ಬರಲಿದೆ ನೋಕಿಯಾ ಸೀ ರೇ; ತರಲಿದೆ ಮುಖದಲ್ಲಿ ಮುಗುಳ್ನಗೆ

Posted By: Staff

ಬರಲಿದೆ ನೋಕಿಯಾ ಸೀ ರೇ; ತರಲಿದೆ ಮುಖದಲ್ಲಿ ಮುಗುಳ್ನಗೆ
ಕೊನೆಗೂ ಸಿಗಲೇಬೇಕಾಗಿದ್ದ ಸುದ್ದಿಯೊಂದು ಸಿಕ್ಕಿದೆ. ನೋಕಿಯಾ ಹೊಸ ಫೊನ್ "ಸೀ ರೇ" ಬಿಡುಗಡೆಯಾಗುವುದು ಪಕ್ಕಾ ಆಗಿದೆ. ಇದು ತೀರಾ ಅತ್ಯಾಧುನಿಕವಾಗಿದೆ ಎಂಬ ವದಂತಿಯಿಂದಲೇ ಎಲ್ಲಾ ಮೊಬೈಲ್ ಕಂಪೆನಿಗಳ ನಿದ್ದೆ ಸದ್ಯಕ್ಕೆ ಹಾರ ಹೋಗಿದೆ.

ಸದ್ಯಕ್ಕೆ ಅತ್ಯಂತ ಹೆಚ್ಚು ಚಾಲ್ತಿಯಲ್ಲಿರುವ ಮೊಬೈಲ್ OS ಆಂಡ್ರಾಯ್ಡ್ ಗಿಂತ ಆಧುನಿಕವಾಗಿರುವ ವಿಂಡೋಸ ಫೊನ್ 7 aka ಮ್ಯಾಂಗೋ OS ನಿಂದ ತಯಾರಿಸಲಾಗಿರುವ ಈ ಫೊನ್ ಸದ್ಯಕ್ಕೆ ಜನರು ಅತ್ಯಂತ ನಿರೀಕ್ಷೆ ಇಟ್ಟುಕೊಂಡಿರುವ ಮೊಬೈಲ್. ಇದನ್ನು ನೋಕಿಯಾ N9 ಎಂದೂ ಕರೆಯಲಾಗಿದೆ.

ಅದರಲ್ಲಿರುವ ವಿಶೇಷತೆಗಳು ಹೀಗಿವೆ:
* ವಿಂಡೋಸ್ ಫೊನ್ 7 aka ಮ್ಯಾಂಗೋ OS
* 8 ಮೆಗಾ ಪಿಕ್ಸೆಲ್ ಕ್ಯಾಮೆರಾ
* 1080p ವಿಡಿಯೋ ರೆಕಾರ್ಡಿಂಗ್
* 3G, ವೈ-ಫೈ & ಬ್ಲೂ ಟೂಥ್
* ಮಲ್ಟಿ ಫಾರ್ಮೆಟ್ ವಿಡಿಯೋ ಪ್ಲೇಯರ್
* ದೊಡ್ಡ ಗೋರಿಲ್ಲಾ ಗ್ಲಾಸ್ ಡಿಸ್ ಪ್ಲೇ
* ಹೈ ಡೆಫನಿಷನ್ h263 and h264 vವಿಡಿಯೋ ಫಾರ್ಮೆಟ್ಸ್
* MP3, MP4, AVI, WMV, WAV, AAC+

ಹೀಗೆ ಎಷ್ಟೆಲ್ಲಾ ವಿಷೇಶತೆಗಳಿಂದ ಕೂಡಿರುವ ಈ ಹೊಸ ನೋಕಿಯಾ ಸೀ ರೇ ಬಿಡುಗಡೆಯ ವಿಷಯ ಕಂಪೆನಿ ಕಡೆಯಿಂದ ಇನ್ನೂ ಧೃಡಪಟ್ಟಿಲ್ಲ. ಆದರೆ ಅದು ಜಗತ್ತಿನಲ್ಲೆಲ್ಲಾ ಈಗಾಗಲೇ ಸುದ್ದಿಯಾಗಿ ಅಲ್ಲೋಲಕಲ್ಲೋಲ ಉಂಟುಮಾಡುತ್ತಿದೆ. ಇನ್ನು ಬಿಡುಗಡೆಯಾದ ಮೇಲೆ ಅದರ ಮಾರಾಟ ಹಾಗೂ ಯಶಸ್ಸಿನ ಬಗ್ಗೆ ಊಹಿಸಿದರೂ ಅರಿವಾಗುತ್ತದೆ ಇದು ಹೊಸ ದಾಖಲೆ ಮಾಡಲಿದೆ ಎಂಬುದು.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot