Subscribe to Gizbot

ಸಲೋರ ಮೊಬೈಲ್ ಬರುತ್ತಿದೆ; ಹಲೋ ಎಲ್ಲಿದ್ದೀರಾ!

Posted By: Super

ಸಲೋರ ಮೊಬೈಲ್ ಬರುತ್ತಿದೆ; ಹಲೋ ಎಲ್ಲಿದ್ದೀರಾ!
ಸಲೋರ ಇಂಟರ್ ನ್ಯಾಷನಲ್ ಭಾರತೀಯ ಎಲೆಕ್ಟ್ರಾನಿಕ್ಸ್ ಮಾರುಕಟ್ಟೆಯಲ್ಲಿ ಪ್ರಸಿದ್ಧ ಹೆಸರು. ಈ ಕಂಪೆನಿ, ಹೊಸ ಮೊಬೈಲ್ "ಸಲೋರ ಎಸ್ ಎಮ್ 401" ಬಿಡುಗಡೆ ಮಾಡುವ ಮೂಲಕ ಮೊಬೈಲ್ ಉತ್ಪಾದನೆ ಹಾಗೂ ಮಾರಾಟರಂಗಕ್ಕೆ ಧುಮುಕಲಿದೆ.

ಮ್ಯಾಕ್ಸ್ ಮೊಬೈಲ್ ರೂಪಕ್ಕೆ ಹೋಲಿಕೆಯಿರುವ ಈ ಸಲೋರ ಮೊಬೈಲ್, ಬಾರ್ ಆಕಾರದ ಟ್ರೆಂಡಿ ಡಿಸೈನ್ ಹೊಂದಿದೆ. ಸಾಕಷ್ಟು ವಿಶೇಷವಾದ ಹೆಚ್ಚು ಫೀಚರ್ಸ್ ಹಾಗೂ ಕಡಿಮೆ ಬೆಲೆ ಬರಲಿರುವ ಈ ಮೊಬೈಲ್ ವಿಶೇಷತೆಯಾಗಿದೆ.

ಈ ಮೊಬೈಲ್ ಒಳಗೊಂಡಿರುವ ವಿಶೇಷತೆಗಳು:

* 1.3 ಮೆಗಾ ಪಿಕ್ಸೆಲ್ ಕ್ಯಾಮೆರಾ
* ಜಾವಾ
* ಬ್ಲೂ ಟೂಥ್
* ಮೈಕ್ರೋ SD ಕಾರ್ಡ್ ಮೂಲಕ ವಿಸ್ತರಿಸಬಹುದಾದ 16 GB ಮೆಮೊರಿ
* MP3 & ವಿಡಿಯೋ ಪ್ಲೇಯರ್
* ಕೆ ಸಿರೀಸ್ ಆಂಪ್ಲಿಪಾಯರ್
* ಟಾರ್ಚ್ ಲೈಟ್

ಇದರ ಬೆಲೆ ಕೇವಲ ರು. 2,499. ಆದರೆ ಸಾಕಷ್ಟು ವಿಶೆಷತೆಗಳಿವೆ. ಕಡಿಮೆ ಬೆಲೆ ಹಾಗೂ ಹೆಚ್ಚಿನ ಫೀಚರ್ಸ್ ಹೊಂದಿರುವುದರಿಂದ ಸಹಜವಾಗಿಯೇ ಇದು ಗ್ರಾಹಕನ್ನು ಆಕರ್ಷಿಸಿ ಮಾರುಕಟ್ಟೆಯಲ್ಲಿ ಬಿಸಿ ಕೇಕ್ ನಂತೆ ಖಾಲಿಯಾಗುವುದರಲ್ಲಿ ಸಂದೇಹ ಇಲ್ಲ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot