ಹ್ಯುವೈ 2 ಮೊಬೈಲುಗಳಲ್ಲಿ ನಿಮ್ಮ ಆಯ್ಕೆ ಯಾವುದು?

* ಹ್ಯುವೈ ಐಡಿಯೋಸ್ ಚಾಟ್ 2.6 ಇಂಚುಗಳ, ಟಚ್ & ಟೈಪ್ ಬಾರ್ ಫೊನ್ ಆಗಿದ್ದು QWERTY ಕೀ ಪ್ಯಾಡ್ ಹೊಂದಿದೆ. ಆದರೆ 3.7 ಇಂಚುಗಳ, ದೊಡ್ಡ ಹಾಗೂ ಅತ್ಯಾಧುನಿಕ ಕ್ಲೌಡ್ ತಂತ್ರಜ್ಞಾನದಂತಿರುವ ಎಕ್ಸ್ ಟ್ರಾ ಸ್ಕ್ರೀನ್ ಲಭ್ಯತೆಯಿರುವ ವಿಸನ್ 3D ಇಂಟರ್ ಫೇಸ್ ಕೂಡ ಹೊಂದಿದೆ.
* ಹ್ಯುವೈ ವಿಸನ್ 5 ಮೆಗಾ ಪಿಕ್ಸೆಲ್ ಕ್ಯಾಮೆರಾ, ಲೆಡ್ ಫ್ಲಾಶ್/ VGA ಸಾಮರ್ಥ್ಯ ಹೊಂದಿದ್ದು ಹೈ ಕ್ಲಾಸ್ ಗ್ರಾಹಕರನ್ನೂ ಆಕರ್ಷಿಸುವಂತಿದೆ. ಆದರೆ ಐಡಿಯೋಸ್ ಚಾಟ್ ಕೇವಲ 3.2 ಮೆಗಾ ಪಿಕ್ಸೆಲ್ ಕ್ಯಾಮೆರಾ, 720p ವಿಡಿಯೋ ರೆಕಾರ್ಡಿಂಗ್ ಹೊಂದಿದೆ.
* ಎರಡರಲ್ಲಿಯೂ 3G, ವೈ-ಫೈ, 2G ಇಂಟರ್ನೆಟ್ ಎಕ್ಸೆಸ್, ಬ್ಲೂ ಟೂಥ್, USB ಪಿಸಿ ಕನೆಕ್ಟಿವಿಟಿ ಹಾಗೂ ಆಂತರಿಕ ಮೆಮೊರಿಯೊಂದಿಗೆ 32 GB ಗೆ ವಿಸ್ತರಿಸಬಲ್ಲ ಮೆಮೊರಿ ಸೌಲಭ್ಯ ಕೂಡ ಲಭ್ಯವಿದೆ.
* ಐಡಿಯೋಸ್ ಚಾಟ್ ಗೆ ಹೋಲಿಸಿದರೆ ವಿಸನ್ ಅಧಿಕ ವೇಗ ಹಾಗೂ ಉತ್ಕೃಷ್ಟ ಸೇವಾಲಭ್ಯತೆಯೊಂದಿಗೆ ಮೇಲ್ಮಟ್ಟದಲ್ಲಿ ನಿಲ್ಲುತ್ತದೆ. ವಿಸನ್, ಆಂಡ್ರಾಯ್ಡ್ ಜಿಂಜರ್ ಬ್ರೆಡ್ ಮೂಲಕ ಕಾರ್ಯ ನಿರ್ವಹಿಸಿದರೆ ಚಾಟ್ ಈಕ್ಲೇರ್ OS ಹೊಂದಿದೆ.
* ಇನ್ನು ಅತಿ ಮುಖ್ಯವಾದ ಬೆಲೆಯ ವಿಷಯಕ್ಕೆ ಬಂದರೆ, ಚಾಟ್ ಬೆಲೆ, ರು. 7,449 ಹಾಗೂ ವಿಸನ್ ಬೆಲೆ ಹಾಗೂ ಬಿಡುಗಡೆಯ ದಿನಾಂಕ ಇನ್ನೂ ನಿರ್ಧಾರವಾಗಿಲ್ಲ. ಆದರೆ ಸಾಕಷ್ಟು ಒಳ್ಳೆಯ ಮತ್ತು ಹೆಚ್ಚು ವಿಶೇಷತೆಗಳಿಂದ ಕೂಡಿರುವ ವಿಸನ್ ಬೆಲೆ ಸ್ವಲ್ಪ ಜಾಸ್ತಿಯೇ ಆಗಬಹುದೆಂದು ಊಹಿಸಲಾಗಿದೆ. ನೋಡೋಣ! ಎಲ್ಲದರಂತೆ ಇದಕ್ಕೂ ಕಾಲವೇ ಉತ್ತರಿಸಲಿದೆ...


Click it and Unblock the Notifications








