ಚಾಚಾ-ಗೆಲಾಟೋ ಮೊಬೈಲುಗಳಲ್ಲಿ ನಿಮಗೆ ಯಾವುದಿಷ್ಟ!

Posted By: Staff

ಚಾಚಾ-ಗೆಲಾಟೋ ಮೊಬೈಲುಗಳಲ್ಲಿ ನಿಮಗೆ ಯಾವುದಿಷ್ಟ!
ಇಲ್ಲೆರಡು ಮೊಬೈಲ್ ಗಳಿವೆ. ಹೋಲಿಸಿ ನೋಡಿದಾಗ ಯಾವುದು ಒಳ್ಳೆಯದೆಂದು ನೀವೇ ತಿರ್ಮಾನಿಸಬಹುದು. ಅವು ಎಚ್ ಟಿ ಸಿ ಚಾಚಾ ಮತ್ತು ಎಲ್ ಜಿ ಗೆಲೆಟೊ. ಯಾವುದರಲ್ಲಿ ಏನೇನು ವಿಶೇಷತೆಗಳಿವೆ ಎಂಬ ವಿವರ ಕೆಳಗಿದೆ, ನೋಡಿ.

ವಿಶೇಷತೆಗಳು:
* ಟಚ್ ಸ್ಕ್ರೀನ್ ಬೇಸ್ಡ್ ಸ್ಮಾರ್ಟ್ ಫೋನ್ ಆಗಿರುವ ಎಚ್ ಟಿ ಸಿ ಚಾಚಾ, ಫೇಸ್ ಬುಕ್ ಬಟನ್ ಗೆ ಸಿಂಗಲ್ ಟಚ್ ಮಾಡಿ ಉಪಯೋಗಿಸಬಹುದಾದ ಸಾಧನ. ಆದರೆ ಎಲ್ ಜಿ ಗೆಲೆಟೊ ಫೇಸ್ ಬುಕ್ ಸ್ಪೆಷಲಿಸ್ಟ್ ಅಲ್ಲವಾದರೂ ಸೋಷಿಯಲ್ ನೆಟ್ ವರ್ಕಿಂಗ್ ಮತ್ತು ವೈರ್ ಲೆಸ್ ಕಮ್ಯುನಿಕೇಶನ್ ಆಯ್ಕೆ ಚೆನ್ನಾಗಿದೆ


* ಚಾಚಾ ಟಚ್ ಸ್ಕ್ರೀನ್ ಜೊತೆಗೆ QWERTY ಕೀ ಪ್ಯಾಡ್ ಹೊಂದಿದೆ. ಆದರೆ ಗೆಲೆಟೊ ಏನೇನು ಹೊಂದಿದೆ ಎಂಬ ಸ್ಪಷ್ಟ ಮಾಹಿತಿ ಲಭ್ಯವಿಲ್ಲ.


* ಚಾಚಾ ದಲ್ಲಿ ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್ OS ಇದೆ. ಜೊತೆಗೆ 2G/3G ನೆಟ್ ವರ್ಕ ಕೂಡ. ಇದರ ಆಕಾರ, ವಿನ್ಯಾಸ, ಸುಂದರವಾಗಿದೆ. ಇದು 114.4 X 64.6 X 10.7 mm ಅಳತೆ ಮತ್ತು 120 gram ಭಾರ ಇದೆ. ಆದರೆ ಗೆಲೆಟೊ, 4.5 X 2.3 X 58 ಅಳತೆ ಹೊಂದಿದೆ ಎಂದು ಹೇಳಲಾಗಿದೆ.

* ಗೆಲೆಟೊ TFT ಕೆಪಾಕ್ಟಿವ್ ಸ್ಕ್ರೀನ್, 3.2 ಇಂಚ್ ಅಳತೆ, 320 X 240 ಪಿಕ್ಸೆಲ್ ರೆಸೊಲ್ಯೂಷನ್ ಹೊಂದಿದ್ದರೆ ಚಾಚಾ, 2.6 ಇಂಚ್ TFT ಟಚ್ ಸ್ಕ್ರೀನ್, 256 k ಬಣ್ಣಗಳಲ್ಲಿ ಲಭ್ಯವಿದೆ. ಜೊತೆಗೆ 600 MHz ಪ್ರೊಸೆಸರ್ ಹೊಂದಿದೆ.


* ಚಾಚಾ, 5 ಮೆಗಾ ಪಿಕ್ಸೆಲ್ ಕ್ಯಾಮೆರಾ, 2592 X 1944 ರೆಸೊಲ್ಯೂಷನ್, ಲೆಡ್ ಫ್ಲಾಶ್, VGA ಫ್ರಂಟ್ ಕ್ಯಾಮೆರಾ ಹೊಂದಿದೆ. ಆದರೆ ಗೆಲೆಟೊ, 3.2 ಮೆಗಾ ಪಿಕ್ಸೆಲ್ ಕ್ಯಾಮೆರಾ, 2048 X 1536 ರೆಸೊಲ್ಯೂಷನ್ ಇದೆ.


* ಚಾಚಾ, ಬ್ಲೂ ಟೂಥ್ 2.1 ಆವೃತ್ತಿ, A2DP ಹೊಂದಿದ್ದರೆ ಗೆಲೆಟೊ ಇವುಗಳ ಜೊತೆಗೆ ಮೈಕ್ರೋ USB ಪ್ರಾವಿಸನ್ ಹೊಂದಿದೆ. GPRS & EDGE ಎರಡರಲ್ಲೂ ಲಭ್ಯವಿದೆ.


* ಇನ್ನು ಬೆಲೆಯ ವಿಷಯ. ಈಗಾಗಲೇ ಮಾರುಕಟ್ಟೆಯಲ್ಲಿರುವ ಚಾಚಾ ಬೆಲೆ ರು. 14,999. ಆದರೆ ಗೆಲೆಟೊ ಬೆಲೆ ಮತ್ತು ಬಿಡುಗಡೆಯ ದಿನಾಂಕ ಇನ್ನೂ ನಿರ್ಧಾರವಾಗಿಲ್ಲ.

ಹೀಗಿರುವಾಗ ನೀವು ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೀರಿ. ಇರುವುದೊಂದು, ಬರುವುದೊಂದು. ಒಂದನ್ನು ಕೊಂಡು ಇನ್ನೊಂದು ಕೊಳ್ಳುವ ಕನಸು ಕಾಣುವುದು ಒಳ್ಳೆಯದು.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot