್ಕೆ ಸೂಪರ್ ಆಫರ್ ಘೋಷಿಸಿದೆ. ಅದು ಫ್ರೀ ಟಾಕ್ ಟೈಮ್ ಹಾಗೂ ಎಸ್ ಎಮ್ ಎಸ್ ಜೊತೆ "ಸ್ವಾತಂತ್ರ್ಯೋತ್ಸವ ಆಚರಿಸಿ" ಎಂಬ ಭರ್ಜರಿ ಕೊಡುಗೆ.

ಸದ್ಯವೇ ಆಚರಿಸಲಿರುವ 64ನೆಯ ಸ್ವಾತಂತ್ರ್ಯೋತ್ಸವ (ಆಗಸ್ಟ್ 15) ಸಂದರ್ಭದಲ್ಲಿ ಗ್ರಾಹಕರಿಗೆ ನೀಡಿರುವ ಈ ಆಫರ್ ಕುರಿತಂತೆ ರಿಲಾಯನ್ಸ್ ಕಮ್ಯನಿಕೇಶನ್ ನ ಕರ್ನಾಟಕ ವಿಭಾಗದ ಮುಖ್ಯಸ್ಥರಾದ ಶ್ರೀ ಆರ್. ಸ್ವಾಮಿನಾಥನ್ ಹೀಗೆ ಹೇಳಿದ್ದಾರೆ

"ಸಾಮಾನ್ಯವಾಗಿ ಎಲ್ಲಾ ಜನರು ರಜಾ ದಿನಗಳಲ್ಲಿ ತಮ್ಮ ಕುಟುಂಬವರ್ಗ ಹಾಗೂ ಸ್ನೇಹಿತರೊಂದಿಗೆ ಹೆಚ್ಚು ಮಾತನಾಡಲು ಇಷ್ಟಪಡುತ್ತಾರೆ. ಹಾಗಾಗಿ ಈ ಸಮಯದಲ್ಲಿ ಗ್ರಾಹಕರಿಗೆ ಉಪಯೋಗವಾಗಲಿ ಎಂಬ ಸದುದ್ದೇಶದಿಂದ ಪ್ರತಿದಿನ, 64 ನಿಮಷಗಳ ಫ್ರೀ ಟಾಕ್ ಟೈಮ್ & ಫ್ರೀ ಎಸ್ ಎಮ್ ಎಸ್ ಸೇವೆ ನೀಡಲಿದ್ದೇವೆ. ಇದು ಕೇವಲ 64 ರು. ರಿಚಾರ್ಜ್ ಮಾಡುವ ಮೂಲಕ ಸಾಧ್ಯವಾಗಲಿದೆ"

ರಿಲಾಯನ್ಸ್ ಈ ಸೇವೆ ಆಗಸ್ಟ್ 10 ರಿಂದ ಮುಂದಿನ 10 ದಿನಗಳ ಕಾಲ ಜಾರಿಯಲ್ಲಿರುವ ಹಾಗೂ ಪ್ರೀಪೇಯ್ಡ್ ಗ್ರಾಹಕರಿಗೆ ಮಾತ್ರ ಲಭ್ಯವಿರುವ ಸೇವೆಯಾಗಿದೆ.

ಸರಿ, ಇನ್ನೇಕೆ ತಡ! ನೀವು ರಿಲಾಯನ್ಸ್ ಪ್ರೀಪೇಯ್ಡ್ ಗ್ರಾಹಕರಾಗಿದ್ದರೆ ಈಗಲೇ ಹತ್ತಿರದ ರಿಲಾಯನ್ಸ್ ರೀಚಾರ್ಜ್ ಮಳಿಗೆಗೆ ಹೋಗಿ 64 ರು. ರೀಚಾರ್ಜ್ ಮಾಡಿಸಿ 64 ನಿಮಷಗಳ ಮಾತು, 64 SMS ಗಳನ್ನು ಪ್ರತಿದಿನ ಫ್ರೀ ಆಗಿ ಪಡೆದು ನಿಜವಾದ ಸ್ವಾತಂತ್ರ್ಯ ಆಚರಿಸಿ. ನೋಡಿ, ರಿಲಾಯನ್ಸ್ ನೀಡುತ್ತಿದೆ ನಿಜವಾದ ಟಾಕ್ (ವಾಕ್) ಸ್ವಾತಂತ್ರ್ಯ!

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot