ಎಚ್ ಟಿ ಸಿ ಜೋಡಿ ಮೊಬೈಲ್ ಗಳು ಬರುತ್ತಿವೆ ದಾರಿ ಬಿಡಿ

Posted By: Staff

ಎಚ್ ಟಿ ಸಿ ಜೋಡಿ ಮೊಬೈಲ್ ಗಳು ಬರುತ್ತಿವೆ ದಾರಿ ಬಿಡಿ
ಎಚ್ ಟಿಸಿ ಕಂಪೆನಿ ಜಗತ್ತಿನಾದ್ಯಂತ ಪ್ರಖ್ಯಾತವಾಗಿರುವ ಕಂಪೆನಿ. ವಿಂಡೋಸ್ ಫೊನ್ 7 ಮ್ಯಾಂಗೋ OS ಆಧಾರಿತ 2 ಮೊಬೈಲ್ ಫೋನ್ ಗಳನ್ನು ಎಚ್ ಟಿ ಸಿ ಸದ್ಯದಲ್ಲೇ ಬಿಡುಗಡೆ ಮಾಡಲಿದೆ.


ಈ ಫೊನ್ ಗಳಿಗೆ ಇಡಲಾಗಿರುವ ಹೆಸರು ಎಚ್ ಟಿಸಿ ಇಗ್ನೈಟ್ ಹಾಗೂ ಎಚ್ ಟಿಸಿ ಪ್ರೈಮ್. ಎರಡೂ ಫೋನುಗಳಲ್ಲಿ ಮೆನು ಪ್ರಾರಂಭಿಸಲು ವಿಂಡೋಸ್ ಬಟನ್ ಇಡಲಾಗಿದೆ.

ಈ ಫ್ರಂಟ್ ಬಟನ್ ಕೆಪಾಕ್ವಿವ್ ರೀತಿಯಲ್ಲಿ ಇರಬಹುದಾದ ಸಾಧ್ಯತೆಯಿದೆ. ಎಚ್ ಟಿಸಿ ಇಗ್ನೈಟ್ ಇದು ಮೊಜಾರ್ಟ್ ನಂತಿದ್ದು ದೊಡ್ಡ 3.7 ಇಂಚ್ WVGA ಫುಲ್ ಟಚ್ ಸ್ಕ್ರೀನ್ ಹೊಂದಿದೆ. ಇಗ್ನೈಟ್ 1 GHz ಪ್ರೊಸೆಸರ್ ಹೊಂದಿದ್ದು 5 ಮೆಗಾ ಪಿಕ್ಸೆಲ್ ಕ್ಯಾಮೆರಾ, 720p ವಿಡಿಯೋ ರೆಕಾರ್ಡಿಂಗ್ ಹೊಂದಿದೆ.

ಇನ್ನು ಪ್ರೈಮ್ ನಲ್ಲಿ 3.7 ಇಂಚ್ಉಗಳ ಕೆಪಾಕ್ಟಿವ್ ಫುಲ್ ಟಚ್ ಸ್ಕ್ರೀನ್ ಡಿಸ್ ಪ್ಲೇ ಇದ್ದು QWERTY ಕೀ ಪ್ಯಾಡ್ ಹೊಂದಿದೆ. ಇದೂ ಕೂಡ 5 ಮೆಗಾ ಪಿಕ್ಸೆಲ್ ಕ್ಯಾಮೆರಾ ಹೊಂದಿದೆ. HD ವಿಡಿಯೋ ರೆಕಾರ್ಡಿಂಗ್ ಸೌಲಭ್ಯ ಕೂಡ ಇದರಲ್ಲಿದೆ. ಆದರೆ ಈ ವಿಷಯವಾಗಿ ಪ್ರೈಮ್ ಬಗ್ಗೆ ಮಾಹಿತಿ ಇಲ್ಲ.

ಈ ಎರಡೂ ಫೋನುಗಳೂ ಸದ್ಯದಲ್ಲಿಯೇ ಮಾರುಕಟ್ಟೆಗೆ ಬರಲಿವೆ. ಈ ಕ್ಷಣದಲ್ಲಿ ಅವುಗಳ ಬೆಲೆಯ ಬಗ್ಗೆ ಮಾಹಿತಿ ಇಲ್ಲವಾದರೂ ಈಗಿರುವ ಎಲ್ಲಾ ವಿಂಡೋಸ್ ಫೋನುಗಳಿಗಿಂತ ಕಡಿಮೆ ದರ ಇರುವ ನಿರೀಕ್ಷೆಯಿದೆ.

ಸ್ವಲ್ಪೇ ದಿನ ಕಾಯುವುದಕ್ಕೆ ನೀವು ರೆಡಿ ತಾನೇ!

Please Wait while comments are loading...
Opinion Poll

Social Counting