ಇಲ್ಲಿವೆ 2 ಮೊಬೈಲುಗಳು; ಯಾವುದು ನಿಮ್ಮ ಕೈನಲ್ಲಿ!

Posted By: Staff

ಇಲ್ಲಿವೆ 2 ಮೊಬೈಲುಗಳು; ಯಾವುದು ನಿಮ್ಮ ಕೈನಲ್ಲಿ!
ಇಲ್ಲಿವೆ ಎರಡು ಮೊಬೈಲುಗಳ ವಿಶೇಷತೆಗಳ ಪಟ್ಟಿ. ಹೋಲಿಸಿಕೊಳ್ಳಲು ನಿಂತಿರುವ 2 ಮೊಬೈಲುಗಳು, ಸೋನಿ ಎರಕ್ಸನ್ Txt Pro & ಎಚ್ ಟಿ ಸಿ ChaCha.

ಒನ್ ಟಚ್ ಫೆಸ್ ಬುಕ್ ಬಟನ್, ಗ್ರೂಫ್ ಚಾಟಿಂಗ್, ವೇಗ ಹಾಗೂ ಸುಲಭ ಸಾಧ್ಯತೆಗಳ ಸಂಗಮ, ಫೊಟೋ ಅಪ್ ಲೋಡ್ಸ್ ಶೇರಿಂಗ್ ಎಲ್ಲವೂ ಹೊಂದಿರುವ ಎಚ್ ಟಿ ಸಿ ಚಾಚಾ ಗೆ ಸರಿಸಮಾನವಾಗಿ ಅಲ್ಲದೇ ಮಿಗಿಲಾದ ವಿಶೇಷತೆಗಳಿಂದ ತಯಾರಿಸಲ್ಪಟ್ಟಿದೆ, ಸೋನಿ ಎರಕ್ಸನ್ Txt Pro.

* ಎರಡರಲ್ಲೂ QWERTY ಕೀ ಪ್ಯಾಡ್, ಕಟಿಂಗ್ ಎಡ್ಜ್ ವೈ-ಫೈ ಇದೆ.

* 5 ಮೆಗಾ ಪಿಕ್ಸೆಲ್ ಕ್ಯಾಮೆರಾ ಹೊಂದಿರುವ ಚಾಚಾ 3.2 ಮೆಗಾ ಪಿಕ್ಸೆಲ್ ಕ್ಯಾಮೆರಾ ಹೊಂದಿರುವ Txt Pro ಗಿಂತ ಉತ್ತಮ ಎನ್ನಿಸಿದರೂ ಒನ್ ಟಚ್ ಸೋಷಿಯಲ್ ನೆಟ್ವರ್ಕಿಂಗ್ ಮೇಲೆ ಗಮನಹರಿಸಿರುವ ಸೋನಿ ಎರಕ್ಸನ್ ಕಡಿಮೆ ಎನ್ನಿಸುವುದೇ ಇಲ್ಲ.

* ಮಲ್ಲಿಮೀಡಿಯಾದಲ್ಲಿ ಸಾಕಷ್ಟು ಅತ್ಯಾಧುನಿಕ ಸೌಲಭ್ಯಗಳನ್ನು ಎರಡೂ ಹೊಂದಿರುವುದರಿಂದ ಯಾವುದೂ ನಿರಾಶೆ ಮೂಡಿಸುವುದಿಲ್ಲ.

* USB ಸಹಕಾರ, USB ಮಾಸ್ ಸ್ಟೋರೇಜ್, ಮೈಕ್ರೋ USB ಸಹಕಾರ, ಬ್ಲೂ ಟೂಥ್, 3.5 mm ಆಡಿಯೋ ಜ್ಯಾಕ್ ಇವೆಲ್ಲ ಚಾಚಾದಲ್ಲಿದೆ. ಸೋನಿ ಎರಕ್ಸ್ನ್ ಕೂಡ ಇವೆಲ್ಲ ಹೊಂದಿದೆ.

* ಇನ್ನು ಅತೀ ಮುಖ್ಯವಾಗಿ ಬೆಲೆಯ ಕಡೆ ಕಣ್ಣು ಹಾಯಿಸಿದರೆ, ಚಾಚಾ ರು. 14,700 ಹಾಗೂ Txt Pro ರು. 15,200. ಸೋನಿ ಎರಿಕ್ಸನ್ ಸ್ಪರ್ಧೆಯಲ್ಲಿ ಗೆಲ್ಲುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿವೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot