ಹೋಯ್ ಇದು ಹ್ಯುವಾಯಿ ಇಡಿಯೋಸ್ ಮೊಬೈಲ್

Posted By: Staff

ಹೋಯ್ ಇದು ಹ್ಯುವಾಯಿ ಇಡಿಯೋಸ್ ಮೊಬೈಲ್
ಕೆಲವು ಮೊಬೈಲ್ ಕಂಪನಿಗಳು ತುಂಬಾ ಚಿರಪರಿಚಿತ. ಆದರೆ ಹ್ಯುವಾಯಿ ಹೆಚ್ಚಿನವರಿಗೆ ಹಂಡ್ರೆಡ್ ಪರ್ಸೆಂಟ್ ಅಪರಿಚಿತ. ಇಂತಿಪ್ಪ ಹ್ಯುವಾಯಿ ಕಂಪನಿಯೊಂದು ದೇಶದ ಮಾರುಕಟ್ಟೆಗೆ ನೂತನ ಮೊಬೈಲ್ ಫೋನೊಂದನ್ನು ಪರಿಚಯಿಸಿದೆ. ಇದರ ಹೆಸರು ಹ್ಯುವಾಯಿ ಇಡಿಯೊಸ್ ಎಕ್ಸ್5 ಉ8800.

ನೂತನ ಹ್ಯವಾಯಿ ಮೊಬೈಲ್ ಹತ್ತಿಯಷ್ಟು ಹಗುರ. ಇದರ ತೂಕ ಕೇವಲ 130 ಗ್ರಾಂ. ಗೂಗಲ್ ಆಂಡ್ರಾಯ್ಡ್ 2.2.2 ಇದರಲ್ಲಿರುವ ಸಾಫ್ಟ್ ವೇರ್. ಈ ಸಾಫ್ಟ್ ವೇರ್ ಇರುವುದರಿಂದ ನಿರೀಕ್ಷೆಗಿಂತ ಸ್ವಲ್ಪ ಫಾಸ್ಟ್ ಆಕ್ಸೆಸ್ ಮಾಡಬಹುದಾಗಿದೆ.

ಇದರ RAM ಸಾಮರ್ಥ್ಯ 512 ಎಂಬಿ. ROM ಸಾಮರ್ಥ್ಯ 13.7 ಜಿಬಿ. ಈ ಫೋನ್ 3.8 ಇಂಚಿನ ಡೈಗ್ನಾಲ್ ಡಿಸ್ ಪ್ಲೇ ಹೊಂದಿದೆ. ಸ್ಟಿರಿಯೊ ಇನ್ ಬುಲ್ಟ್ ಮೈಕ್ರೊ ಫೋನ್ ಮತ್ತು ಮೊನೊ ಲೌಡ್ ಸ್ಪೀಕರ್ ಗಳಿಂದ ಇದರಲ್ಲಿ ಸೂಪರ್ಬ್ ಆಗಿ ಸಂಗೀತ ಕೇಳಬಹುದಾಗಿದೆ. ಇದಕ್ಕೆ 3.33 ಮಿ.ಮಿ. ಜಾಕ್ ಅಳವಡಿಸಬಹುದಾಗಿದೆ.

ಈ ಫೋನ್ GSM850, GSM900, GSM1900, UMTS900 AND an UMTS2100 ಮುಂತಾದ ಸೆಲ್ಯುಲಾರ್ ನೆಟ್ ವರ್ಕ್ ಗಳಿಗೆ ಸಪೋರ್ಟ್ ಮಾಡುತ್ತದೆ. ಈ ಫೋನಲ್ಲಿ ಜಿಪಿಆರ್ಎಸ್ ಸೌಲಭ್ಯವೂ ಇದೆ. ನೂತನ ಫೋನ್ ನ ದರವನ್ನು ಕಂಪನಿ ಇನ್ನೂ ಬಹಿರಂಗಪಡಿಸಿಲ್ಲ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot