ಸ್ಯಾಮ್ ಸಂಗ್ ತರುತ್ತಿದೆ ಹೊಸ ತಂತ್ರಜ್ಞಾನದ ಮೊಬೈಲ್

Posted By: Staff

ಸ್ಯಾಮ್ ಸಂಗ್ ತರುತ್ತಿದೆ ಹೊಸ ತಂತ್ರಜ್ಞಾನದ ಮೊಬೈಲ್
ಸ್ಯಾಮ್ ಸಂಗ್ ತರುತ್ತಿರುವ ಫೊನ್ ನಲ್ಲಿ HD ಸ್ಕ್ರೀನ್ ಜೊತೆ AMOLED ಡಿಸ್ ಪ್ಲೇ ಕೂಡ ಇರಲಿದೆ. ದೊರೆತಿರುವ ಮಾಹಿತಿಯ ಪ್ರಕಾರ ಮುಂದಿನ ವರ್ಷದಲ್ಲಿ ಸ್ಯಾಮ್ ಸಂಗ್ ಈ ರೀತಿಯ 6 ಫೊನ್ ಗಳನ್ನು ಮಾರುಕಟ್ಟೆಗೆ ಬಿಡಲಿದೆ.

ಜೊತೆಗೆ ವಿಂಡೋಸ್ ಫೊನ್ 7.5 ಮ್ಯಾಂಗೋಸ್ ಮತ್ತು BADA ಸಾಪ್ಟ್ ವೇರ್ ಮೂಲಕ ತಯಾರಿಸಲಾಗುವ ಫೊನ್ ಕೂಡ ಸ್ಯಾಮ್ ಸಂಗ್ ನಿಂದ ಬರಲಿದೆ.

ಇದೀಗ ಎಂಟ್ರಿ ಲೆವೆಲ್ ನಲ್ಲಿ ಹೊರತರಲು ಯೋಚಿಸಿರುವ ಫೋನ್ GT-5360.

ಇದರಲ್ಲಿರುವ ವಿಶೇಷತೆಗಳು:
3 ಇಂಚ್ ಡಿಸ್ ಪ್ಲೇ, 240X 320 ಸ್ಕ್ರೀನ್ ರೆಸೊಲ್ಯೂಷನ್, 2 MP ಕ್ಯಾಮೆರಾ, ಆಂಡ್ರಾಯ್ಡ್ 2.3.3 OS, 1.4 GHz ಪ್ರೊಸೆಸರ್, 4 GB ಆಂತರಿಕ ಮೆಮೊರಿ ಇದರಲ್ಲಿದೆ.

5 MP HD ವಿಡಿಯೋ ರೆಕಾರ್ಡಿಂಗ್ ಹೊಂದಿರುವ ಇಕ್ಯುಪ್ಡ್ ಸ್ಮಾರ್ಟ್ ಫೊನ್ ಇದಾಗಲಿದೆ. ಮ್ಯಾಗ್ನಿಫಿಸಿಯಂಡ್ 1280 X 720 HD ರೆಸೊಲ್ಯೂಷನ್, ಇದರ ವಿಶೇಷತೆ ಅತಿ ದೊಡ್ಡ AMOLED ದೊಡ್ಡ (1280 X 720) ಡಿಸ್ ಪ್ಲೇ ಹಾಗೂ GT-i19220 ಇರುವುದು.

ಅಂತೂ ಮೊಬೈಲ್ ಮಾರುಕಟ್ಟೆಯ ಸ್ಪರ್ಧೆಯಲ್ಲಿ ಈಗಾಗಲೇ ಉತ್ತುಂಗದಲ್ಲಿರುವ ಸ್ಯಾಮ್ ಸಂಗ್ ಇನ್ನೂ ಮೇಲಕ್ಕೇರುವುದು ಗ್ಯಾರಂಟಿ. ಊಲಿದ ಕಂಪೆನಿಗಳಿಗೆ ಬರಬಹುದೇ ಜ್ವರ!

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot