ಮೋಟೋರೊಲಾ-ಎಚ್ ಟಿ ಸಿ ಈ ಮೊಬೈಲುಗಳು ಅವಳಿಯಲ್ಲ

Posted By: Staff

ಮೋಟೋರೊಲಾ-ಎಚ್ ಟಿ ಸಿ ಈ ಮೊಬೈಲುಗಳು ಅವಳಿಯಲ್ಲ
ಇಲ್ಲೆರಡು ಮೊಬೈಲುಗಳ ಹೋಲಿಕೆಯಿದೆ. ಹೋಲಿಕೆಯಲ್ಲಿ ಭಾಗಿಯಾಗಿರುವ ಮೊಬೈಲ್ ಗಳು- ಮೋಟೋರೊಲಾ ಡೆಫಿ ಪ್ಲಸ್ & ಎಚ್ ಟಿ ಸಿ ಡಿಸೈರ್ ಎಸ್.

ಮೋಟೋರೊಲಾ ಇತ್ತೀಚಿಗಷ್ಟೇ ಬಿಡುಗಡೆ ಘೋಷಿಸಿರುವ ಹೊಸ ಮೊಬೈಲ್ ಡೆಫಿ ಪ್ಲಸ್ ಅತ್ಯಾಧುನಿಕ ಟಚ್ ಸ್ಕ್ರೀನ್ ಜೊತೆಗೆ ಸಾಕಷ್ಟು ಫೀಚರ್ಸ್ ಕೂಡ ಹೊಂದಿದೆ.

* ಎರಡರಲ್ಲೂ ಫಿಚರ್ಸಗಳಲ್ಲಿ ಸಾಕಷ್ಟು ಹೋಲಿಕೆಯಿದೆ. ಮಲ್ಟಿ ಟಚ್ ಸ್ಕ್ರೀನ್, ಹೈ ಕ್ಲಾರಿಟಿ, 5 MP ರೆಸೊಲ್ಯೂಷನ್, 2G & 3G ನೆಟ್ ವರ್ಕ್ಸ ಎರಡರಲ್ಲೂ ಇದೆ.

* GPRS & EDGE, ವೈ-ಫೈ, ಹೈ ಎಂಡ್ ಕನೆಕ್ಟಿವಿಟಿ, ಬ್ಲೂ ಟೂಥ್ USB ಕೆನೆಕ್ಟಿವಿಟಿ ಎರಡರಲ್ಲೂ ಇದೆ.

* ಎರಡರಲ್ಲೂ ಇರುವ ಇನ್ನೋಂದು ಸಾಮ್ಯತೆಯೆಂದರೆ ಆಂಡ್ರಾಯ್ಡ್ 2.3 HTML ಬ್ರೌಸರ್.

* ಮೋಟೋರೊಲಾ ಡೆಫಿ ಪ್ಲಸ್ CPU of 1GHz ಹೊಂದಿದ್ದರೆ ಡಿಸೈರ್, 1 GHz ಕ್ಯುಲ್ ಕಾಮ್ 8255 Snapdragon ಹೊಂದಿದೆ.

* ಬ್ಯಾಟರಿ ಬ್ಯಾಕಪ್ ವಿಷಯದಲ್ಲಿ ಡಿಸೈರ್ ಚೆನ್ನಾಗಿದೆ. 430 ತಾಸುಗಳು ಹಾಗೂ 590 ನಿಮಿಷಗಳನ್ನು ಇದು ಹೊಂದಿದೆ. ಆದರೆ ಡೆಫಿ ಪ್ಲಸ್ 426 ತಾಸು ಹಾಗೂ 384 ನಿಮಿಷಗಳನ್ನಷ್ಟೇ ಹೊಂದಿದೆ.

* 3.7 ಇಂಚುಗಳ TFT ಕೆಪಾಕ್ಟಿವ್ ಟಚ್ ಸ್ಕ್ರೀನ್ ಎರಡರಲ್ಲೂ ಇದೆ. ಇವೆರಡೂ ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯಾಧುನಿಕ ಮೊಬೈಲುಗಳಾಗಿವೆ.

* ಎಚ್ ಟಿ ಸಿ ಡಿಸೈರ್ ಬೆಲೆ ರು. 22,399. ಆದರೆ ಇನ್ನೂ ಬೆಲೆ ನಿಗದಿಯಾಗಿಲ್ಲದ ಕಾರಣ ಸುಮಾರು ರು. 20,000 ಇರಬಹುದೆಂದು ಅಂದಾಜಿಸಲಾಗಿದೆ.

ಎರಡನ್ನೂ ಒಟ್ಟಿಗೆ ಮಾರುಕಟ್ಟೆಯಲ್ಲಿ ನೋಡಿ ಹೋಲಿಕೆ ಮಾಡಿ ಯಾವುದು ನಿಮಗಿಷ್ಟ ಎಂಬುದನ್ನು ನಿರ್ಧಾರ ಮಾಡಿ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot